ಸಾರಾಂಶ
ಲಕ್ಷ್ಮೇಶ್ವರ: ಬಕ್ರೀದ್ ಹಬ್ಬವು ಶಾಂತಿಯ ಪ್ರತೀಕವಾಗಿದೆ, ಆದ್ದರಿಂದ ಬಕ್ರೀದ್ ಹಬ್ಬವನ್ನು ಶಾಂತಿ, ಸಂಭ್ರಮ ಮತ್ತು ಸಡಗರದಿಂದ ಆಚರಿಸೋಣ ಎಂದು ಪಿಎಸ್ಐ ಈರಣ್ಣ ರಿತ್ತಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಮುಸ್ಲಿಂ ಬಾಂಧವರು ಸೌಹಾರ್ಧತೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಹಿಂದೂ-ಮುಸ್ಲಿಂ ಬಾಂಧವರು ಸೇರಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ. ಬಕ್ರೀದ್ ಹಬ್ಬದಲ್ಲಿ ಯಾವುದೇ ಶಾಂತಿ ಕದಡುವ ಕಾರ್ಯ ನಡೆಯಲಾರದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು ಪಟ್ಟಣದಲ್ಲಿ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಮಾಡಲಾಗುವುದು, ಅಲ್ಲದೆ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಹಬ್ಬದ ನೆಪದಲ್ಲಿ ಅಮಾಯಕರಿಗೆ ತೊಂದರೆ ನೀಡುವುದು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ನಿವೃತ್ತ ಶಿಕ್ಷಕ ಪೂರ್ಣಾಜಿ ಕರಾಟೆ. ವಕೀಲ ನಜೀರ್ ಅಹ್ಮದ್ ಗದಗ, ದೂದಪೀರಾ ದರ್ಗಾ ಕಮೀಟಿ ಅಧ್ಯಕ್ಷ ಸುಲೇಮಾನ್ ಕಣಿಕೆ. ಅಂಜುಮನ್ ಕಮೀಟಿಯ ಅಧ್ಯಕ್ಷ ಮುಕ್ತಿಯಾರ್ ಅಹ್ಮದ್ ಗದಗ. ಅನಿಲ ಮುಳಗುಂದ. ಗಂಗಾಧರ ಮೆಣಸಿನಕಾಯಿ. ಮಂಜುನಾಥ ಹೊಗೆಸೊಪ್ಪಿನ ಮಾತನಾಡಿದರು.
ಈ ವೇಳೆ ಮೋಹನ ನಂದೆಣ್ಣವರ, ಈರಣ್ಣ ಪೂಜಾರ, ಇಸ್ಮಾಯಿಲ್ ಅಡೂರ, ದಾದಾಪೀರ್ ತಂಬಾಕದ ಇದ್ದರು. ಪ್ರಕಾಶ ಮ್ಯಾಗೇರಿ ನಿರ್ವಹಿಸಿದರು.