ಸಂವಿಧಾನ ಭಾರತದ ಪರಮೋಚ್ಚ ಕಾನೂನವಾಗಿದ್ದು, ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ನಮ್ಮ ಸಂಕಲ್ಪದೊಂದಿಗೆ, ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸೋಣ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂವಿಧಾನ ಭಾರತದ ಪರಮೋಚ್ಚ ಕಾನೂನವಾಗಿದ್ದು, ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ನಮ್ಮ ಸಂಕಲ್ಪದೊಂದಿಗೆ, ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸೋಣ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜಿನ್ನಲ್ಲಿರುವ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ನಿಮಿತ್ತ ಸಂವಿಧಾನ ಪೀಠಿಕೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ರಾಷ್ಟ್ರರಕ್ಷಾ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದರು.

ನಮ್ಮ ಶ್ರೇಷ್ಠ ಸಂವಿಧಾನ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸದೃಢ ಸ್ತಂಭಗಳ ಮೇಲೆ ನಿಂತಿದೆ. ಸಂವಿಧಾನದ ಸದಾಶಯಗಳನ್ನು ಸದಾ ಎತ್ತಿಹಿಡಿಯುವ ಜೊತೆಗೆ, ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ಸಂಕಲ್ಪವನ್ನು ಪುನರುಚ್ಚರಿಸೋಣ. ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸೋಣ ಎಂದರು.

ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶಿವಾನಂದ ಟವಳಿ, ಬಸವರಾಜ ಯಂಕಂಚಿ, ಕೇಶವ ಭಜಂತ್ರಿ, ಗುಂಡುರಾವ ಶಿಂಧೆ, ಪ್ರವೀಣ ಖಾತೆದಾರ, ನಾಗರಾಜ ನಾರಾಯಣ್ಕರ, ಚಂದ್ರು ರಾಮವಾಡಗಿ, ರಾಜು ಶಿಂತ್ರೆ, ಸಂಗನಗೌಡ ಗೌಡರ, ರಾಮು ಕಟ್ಟಿಮನಿ, ಆನಂದ ಕೊಟಗಿ, ನಗರಸಭೆ ಸದಸ್ಯರಾದ ಸರಸ್ವತಿ ಕುರುಬರ, ಅಂಬಾಜಿ ಜೋಷಿ, ಚನ್ನಯ್ಯ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.