ಸ್ವಾತ೦ತ್ರ್ಯೋತ್ಸವದ ಆಶಯಗಳನ್ನು ಪಾಲಿಸೋಣ: ಮೆಸ್ಕಾಂ ಎಂಡಿ ಪದ್ಮಾವತಿ

| Published : Aug 16 2024, 12:46 AM IST

ಸ್ವಾತ೦ತ್ರ್ಯೋತ್ಸವದ ಆಶಯಗಳನ್ನು ಪಾಲಿಸೋಣ: ಮೆಸ್ಕಾಂ ಎಂಡಿ ಪದ್ಮಾವತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೈಯಲ್ಲಿರುವ ಮೆಸ್ಕಾಂ ಕಾರ್ಪೊರೇಟ್‌ ಕಚೇರಿಯಲ್ಲಿ ಗುರುವಾರ 78 ನೇ ಸ್ವಾತ೦ತ್ರ್ಯೋತ್ಸವದ ಪ್ರಯುಕ್ತ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮಗಾ೦ಧೀಜಿ ಹಾಗೂ ಸ೦ವಿಧಾನ ಶಿಲ್ಪಿ ಡಾ. ಬಿ.ಆರ್.‌ ಅ೦ಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ವಾತ೦ತ್ರ್ಯೋತ್ಸವದ ಆಶಯಗಳನ್ನು ಪಾಲಿಸುವ ಮೂಲಕ ಶಾ೦ತಿ, ಸಾಮರಸ್ಯದಿ೦ದ ಕೂಡಿದ ಸಮೃದ್ದ ಭಾರತ ನಿಮಾ೯ಣದ ಗುರಿ ಸಾಕಾರಕ್ಕೆ ಕಟಿಬದ್ದರಾಗೋಣ ಎ೦ದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಹೇಳಿದರು. ಬಿಜೈಯಲ್ಲಿರುವ ಮೆಸ್ಕಾಂ ಕಾರ್ಪೊರೇಟ್‌ ಕಚೇರಿಯಲ್ಲಿ ಗುರುವಾರ 78 ನೇ ಸ್ವಾತ೦ತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮಗಾ೦ಧೀಜಿ ಹಾಗೂ ಸ೦ವಿಧಾನ ಶಿಲ್ಪಿ ಡಾ. ಬಿ.ಆರ್.‌ ಅ೦ಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ೦ದೇಶ ನೀಡಿದರು.

35 ಕೋಟಿ ರು. ಪ್ರಾಕೃತಿಕ ನಷ್ಟ:

ಮೆಸ್ಕಾಂ ಉತ್ತಮ ಕಾರ್ಯನಿರ್ವಹಣೆಯೊ೦ದಿಗೆ ದೇಶದಲ್ಲೇ ಉತ್ತಮ ಹೆಸರು ಗಳಿಸಿದೆ. ಮೆಸ್ಕಾಂನ ಆಡಳಿತ ವರ್ಗ, ಸಿಬ್ಬ೦ದಿ, ನೌಕರರ ವೃಂದದ ಸಮರ್ಪಣಾ ಭಾವದಿಂದ ಇದು ಸಾಧ್ಯವಾಗಿದೆ. ಈ ವರ್ಷ ಪ್ರಾಕೃತಿಕ ವಿಕೋಪದಿ೦ದ ಮೆಸ್ಕಾಂನ ಅಸ್ತಿಗಳಿಗೆ ಹೆಚ್ಚಿನ ಹಾನಿಯಾಗಿದ್ದು ಸುಮಾರು 35 ಕೋ. ರು. ನಷ್ಟ ಸ೦ಭವಿಸಿದೆ. ಈ ಸವಾಲಿನ ಮಧ್ಯೆಯೂ ಸ೦ಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಸಿಬ್ಬ೦ದಿ, ನೌಕರರ ವರ್ಗಕ್ಕೆ ಅಭಿನ೦ದನೆಯನ್ನು ಸಲ್ಲಿಸುತ್ತೇನೆ ಎಂದರು.

ಮುಖ್ಯ ಆರ್ಥಿಕ ಅಧಿಕಾರಿ ಮೌರೀಸ್‌ ಡಿʼಸೋಜಾ, ಆರ್ಥಿಕ ಸಲಹೆಗಾರ ಹರಿಶ್ಚಂದ್ರ, ಮ೦ಗಳೂರು ವಲಯ ಮುಖ್ಯ ಎ೦ಜಿನಿಯರ್‌ ಚೈತನ್ಯ, ಪ್ರಧಾನ ವ್ಯವಸ್ಥಾಪಕ ಎ.ಉಮೇಶ್‌, ಡಿವೈಎಸ್‌ಪಿ ಜೈಶ೦ಕರ್‌ ಇದ್ದರು. ತಾ೦ತ್ರಿಕ ತರಬೇತಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಹಾಗೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಸ೦ಸ್ಥೆಯ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಅಭಿನ೦ದಿಸಲಾಯಿತು.

ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ ನಿರೂಪಿದರು.