ಎಲ್ಲ ಕ್ಷೇತ್ರಗಳಿಗೆ ಮೀಸಲಾತಿ ಜಾರಿಯಾಗಲಿ

| Published : Sep 04 2024, 01:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾದಾಮಿ: ಸಂವಿಧಾನದ ಮೀಸಲಾತಿಯ ಪರಿಕಲ್ಪನೆ ಸಾರ್ವಜನಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಜಾರಿಯಾದರೆ ಮಾತ್ರ ಡಾ.ಬಿ.ಆರ್. ಅಂಬೇಡ್ಕರ ಅವರು ಕಂಡಿರುವ ಕನಸು ನನಸಾಗಲು ಸಾಧ್ಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ: ಸಂವಿಧಾನದ ಮೀಸಲಾತಿಯ ಪರಿಕಲ್ಪನೆ ಸಾರ್ವಜನಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಜಾರಿಯಾದರೆ ಮಾತ್ರ ಡಾ.ಬಿ.ಆರ್. ಅಂಬೇಡ್ಕರ ಅವರು ಕಂಡಿರುವ ಕನಸು ನನಸಾಗಲು ಸಾಧ್ಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಸತ್ಯ ಶೋಧಕ ಕರ್ನಾಟಕ ತಾಲೂಕು ಘಟಕದ ವತಿಯಿಂದ ನಗರದ ಅಂಜುಮನ್ ಶಾದಿಮಹಲ್‌ನಲ್ಲಿ ಆಯೋಜಿಸಿದ್ದ ಮೀಸಲಾತಿ ಜನಕ ಸಾಹೊ ಮಹಾರಾಜರ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರರ ಜಯಂತಿ ಅಂಗವಾಗಿ ಮೀಸಲಾತಿ ಅಂದು, ಇಂದು ಮುಂದು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜರ ಉಪನ್ಯಾಸ ನೀಡಿ, ಶೋಷಿತ ಸಮುದಾಯಗಳಿಗೆ ಸಾವಿರಾರು ವರ್ಷಗಳಿಂದ ವಿದ್ಯೆ, ಆಸ್ತಿ, ಅಧಿಕಾರದಿಂದ ದೂರ ಉಳಿದ ಜನತೆಗೆ 1902 ಜುಲೈ 20 ರಂದು ಕೊಲ್ಲಾಪುರ ಪ್ರಾಂತದ ಶಾಹೂ ಮಹಾರಾಜರು ಶೇ.50 ಮೀಸಲಾತಿ ಕಲ್ಪಿಸಿದರು. ಅದೇ ಮಾದರಿಯಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ 75% ಮೀಸಲಾತಿ ಕಲ್ಪಿಸಿದರು. 1950 ರಲ್ಲಿ ಜಾರಿಯಾದ ಭಾರತೀಯ ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರರು ಮೂಲಭೂತ ಹಕ್ಕುಗಳನ್ನಾಗಿ ಘೋಷಿಸಿದರು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್‌ ಜೆ.ಬಿ.ಮಜ್ಜಗಿ, ಡಾ.ಎಂ.ಎಚ್.ಚಲವಾದಿ, ಉದಯ ಮಾಸ್ತಿ, ಎಂ.ಎನ್.ಸಿದ್ಲಿಂಗಪ್ಪನವರ ಭಾಗವಹಿಸಿದ್ದರು. ಸತ್ಯಶೋಧಕ ಸಂಘದ ಜಿಲ್ಲಾಧ್ಯಕ್ಷ ಅರುಣ ಗರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯು.ಕೆ.ನಂದನೂರ. ಪಿ.ಎಸ್.ಅಸೂಟಿ. ಎಸ್.ಎಂ.ನದಾಫ, ಆರ್.ಎ.ಲೆಂಕೆನ್ನವರ, ರವೀಂದ್ರ ತಳವಾರ, ಅನುರಾಧಾ ದೊಡಮನಿ, ಆನಂದ ದೊಡಮನಿ, ಕಾಂತಿಚಂದ್ರ ಜ್ಯೋತಿ, ಬಾಲರಾಜ ಬಾರಕೇರ, ಚಿದಾನಂದ ತಳವಾರ, ಮುಸ್ತಾಕ ಅಹ್ಮದ ಸತಾರಕರ, ರಂಗನಾಥ ಮೇಟಕಲ್ ಇತರರು ಭಾಗವಹಿಸಿದ್ದರು.