ರಾಮನವಮಿ ಉತ್ಸವ ಹಿಂದೂ ಉತ್ಸವವಾಗಲಿ: ಶಿವು ಲೋಖಂಡೆ

| Published : Apr 20 2024, 01:01 AM IST / Updated: Apr 20 2024, 01:02 AM IST

ರಾಮನವಮಿ ಉತ್ಸವ ಹಿಂದೂ ಉತ್ಸವವಾಗಲಿ: ಶಿವು ಲೋಖಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿ ಪಟ್ಟಣದ ರಾಮ ಮಂದಿರ ಕಲ್ಯಾಣ ಮಂಟಪದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಅಯೋಜಿಸಿದ್ದ ರಾಮ ನವಮಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಶಿವು ಲೋಖಂಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಪಟ್ಟಣದಲ್ಲಿ ಮೇ.1ರಂದು ಆಚರಿಸುವ ರಾಮನವಮಿ ಉತ್ಸವವು ಹಿಂದೂ ಉತ್ಸವವಾಗಿ ಪರಿವರ್ತನೆ ಯಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಪ್ರಮುಖ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಶಿವು ಲೋಖಂಡೆ ಹೇಳಿದರು.

ಪಟ್ಟಣದ ರಾಮಮಂದಿರ ಕಲ್ಯಾಣ ಮಂಟಪದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಆಯೋಜಿಸಿದ್ದ ರಾಮನವಮಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತಿ, ಮತ ಭೇದ ಬಿಟ್ಟು, ಎಲ್ಲಾ ಹಿಂದೂಗಳು ಒಂದಾದರೆ ದೇಶದ ಪ್ರಗತಿ ಸಾಧ್ಯ. ಈ ವರ್ಷದ ರಾಮ ನವಮಿಯನ್ನು ಎಲ್ಲರೂ ಒಗ್ಗಟ್ಟಾಗಿ ವಿಜೃಂಭಣೆಯಿಂದ ಆಚರಿಸಬೇಕೆಂದರು.

ಏ.30 ರಂದು ಮಹಿಳೆಯರಿಂದ ಬೈಕ್ ರ್‍ಯಾಲಿ ಹಾಗೂ 6 ರಿಂದ 16 ವರ್ಷದ ಒಳಗಿನ ಮಕ್ಕಳಿಂದ ಬೈಸಿಕಲ್ ರ್‍ಯಾಲಿ ನಡೆಸಬೇಕು. ಮೇ.1ರಂದು ರಾಮನವಮಿ ಉತ್ಸವವನ್ನು ಪಟ್ಟಣದ ಗಂಜ್ ಏರಿಯಾದ ರಾಮ ಮಂದಿರದಲ್ಲಿ ನಡೆಸಲು ನಿರ್ಧರಿಸಲಾಯಿತು.

ಅಂದು ಉತ್ಸವದ ನಿಮಿತ್ತ ರ್‍ಯಾಲಿಯೂ ಹಳೆ ಪಟ್ಟಣದ ಚಾವಡಿಯಿಂದ ಪ್ರಾರಂಭಿಸಿ, ತೀನದುಕಾನಗಲ್ಲಿ ಗಡಿ ಏರಿಯಾ, ಪುರಸಭೆ ಮೂಲಕ ಹಾದು ಗಂಜ್ ಏರಿಯಾದ ಬಸ್ ನಿಲ್ದಾಣ, ಮಹಾತ್ಮಾಗಾಂಧಿ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಹಾದು ರಾಮ ಮಂದಿರದಲ್ಲಿ ರಾಮನವಮಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಎಂದು ಚರ್ಚಿಸಲಾಯಿತು.

ಉತ್ಸವದ ನಿಮಿತ್ತ ವಿವಿಧ ಸಮಿತಿ ರಚತಿಸಲಾಯಿತು. ಸುರಕ್ಷಾ ಸಮಿತಿಗೆ ಪ್ರತಾಪ ಪಾಟೀಲ, ಗಿರೀಷ ಕುಡತೆ, ಮಲ್ಲು ಶೀಲವಂತ, ಮನೋಜ ಜಾಧವ. ಅಲಂಕಾರ ಸಮಿತಿಗೆ ಆಕಾಶ ಮೈಲಾರೆ, ಪ್ರಜ್ವಲ್ ಕನಸೆ, ಸಂಜು ಅಡರಂಗೆ ಮತ್ತು ತಂಡದವರು. ಪ್ರಚಾರ ಸಮಿತಿ ಪ್ರಮುಖರಾಗಿ ರಾಹುಲ ಸಿಂಧೆ, ಜೈರಾಜ ಕೊಳ್ಳಾ, ಕೇಶವ ಸೂರ್ಯವಂಶಿ ಮತ್ತು ತಂಡದವರು ಕಾರ್ಯ ನಿರ್ವಹಿಸುವರು.

ಉಳಿದಂತೆ ಎಲ್ಲಾ ಸಮಿತಿಗಳಿಗೂ ಪದಾಧಿಕಾರಿ ನೇಮಿಸಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಸಮಿತಿ ಮಹಿಳಾ ಪ್ರತಿನಿಧಿಯಾಗಿ ಶುಭಾಂಗಿ ಚನ್ನಬಸವ ಬಳತೆ ಪಾಲ್ಗೊಂಡು ಮಾತನಾಡಿದರು.ಈ ವೇಳೆ ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಸಾಗರ ಮಲಾನಿ, ವಿಲಾಸ ಬಕ್ಕಾ, ಜೈಕಿಶನ ಬಿಯಾನಿ, ಆಕಾಶ ರಿಕ್ಕೆ, ರಾಜಕುಮಾರ ಭೋಸಲೆ, ಪ್ರಕಾಶ ಮಾಶೆಟ್ಟೆ, ಚನ್ನಬಸವಣ್ಣ ಬಳತೆ, ಡಾ. ವಸಂತ ಪವಾರ, ನಿರ್ಮಲಾ ತಿವಾರಿ, ಶ್ರೀನಾಥ ಹೆಡಾ, ಚಂದ್ರಕಾಂತ ತಳವಾಡೆ, ಗಾಯತ್ರಿ ವಾರದ, ವಾಸು ಮಹಾರಾಜ, ಡಾ. ಅಮಿತ ಅಷ್ಟೂರೆ ಸೇರಿದಂತೆ ಹಲವರು ಇದ್ದರು.