ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸ್ಲಂ ಜನಾಂದೋಲನ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಹಾಗೂ ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಎನ್.ಆರ್ ಕಾಲೋನಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇ ಹಾಗೂ ಬಾಬು ಜಗಜೀವನ್‌ರಾಂ ರವರ 117 ನೇ ಜಯಂತಿ ನಡೆಯಿತು. ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದ ಗೃಹಸಚಿವ ಡಾ. ಜಿ.ಪರಮೇಶ್ವರ್ ಸಂವಿಧಾನ ಉಳಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ. ಈ ಮೂಲಕ ವಿಶ್ವಕಂಡ ಮಹಾನ್ ಜ್ಞಾನಿ ಸಮಾನತೆಯ ಪ್ರತಿಪಾದಕರಾದ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್‌ರಾಂ ಅವರಿಗೆ ಗೌರವ ಸಲ್ಲಿಸೋಣ ಎಂದರು.ಕಳೆದ 10 ವರ್ಷಗಳಿಂದ ಸಂವಿಧಾನದ ಮೇಲೆ ನಿರಂತರ ಹಲ್ಲೆ ಮಾಡುತ್ತಿರುವ ಎನ್‌ಡಿಎ ಸರ್ಕಾರ ಬಿಜೆಪಿ ಆರ್,ಎಸ್,ಎಸ್ ನಿಯಂತ್ರಿತ ಮೋದಿ 2 ದಿನಗಳ ಹಿಂದೆ ಅಂಬೇಡ್ಕರ್ ಹುಟ್ಟಿ ಬಂದರು ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲವೆಂದಿರುವ ಹಿಂದಿನ ಮರ್ಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ, ನಾವು ಸಂಸತ್‌ನಲ್ಲಿ ಮಾತನಾಡಲು ಈ ದೇಶವನ್ನು ಏಕತೆಯಲ್ಲಿ ತೆಗೆದುಕೊಂಡು ಹೋಗಲು ಅಂಬೇಡ್ಕರ್ ಸ್ಫೂರ್ತಿ. ನಾನು ಸಹಾ ಶೂದ್ರ ಜಾತಿಗೆ ಸೇರಿದ್ದು, ಜಾತಿ ರಹಿತ ಸಮಾಜ ಕಟ್ಟಲು ಮತ್ತು ಕಾಂಗ್ರೆಸ್ ಸಾಮಾಜಿಕ ನ್ಯಾಯ ಉಳಿಸುವ ನ್ಯಾಯ ಪತ್ರದ ಗ್ಯಾರಂಟಿಗಳು ಜನರಿಗೆ ತಲುಪಿಸಲು ದೇಶದಲ್ಲಿ ಕಾಂಗ್ರೆಸ್ ಆಯ್ಕೆ ಮಾಡಿ ಜಿಲ್ಲೆಯಲ್ಲಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಪ್ರಸ್ತಾವಿಕವಾಗಿ ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿದರು. ಮಾಜಿ ಶಾಸಕ ಡಾ.ರಫೀಕ್ ಅಹಮದ್, ಹಿರಿಯ ಚಿಂತಕ ಕೆ.ದೊರೈರಾಜ್, ಕಾಂಗ್ರೆಸ್ ಮುಖಂಡರಾದ ಎನ್. ಗೋವಿಂದರಾಜು, ಇಕ್ಬಾಲ್ ಅಹಮದ್, ಕೆ.ಪಿ.ಸಿಸಿ ಕಾರ್ಯದರ್ಶಿ ರಾಮಕೃಷ್ಣ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ನಗರಸಭೆ ಸದಸ್ಯರಾದ ರೂಪಶ್ರೀ ಶೆಟ್ಟಾಳಯ್ಯ, ಎಸ್,ಮಹೇಶ್, ಜಿಲ್ಲಾ ಕಾಂಗ್ರೇಸ್‌ನ ಮುಖಂಡರಾದ ನರಸೀಯಪ್ಪ, ವಾಲೇಚಂದ್ರಯ್ಯ, ನಾರಾಯಾಣಮೂರ್ತಿ, ದಸಂಸದ ಸಂಚಾಲಕರಾದ ನರಸಿಂಹಯ್ಯ, ಬಿ.ಹೆಚ್ ಗಂಗಾಧರ್, ಟೂಡಾ ಮಾಜಿ ಸದಸ್ಯರಾದ ಜಯಮೂರ್ತಿ, ದಿನೇಶ್, ೨೦ನೇ ವಾರ್ಡ್ ಅಧ್ಯಕ್ಷರಾದ ಮಂಜುನಾಥ್, ತುಮಕೂರು ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ತಿರುಮಲಯ್ಯ, ಜಾಬೀರ್‌ಖಾನ್, ಕೃಷ್ಣಮೂರ್ತಿ, ಮುಬಾರಕ್, ಶಂಕರಯ್ಯ, ಗೋವಿಂದ್, ಹನುಮಕ್ಕ, ಶಾರದಮ್ಮ, ಅನುಪಮಾ, ಗಂಗಾ, ಶಾಂತಮ್ಮ, ಮೋಹನ್‌ಟಿಆರ್, ಧನಂಜಯ್,ರಂಗನಾಥ್ ಮುಂತಾದವರು ಪಾಲ್ಗೊಂಡಿದ್ದರು.