ಸಾರಾಂಶ
ಕನ್ನಡಪ್ರಭ ವಾರ್ತೆ,ತೇರದಾಳ (ರ-ಬ)
ರಾಷ್ಟ್ರೀಯ ಹಬ್ಬಗಳಲ್ಲಿ ವಿಷಯದಲ್ಲಿ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡಕೂಡದು. ಎಲ್ಲರೂ ಅತ್ಯಂತ ಸಡಗರ, ಸಂಭ್ರಮ, ಗೌರವಾದಗಳಿಂದ ಹಬ್ಬದ ರೀತಿಯಲ್ಲಿಆಚರಿಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಪಟ್ಟಣದ ಪುರಸಭೆಯಲ್ಲಿ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಪಟ್ಟಣದ ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ, ಅರೆ ಸರ್ಕಾರಿ ಇನ್ನಿತರ ಯಾವುದೇ ಸಂಘ-ಸಂಸ್ಥೆಗಳ ಕಚೇರಿಗಳಲ್ಲಿ ಸುಣ್ಣಬಣ್ಣ ಬಳಿದು ವಿದ್ಯತ್ ದೀಪಗಳಿಂದ ಅಲಂಕರಿಸಬೇಕು. ಧ್ವಜದ ಸ್ವಚ್ಛತೆ ಬಗ್ಗೆ ಜಾಗ್ರತೆ ವಹಿಸಬೇಕು. ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬೆಳಗ್ಗೆ 7-05ಕ್ಕೆ ಧ್ವಜಾರೋಹಣ ಮಾಡಿ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬೆಳಗ್ಗೆ 8.30ಕ್ಕೆ ನಡೆಯುವ ಸಾರ್ವಜನಿಕ ಧ್ವಜಾರೋಹಣಕ್ಕೆ ಎಲ್ಲಾ ಶಾಲೆಯ ಮಕ್ಕಳು, ಇಲಾಖೆಯ ಅಧಿಕಾರಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಪಟ್ಟಣದ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ನಗರದ ಹಾಗೂ ಕ್ರೀಡಾಂಗಣದ ಬಗ್ಗೆ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಪೂರ್ವಭಾವಿ ಸಭೆಗೆ ಗೈರು ಹಾಜರಾಗಿದ್ದಕ್ಕೆ ಗರಂ ಆದ ಶಾಸಕರು, ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ತಹಸೀಲ್ದಾರ್ ಗೆ ಸೂಚಿಸಿದರು. ಗಣರಾಜ್ಯೋತ್ಸವ ದಿನದಂದು ಎಲ್ಲಾ ಅಧಿಕಾರಿಗಳು ಸ್ಥಳಿಯವಾಗಿಯೇ ಇರಬೇಕು ಮತ್ತು ಸಾರ್ವಜನಿಕ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲೇಬೇಕು ಹೇಳಿದರು.ತೇರದಾಳ ನೂತನ ತಾಲೂಕಾಗಿರುವುದರಿಂದ ಎಲ್ಲರೂ ಈ ಹಬ್ಬಗಳಲ್ಲಿ ಪಾಲ್ಗೊಂಡು ವಿಶೇಷ ರೀತಿಯಾಗಿ ಆಚರಿಸೋಣ. ಪ್ಲಾಸ್ಟಿಕ್ ಧ್ವಜವನ್ನು ಕಡ್ಡಾಯವಾಗಿ ನಿಷೇಧ ಮಾಡಿದ್ದು ಸಾರ್ವಜನಿಕರು ಬಳಸಬಾರದು ಶಾಲಾಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಸಲಹೆ ನೀಡಿದರು.
ರಬಕವಿ-ಬನಹಟ್ಟಿ ತಾಪಂ ಇ.ಒ.ಪಟ್ಟೇಹಾಳ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ ವಂದಿಸಿದರು .ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ ವರದಿ ವಾಚಿರ್ದರು. ರಬಕವಿ-ಬನಹಟ್ಟಿ ತಹಸೀಲ್ದಾರ್ ಸ್ವಾದಿ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಉಪತಹಸೀಲ್ದಾರ್ ಎಸ್.ಬಿ. ಮಾಯನ್ನವರ, ಪಿ.ಎಸ್.ಐ.ಅಪ್ಪಣ್ಣ ಐಗಳಿ ಇದ್ದರು.ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಪಿ.ಡಬ್ಲುಡಿ, ಜಿಎಲ್‌ಬಿಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕೆಡಿಪಿಸಭೆ ಮುಂದೂಡಿಕೆ: ಮಾಜಿ ಸಚಿವ ಮುರುಗೇಶ ನಿರಾಣಿಯವರ ತಾಯಿ ವಿಧಿವಶವಾದ ಕಾರಣ ಆ.15ರಂದು ತೇರದಾಳ ಪುರಸಭೆಯಲ್ಲಿ ನಡೆಯಬೇಕಿದ್ದ ಕೆ.ಡಿ.ಪಿ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ದಿನಾಂಕ ನಿಗದಿ ಮಾಡಿ ತಿಳಿಸಲಾಗುವುದು,ಸಭೆ ತೇರದಾಳದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.