ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿದ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ
ಕನ್ನಡಪ್ರಭ ವಾರ್ತೆ ಕುಮಟಾಸದಾ ಸಂಘಟಿತರಾಗಿ ಇದ್ದು ನಿಗದಿತ ಸೇವಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಅಂಚೆ ಇಲಾಖೆಯ ಶ್ರೇಷ್ಠತೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಹೇಳಿದರು.
ಪಟ್ಟಣದ ಮಹಾಸತಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಅಂಚೆ ನೌಕರರ ಸಂಘಗಳು ಗ್ರೂಪ್ ಸಿ ಪೋಸ್ಟ್ ಮ್ಯಾನ್, ಎಂಟಿಎಸ್ ಹಾಗೂ ಎಐಜಿಡಿಎಸ್‌ಯು ಕಾರವಾರ ವಿಭಾಗಗಳ ೧೩ನೆಯ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.ಎಐಪಿಇಯು ಗ್ರೂಪ್ ಸಿ ಮಾಜಿ ವಲಯ ಕಾರ್ಯದರ್ಶಿ ಜಿ. ಜಾನಕಿರಾಮ್ ಮಾತನಾಡಿದರು. ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆಗೊಂಡ ಅಂಚೆ ಸಹಾಯಕ ರಂಗಪ್ಪ (ಜಾನಕಿಸುತ)ಅವರು ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಬರೆದ ಪಡುವಣ ಕಡಲ ತೀರದಲ್ಲಿ ಹಾಗೂ ಆಪರೇಷನ್ ನೇತ್ರಾಣಿ ಎಂಬ ೨ ಕಾದಂಬರಿಗಳನ್ನು ಬಿಡುಗಡೆಗೊಳಿಸಲಾಯಿತು. ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಂಘಟನೆಗಳ ಅಧ್ಯಕ್ಷರಾದ ಎಂ.ಎಸ್. ಗೊಂಡ, ಎಂ.ಐ. ನಾಯ್ಕ, ಶಂಕರ ನಾಯ್ಕ ಜಂಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಐಪಿಇಯು ಕರ್ನಾಟಕ ವಲಯ ಕಾರ್ಯದರ್ಶಿ ರಾಘವೇಂದ್ರ ಹವಳೇರ, ಎಐಪಿಇಯು ಪೋಸ್ಟಮ್ಯಾನ್ ವಿಭಾಗ ಮತ್ತು ಎಂಟಿಎಸ್ ಕರ್ನಾಟಕ ವಲಯದ ಅಧ್ಯಕ್ಷ ರವಿ ಡಿ. ಪಾಟೀಲ, ಎಐಜಿಡಿಎಸ್‌ಯು ವಲಯ ಕಾರ್ಯದರ್ಶಿ ಎಚ್.ವಿ. ರಾಜಕುಮಾರ ಬೆಂಗಳೂರು, ಎಐಪಿಇಯು ಉಪವಲಯ ಕಾರ್ಯದರ್ಶಿ ಧರ್ಮೇಂದ್ರ ಆರ್. ಜ್ಯಾಯಿ, ಎಐಪಿಇಯು ಮಲ್ಲಪ್ಪ ನರಗುಂದ ಆರ್.ಆರ್., ಎಂ.ಎನ್. ಕುರಹಟ್ಟಿ, ಮಾಜಿ ವಲಯ ಅಧ್ಯಕ್ಷರಾದ ಚಂದ್ರಸ್ವಾಮಿ, ವಿಜಯ್ ನಾಯರಿ, ಕುಮಟಾ ಅಂಚೆ ನಿರೀಕ್ಷಕ ರಾಮಯ್ಯ ಡಿ ಕೋಮಾರಿ, ಹೊನ್ನಾವರ ಅಂಚೆ ನಿರೀಕ್ಷಕ ಶಂಕರ ಲಮಾಣಿ, ಎಐಪಿಇಯು ಗ್ರೂಪ್ ಸಿ ಕಾರವಾರ ವಿಭಾಗದ ಕಾರ್ಯದರ್ಶಿ ಅವಿನಾಶ ಕಂಬಳಿ, ಎಐಪಿಇಯು ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ಕಾರವಾರ ವಿಭಾಗದ ಕಾರ್ಯದರ್ಶಿ ವಿಶಾಲ ನಾಯ್ಕ, ಎಐಜಿಡಿಎಸ್‌ಯು ಕಾರವಾರ ವಿಭಾಗದ ಕಾರ್ಯದರ್ಶಿ ಸುರೇಶ ನಾಯ್ಕ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ದಿನೇಶ ನಾಯ್ಕ, ಅಧ್ಯಕ್ಷ ಸಿ.ಎಸ್. ನಾಯ್ಕ ವೇದಿಕೆಯಲ್ಲಿದ್ದರು.
ಬಳಿಕ ಅಧಿವೇಶನದಲ್ಲಿ ವಿವಿಧ ಸಂಘಟನೆಯ ಕಾರವಾರ ವಿಭಾಗದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ಗ್ರೂಪ್ ಸಿಯಲ್ಲಿ ಅಧ್ಯಕ್ಷರಾಗಿ ಕೃಷ್ಣ ನಾಯ್ಕ, ಕಾರ್ಯದರ್ಶಿಯಾಗಿ ವಿ.ಎಚ್. ನಾಯ್ಕ, ಖಜಾಂಚಿಯಾಗಿ ಸರ್ಫರಾಜ್ ಆಯ್ಕೆಯಾದರು. ಪೋಸ್ಟ್ಮ್ಯಾನ್ ಎಂಟಿಎಸ್‌ದಲ್ಲಿ ಅಧ್ಯಕ್ಷರಾಗಿ ವಿಘ್ನೇಶ್ವರ ನಾಯ್ಕ, ಕಾರ್ಯದರ್ಶಿಯಾಗಿ ವಿಶಾಲ ನಾಯ್ಕ, ಖಜಾಂಚಿಯಾಗಿ ಗೋಪಾಲಕೃಷ್ಣ ಗೊಂಡ, ಜಿಡಿಎಸ್‌ನ ಅಧ್ಯಕ್ಷರಾಗಿ ಸಂತೋಷ ಪೈ, ಕಾರ್ಯದರ್ಶಿಯಾಗಿ ಸುರೇಶ ನಾಯ್ಕ, ಖಜಾಂಚಿಯಾಗಿ ಅತುಲ ಆಚಾರಿ ಆಯ್ಕೆಯಾದರು.
ನಾಗರತ್ನ ನಾಯಕ, ಮಾಯಾ ಭಂಡಾರಿ ಪ್ರಾರ್ಥಿಸಿದರು. ಮಹೇಶ ನಾಯ್ಕ ಸ್ವಾಗತಿಸಿದರು, ಅವಿನಾಶ್ ಕಂಬಳಿ ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಸರ್ಫರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಪೈ ವಂದಿಸಿದರು.