ಶಿರೂರು ಪರ್ಯಾಯಕ್ಕೆ ಸಹಕಾರ ನೀಡೋಣ: ಶಾಸಕ ಗಂಟಿಹೊಳೆ

| Published : Oct 20 2025, 01:04 AM IST

ಶಿರೂರು ಪರ್ಯಾಯಕ್ಕೆ ಸಹಕಾರ ನೀಡೋಣ: ಶಾಸಕ ಗಂಟಿಹೊಳೆ
Share this Article
  • FB
  • TW
  • Linkdin
  • Email

ಸಾರಾಂಶ

ಸಭೆಯಲ್ಲಿ ಮಠದ ಪರವಾಗಿ ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್ ಪ್ರಸ್ತಾವನೆಗೈದು ಮುಂಬರುವ ಶ್ರೀ ಮಠದ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಪರ್ಯಾಯ ಯಶಸ್ವಿಗೊಳಿಸಲು ಸಹಕಾರ ಕೋರಿದರು.

ಕನ್ನಡಪ್ರಭ ವಾರ್ತೆ ಬೈಂದೂರುಮುಂಬರುವ ಶಿರೂರು ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಸಭೆ ಬೈಂದೂರು ವಲಯದಲ್ಲಿ ಉಪ್ಪುಂದ ಮತ್ತು ಕಮಲಶಿಲೆಯಲ್ಲಿ ನಡೆಯಿತು.‌

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಭಕ್ತರೆಲ್ಲರೂ ಶ್ರೀ ಮಠದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಎಲ್ಲರೂ ಸಹಕಾರ ನೀಡೋಣ ಎಂದು ಕರೆ ನೀಡಿದರು.ಸಭೆಯಲ್ಲಿ ಮಠದ ಪರವಾಗಿ ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್ ಪ್ರಸ್ತಾವನೆಗೈದು ಮುಂಬರುವ ಶ್ರೀ ಮಠದ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಪರ್ಯಾಯ ಯಶಸ್ವಿಗೊಳಿಸಲು ಸಹಕಾರ ಕೋರಿದರು.

ಜೊತೆ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್, ಯಾವ ರೀತಿ ಸಂಘಟನಾತ್ಮಕವಾಗಿ ಉಡುಪಿ ಜಿಲ್ಲೆಯ ಎಲ್ಲಾ ಮನೆಗಳನ್ನು ಶಿರೂರು ಮಠದ ವತಿಯಿಂದ ತಲುಪಬಹುದು ಎಂದು ವಿಶ್ಲೇಶಿಸಿದರು.ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ, ಮಹಿಳಾ ಸಂಚಾಲಕಿ ಸಂಧ್ಯಾ ರಮೇಶ್, ಸ್ಥಳೀಯ ಪ್ರಮುಖರಾದ ರಾಜು ಪೂಜಾರಿ, ಸಂದೇಶ್ ಭಟ್, ಬಾಲಚಂದ್ರ ಭಟ್, ಗೌರಿ ದೇವಾಡಿಗ ಮತ್ತಿತರ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.