ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿರಿಯ ನಾಗರಿಕರೇ ನಮಗೆ ಕಣ್ಣಿಗೆ ಕಾಣುವ ದೇವರು. ಅವರ ಸೇವೆ ಮಾಡುವ ಮೂಲಕ ದೇವರ ಸೇವೆ ಮಾಡೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಇಲ್ಲಿಯ ಕಿಣಿಯೆಯಲ್ಲಿರುವ ಶಾಂತಾಯಿ ವೃದ್ದಾಶ್ರಮದಲ್ಲಿ ಗುರುವಾರ ಪ್ರಾರ್ಥನಾ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ದುರ್ಬಲರೆಂದು ಗುರುತಿಸಲ್ಪಟ್ಟಿರುವ ಹಿರಿಯ ನಾಗರಿಕರು, ವಿಕಲಚೇತನರು, ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ನನ್ನ ಅವಧಿಯಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಕನಸು ಹೊತ್ತಿದ್ದೇನೆ. ನಮ್ಮನ್ನು ದುರ್ಬಲರ ಸೇವೆಯಲ್ಲಿ ತೊಡಗಿಸಿಕೊಂಡಾಗ ಅದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಆಶ್ರಮದ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಇದೇ ವೇಳೆ ವೃದ್ದಾಶ್ರಮದ ಮಹಿಳೆಯರು ಸಚಿವರನ್ನು ಸತ್ಕರಿಸಿದರು. ವೃದ್ದಾಶ್ರಮದ ಅಧ್ಯಕ್ಷ ವಿಜಯ ಪಾಟೀಲ, ಕಾರ್ಯಾಧ್ಯಕ್ಷ ವಿಜಯ ಮೋರೆ, ಜಯಂತ ಹುಂಬರವಾಡಿ, ಸಮೀರ ಕಣಬರ್ಗಿ, ಕೀತ್ ಮಚಾಡೊ, ದಿಲೀಪ್ ಚಿಟ್ನಿಸ್, ಸಿದ್ಧಾರೂಢ ಹುಂದ್ರೆ, ಆನಂದ ದೇಸಾಯಿ, ಪ್ರವೀಣ್ ದೊಡ್ಡಣ್ಣನವರ್, ವಿಶ್ವನಾಥ್ ಕೆ ಸಾಮಂತ್, ರಾಜೇಂದ್ರ ಹರಕುಣಿ, ನಿಲೇಶ್ ಕೋಚಾ, ಬಸವನಗೌಡ ಪಾಟೀಲ, ಯುವರಾಜ್ ಕದಂ, ಬಾಮನವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕುಂತಲಾ ಎಸ್ ಹಣಬರ, ಪ್ರಿಯಾಂಕಾ ಪಿ.ಪಾಟೀಲ್, ವರ್ಷಾ ದುಕಾರೆ ಮೊದಲಾದವರು ಇದ್ದರು. ಅಲನ್ ಮೋರೆ ವಂದಿಸಿದರು.