ಪುಸ್ತಕ ಓದುವುದು ನಮ್ಮ ಮೊದಲ ಹವ್ಯಾಸವಾಗಲಿ

| Published : Feb 19 2024, 01:30 AM IST

ಸಾರಾಂಶ

ಕೇವಲ ಕನ್ನಡಿಗರು ಮಾತ್ರವಲ್ಲಿ ಕೈಗಾದಲ್ಲಿ ಇರುವ ಎಲ್ಲ ರಾಜ್ಯಗಳ ಜನರೂ ಕೈಗಾ ಸಹ್ಯಾದ್ರಿ ಕನ್ನಡ ಸಂಘದ ಸೇವೆ ಬಯಸುತ್ತಿದ್ದಾರೆ.ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗೆ ಇತರೆ ಭಾಷಿಕರು ಭಾಗವಹಿಸುವ ಮತ್ತು ಇಂತಹ ಕಾರ್ಯಕ್ರಮಗಳಿಗಾಗಿ ಕಾಯುವ ಸೇವೆ ಸಹ್ಯಾದ್ರಿ ಕನ್ನಡ ಸಂಘ ಹೀಗೆಯೇ ಮುಂದುವರೆಸಲಿ

ಕಾರವಾರ: ಪುಸ್ತಕ ಓದುವುದು ನಮ್ಮ ಮೊದಲನೆಯ ಹವ್ಯಾಸವಾಗಬೇಕು.ಪ್ರತಿ ಮನೆಯಲ್ಲೂ ಓದುವ ಅಭ್ಯಾಸ ಇರಬೇಕು. ಕಾರಣ ಪುಸ್ತಕಗಳೇ ನಿಜವಾದ ಸಂಗಾತಿಗಳು ಎಂದು ಕೈಗಾ ಸೈಟ್ ಡೈರಕ್ಟರ್ ಪ್ರಮೋದ ರಾಯಚೂರ ನುಡಿದರು.

ತಾಲೂಕಿನ ಎನ್‌ಪಿಸಿಎಲ್ ಕೈಗಾ ವಸತಿ ಸಂಕೀರ್ಣದಲ್ಲಿ ನವೀಕೃತ ಕಟ್ಟಡದಲ್ಲಿ ಗ್ರಂಥಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಇದಕ್ಕೆ ಬೇರೆ ಸಹಕಾರ ಬೇಕಿಲ್ಲ. ಒಂದು ಪುಸ್ತಕ ಜತೆಗಿದ್ದರೆ ಸಾಕು ನಮ್ಮ ಸಮಯ ಮತ್ತು ಕಾಲ ಎರಡೂ ಸಂಪೂರ್ಣ ಸದ್ವಿನಿಯೋಗ ಆಗುತ್ತಲೇ ಇರುತ್ತದೆ. ಕೇವಲ ಕನ್ನಡಿಗರು ಮಾತ್ರವಲ್ಲಿ ಕೈಗಾದಲ್ಲಿ ಇರುವ ಎಲ್ಲ ರಾಜ್ಯಗಳ ಜನರೂ ಕೈಗಾ ಸಹ್ಯಾದ್ರಿ ಕನ್ನಡ ಸಂಘದ ಸೇವೆ ಬಯಸುತ್ತಿದ್ದಾರೆ.ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗೆ ಇತರೆ ಭಾಷಿಕರು ಭಾಗವಹಿಸುವ ಮತ್ತು ಇಂತಹ ಕಾರ್ಯಕ್ರಮಗಳಿಗಾಗಿ ಕಾಯುವ ಸೇವೆ ಸಹ್ಯಾದ್ರಿ ಕನ್ನಡ ಸಂಘ ಹೀಗೆಯೇ ಮುಂದುವರೆಸಲಿ.ಇದಕ್ಕೆ ಆಡಳಿತ ಮಂಡಳಿ ಎಲ್ಲ ಸಹಕಾರ ಕೊಡಲಿದೆ ಎಂದರು.

ಸಹ್ಯಾದ್ರಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಮೆಹೆಂದಳೆ ಪ್ರಸ್ತಾವಿಕವಾಗಿ ಮಾತನಾಡಿ,ಒಂದು ಸಾವಿರ ಸದಸ್ಯರನ್ನು ಹೊಂದಿರುವ ಕೈಗಾ ಸಹ್ಯಾದ್ರಿ ಸಂಘದ ಗ್ರಂಥಾಲಯ ಕಟ್ಟಡ ವಿಶಾಲವಾಗಿ ರೂಪಿಸಲಾಗಿದ್ದು, ಅಗತ್ಯ ಸಂದರ್ಭದಲ್ಲಿ ಕಾರ್ಯಕ್ರಮಗಳಿಗೂ ಬಳಸಬಹುದಾಗಿದೆ. ಸಹ್ಯಾದ್ರಿ ಕನ್ನಡ ಸಂಘ ನಡೆಸುತ್ತಿರುವ ಈ ಗ್ರಂಥಾಲಯ ಈಗ ಸರ್ವರಿಗೂ ಉಚಿತವಾಗಿ ಲಭ್ಯವಾಗುತ್ತಿದ್ದು, ಐದು ಸಾವಿರ ಪುಸ್ತಕಗಳು, ದಿನಕ್ಕೆ ಮೂರು ದಿನಪತ್ರಿಕೆ, ಸೇರಿದಂತೆ ಇತರೆ ಸೇವೆ ವಾರಕ್ಕೆ ಐದು ದಿನ ಕಾಲ ಲಭ್ಯವಾಗಲಿದೆ ಎಂದರು.

ಕೈಗಾ ಕೇಂದ್ರ ನಿರ್ದೇಶಕರು ಬಿ.ವಿನೋದ ಕುಮಾರ, ವೈ.ಬಿ.ಭಟ್ ಮತ್ತು ಯೋಜನಾ ನಿರ್ದೇಶಕ ಯು.ಪಿ. ಮಾದನಗೇರಿ ಮಾತಾನಾಡಿದರು.

ಅಧೀಕ್ಷಕ ಅರ್.ವಿ.ಮನೋಹರ್, ಅಭಿಯಂತರ ಸ್ವಾಮಿ,ನೌಕರ ಸಂಘದ ಅಧ್ಯಕ್ಷ ಸುಮಂತ್ ಹೆಬ್ಳೇಕರ್, ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ ಜಿ., ಜೀತೆಂದ್ರ ಕುಮಾರ್, ಮಹಾಂತೇಶ್ ಸಜ್ಜನ್ ಇದ್ದರು.