ಸೊಳ್ಳೆಗಳ ಕಡಿತದಿಂದ ಪಾರಾಗಿ ರೋಗಗಳ ವಿರುದ್ಧ ಹೋರಾಡೋಣ: ಎಸ್.ಡಿ.ಬೆನ್ನೂರ್

| Published : Aug 21 2025, 01:00 AM IST

ಸೊಳ್ಳೆಗಳ ಕಡಿತದಿಂದ ಪಾರಾಗಿ ರೋಗಗಳ ವಿರುದ್ಧ ಹೋರಾಡೋಣ: ಎಸ್.ಡಿ.ಬೆನ್ನೂರ್
Share this Article
  • FB
  • TW
  • Linkdin
  • Email

ಸಾರಾಂಶ

ಸೊಳ್ಳೆಗಳ ಮೊಟ್ಟೆ ಹಂತ, ಲಾರ್ವಾ ಹಂತ, ಪೂಪ ಹಂತ ಹಾಗೂ ವಯಸ್ಕ ಹಂತ ಎಂಬ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಸೊಳ್ಳೆಯ ಕಡಿತ ಚಿಕ್ಕದಾದರೂ ಆದರ ಭೀತಿ ದೊಡ್ಡದು ಸೊಳ್ಳೆಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸೊಳ್ಳೆಗಳ ಜೀವನ ಚಕ್ರ ತಿಳಿದು ಸೊಳ್ಳೆ ಕಡಿತದಿಂದ ಪಾರಾಗಿ ರೋಗಗಳ ವಿರುದ್ಧ ಹೋರಾಡೋಣ ಎಂದು ಕ್ಷೇತ್ರ ಆರೋಗ್ಯ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ಹೇಳಿದರು.

ತಾಲೂಕಿನ ಗಣಂಗೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಶೆಟ್ಟಹಳ್ಳಿ ವತಿಯಿಂದ ಆಯೋಜಿಸಿದ್ದ ವಿಶ್ವ ಸೊಳ್ಳೆ ದಿನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯರಿಗೆ ಕೇಡನ್ನು ಉಂಟು ಮಾಡುವ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆಗಳ ದಿನವೆಂದು ಆಚರಿಸಲಾಗುತ್ತದೆ ಎಂದರು.

ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಮೇಘನಾ ಮಾತನಾಡಿ, ಸೊಳ್ಳೆಗಳ ಮೊಟ್ಟೆ ಹಂತ, ಲಾರ್ವಾ ಹಂತ, ಪೂಪ ಹಂತ ಹಾಗೂ ವಯಸ್ಕ ಹಂತ ಎಂಬ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಸೊಳ್ಳೆಯ ಕಡಿತ ಚಿಕ್ಕದಾದರೂ ಆದರ ಭೀತಿ ದೊಡ್ಡದು ಸೊಳ್ಳೆಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ ಫಣೀಂದ್ರ ಸೊಳ್ಳೆಗಳ ನಿಯಂತ್ರಣ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಯೋಗೇಶ, ಪ್ರಭಾರಿ ನಿಲಯ ಪಾಲಕ ಮಧುಸೂದನ್, ಉಪನ್ಯಾಸಕರಾದ ಶಿಲ್ಪಶ್ರೀ, ವಸಂತ, ವಿದ್ಯಾಶ್ರೀ, ಮಾಲಾ, ಸಮುದಾಯ ಆರೋಗ್ಯ ಅಧಿಕಾರಿ ಪ್ರಕೃತಿ, ಸೇರಿದಂತೆ ಆಶಾ ಕಾರ್ಯಕರ್ತೆ ಭಾಗ್ಯ ಇತರರು ಹಾಜರಿದ್ದರು.

ಮಳವಳ್ಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ: ಪುಟ್ಟಸ್ವಾಮಿ

ಮಳವಳ್ಳಿ:

ನನ್ನ ವಿರುದ್ಧ ಕೈಗೊಂಡಿದ್ದ ಅವಿಶ್ವಾಸ ನಿರ್ಣಾಯಕ್ಕೆ ಸೋಲಾಗಿದ್ದು, ಪಕ್ಷಾತೀತವಾಗಿ ಬೆಂಬಲ ಕೊಟ್ಟ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜೊತೆಯಲ್ಲಿಯೇ ರಾಜೀನಾಮೆ ನೀಡಲಾಗಿತ್ತಾದರೂ ನನ್ನ ಗಮನಕ್ಕೆ ಭಾರದೇ ಉಪಾಧ್ಯಕ್ಷ ಸ್ಥಾನಕ್ಕೆ ಕೊಟ್ಟಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಂತರ ನನ್ನ ರಾಜೀನಾಮೆ ವಾಪಸ್ ಪಡೆದಿದ್ದು, ನನ್ನ ವಿರುದ್ಧ ಮಾತನಾಡುವವರಿಗೆ ನೈತಿಕತೆ ಇಲ್ಲ ಎಂದರು.

ಪುರಸಭೆ ಆಡಳಿತದಲ್ಲಿ ವ್ಯಾತ್ಯಾಸ ಇದ್ದಿದ್ದರೇ ಅವಿಶ್ವಾಸದಲ್ಲಿ ನಾನು ಸೋಲಬೇಕಿತ್ತು. ಆಡಳಿತ ಉತ್ತಮವಾಗಿದ್ದರಿಂದಲೇ ನನ್ನ ಜೊತೆ 14 ಸದಸ್ಯರು ಇದ್ದಾರೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 15ನೇ ಹಣಕಾಸು ಯೋಜನೆ ಅನುದಾನ ಪ್ರತಿಯೊಂದು ವಾರ್ಡ್‌ಗೂ ಕೊಟ್ಟರೇ ಒಂದು ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಮೂರ್ನಾಲ್ಕು ವಾರ್ಡ್‌ಗಳಿಗೆ ಮಾತ್ರ ಅನುದಾನ ನೀಡಲಾಗಿದೆ. ಹಂತ ಹಂತವಾಗಿ ಎಲ್ಲಾ ವಾರ್ಡ್ ಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ನಾನು ಯಾವುದೇ ರಿಯಲ್ ಎಸ್ಟೆಟ್ ಉದ್ಯಮ ಮಾಡುತ್ತಿಲ್ಲ. ಪಕ್ಷೇತ್ತರ ಅಭ್ಯರ್ಥಿಯಾಗಿರುವ ನಾನು ಪಕ್ಷಾತೀತವಾಗಿ ಎಲ್ಲರ ಸಹಕಾರದೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಪುರಸಭೆ ಅಧಿಕಾರದಲ್ಲಿದ್ದು, ಯಾರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನನ್ನ ಮೇಲೆ ಆರೋಪ ಮಾಡುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.