ಬಸವ ಪುರಾಣ ಯಶಸ್ವಿಗೆ ಶ್ರಮಿಸೋಣ

| Published : Oct 05 2024, 01:30 AM IST

ಸಾರಾಂಶ

ಇಂದು ಬಸವ ತತ್ವ ಶ್ರೀಗಳ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಅದರಲ್ಲೂ ಯುವ ಸಮೂಹಕ್ಕೆ ತಿಳಿಸೋಣ

ಗಜೇಂದ್ರಗಡ: ಬಸವ ಪುರಾಣ ಸರಳ ಪುರಾಣವಲ್ಲ, ಇದೊಂದು ಕ್ರಾಂತಿಕಾರಿ ಪುರಾಣವಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸೋಣ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬಸವ ಪುರಾಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಾಲಕೆರೆ ಶ್ರೀಅನ್ನದಾನೇಶ್ವರ ಸಂಸ್ಥಾನಮಠದ ವತಿಯಿಂದ ಶುಕ್ರವಾರ ಸ್ಥಳೀಯ ಜಿ.ಕೆ. ಬಂಡಿ ವಾರ್ಡ್‌ ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಹಾಲಕೆರೆಯ ಮಠದ ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಬಸವ ತತ್ವ ಪ್ರಚಾರದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದರು. ಊರು, ಊರಿಗೆ ತೆರಳಿ ಪೂಜ್ಯರು ಸಂಚಾರಿ ಬಸವ ಪುರಾಣ ನಡೆಸಿ ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣದ ಆಶಯ ಮುಂಚೂಣಿಗೆ ತಂದಿದ್ದರು. ಇಂದು ಬಸವ ತತ್ವ ಶ್ರೀಗಳ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಅದರಲ್ಲೂ ಯುವ ಸಮೂಹಕ್ಕೆ ತಿಳಿಸೋಣ. ಹಾಲಕೆರೆ ಮಠದ ಪ್ರತಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಸಾರ್ಥಕ ಭಾವನೆ ಭಕ್ತರು, ನಮ್ಮದಾಗಿದೆ. ಪಟ್ಟಣದಲ್ಲಿ ನಡೆಯುವ ಬಸವ ಪುರಾಣ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಶ್ರೀಗಳು ನೀಡಿದ ಒಂದು ಕರೆಗೆ ಪಟ್ಟಣ ಸೇರಿ ಸುತ್ತಲಿನ ೮೦ಕ್ಕೂ ಅಧಿಕ ಗ್ರಾಮಗಳ ಭಕ್ತರು ಆಗಮಿಸಿದ್ದಾರೆ.

ಪಟ್ಟಣದಲ್ಲಿ ನಡೆಯುವ ಬಸವ ಪುರಾಣ ಸರಳ ಪುರಾಣವಲ್ಲ. ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದ ಜಗಜ್ಯೋತಿ ಬಸವೇಶ್ವರರು ಹಾಗೂ ಶರಣರ ಆಶಯ ತಿಳಿಸುವ ಕಾಂತ್ರಿಕಾರಿ ಪುರಾಣವಾಗಿದೆ ಎಂದ ಅವರು, ಈ ಹಿಂದೆ ಮಠಾಧೀಶರು ಅಪ್ಪಣೆ ಮಾಡಿದರೆ ಭಕ್ತರು ಆಗಮಿಸುತ್ತಿದ್ದರು. ಆದರೆ ಈಗ ಕೆಲ ಬದಲಾವಣೆಗೆ ನಾವು ಮುಂದಾಗೋಣ. ಹೀಗಾಗಿ ಪಟ್ಟಣದಲ್ಲಿ ನಡೆಯುವ ಬಸವ ಪುರಾಣ ಕಾರ್ಯಕ್ರಮ ನಿಮಿತ್ತ ಶ್ರೀಗಳು ಸಮಯ ಸಿಕ್ಕಾಗ ೨-೩ ಶಾಖಾ ಮಠಗಳಿಗೆ ತೆರಳಿ ತೆರಳಿ ಭಕ್ತರಿಗೆ ಪ್ರವಚನ ನೀಡಿ ಬಸವ ಪುರಾಣಕ್ಕೆ ಆಹ್ವಾನಿಸುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದು ಶ್ರೀಗಳಿಗೆ ಸಲಹೆ ನೀಡಿದರು.

ಹಾಲಕೆರೆ ಸಂಸ್ಥಾನಮಠದ ಮುಪ್ಪಿನಬಸವಲಿಂಗ ಶ್ರೀಗಳು ಮಾತನಾಡಿ, ಪಟ್ಟಣದಲ್ಲಿ ಬಸವ ಪುರಾಣ ನಡೆಸಬೇಕು ಎಂದು ಹಿರಿಯ ಶ್ರೀಗಳು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಕನಸನ್ನು ಸಾಕಾರಾಗೊಳಿಸಲು ಭಕ್ತರೆಲ್ಲರೂ ಮಠದೊಂದಿಗೆ ಕೈಜೋಡಿಸಲು ಮುಂದಾಗಿದ್ದು ಹರ್ಷ ತಂದಿದೆ. ಹೀಗಾಗಿ ಪಟ್ಟಣದಲ್ಲಿ ನ.೨೫ ರಿಂದ ಡಿ. ೨೬ರವೆರೆಗೆ ಪಟ್ಟಣದಲ್ಲಿ ಬಸವ ಪೂರಾಣ ನಡೆಸಲಾಗುವುದು ಎಂದು ಪೂರ್ವಭಾವಿ ಸಭೆಯಲ್ಲಿ ನೆರೆದಿದ್ದ ಭಕ್ತರಿಗೆ ಶ್ರೀಗಳು ತಿಳಿಸಿದರು.

ಮುಖಂಡ ಬಸವರಾಜ ಕೊಟಗಿ, ಬಸವಣ್ಣ ಹಾಗೂ ಶರಣರ ಆಶಯಗಳಾದ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯದ ಪ್ರಾಮುಖ್ಯತೆ ಬಗ್ಗೆ ಬಸವ ಪುರಾಣದಲ್ಲಿ ಪ್ರಸ್ತಾಪವಿರಲಿ ಎಂದರು. ಗುಡೂರು ಗ್ರಾಮದ ಅನ್ನದಾನ ಶಾಸ್ತ್ರಿಗಳು ಹಾಗೂ ಎಫ್.ಎನ್. ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಲ್ಲಣ್ಣ ಕೋಮಾರಿ, ಚಂದ್ರಪ್ಪ ಗುಡದೂರ ಹಾಗೂ ಬಸವರಾಜ ಮೂಲಿಮನಿ ಮಾತನಾಡಿದರು.

ಗಜೇಂದ್ರಗಡ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಸ್ವಾಗತಿಸಿದರು.

ಈ ವೇಳೆ ಸಂಗನಾಳ ವಿಶ್ವವೇಶ್ವರ ದೇವರು, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಎ.ಪಿ.ಗಾಣಿಗೇರ, ಪ್ರಭು ಚವಡಿ, ಶೇಖರಯ್ಯ ಹಿರೇಮಠ, ಎನ್.ಆರ್. ಗೌಡರ, ವೀರಣ್ಣ ಶೆಟ್ಟರ್‌,ವೀರಪ್ಪ ಪಟ್ಟಣಶೆಟ್ಟಿ, ಗುರುನಗೌಡರ ನಾಗೂರ, ಮಲ್ಲಣ್ಣ ಯಲಿಗಾರ, ಶಂಕ್ರಯ್ಯ ಮೇಟಿಮಠ, ಗಿರೀಶಗೌಡ್ರ ಮುಲ್ಕಿಪಾಟೀಲ, ರಾಜು ಸಾಂಗ್ಲಿಕರ, ಬಸಪ್ಪ ಅಕ್ಕಿ, ಕೆ.ಕೆ. ಬಾಗವಾನ, ವೀರಣ್ಣ ಹಳ್ಳಿ, ಮಹಾಂತೇಶ ಹಿರೇಮಠ, ಆರ್.ಜಿ. ಪಾಟೀಲ, ಕೆ.ಜಿ. ಸಂಗಟಿ ಸೇರಿ ಇತರರು ಇದ್ದರು.