ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಗದುಗಿನ ಪುಟ್ಟರಾಜ ಗವಾಯಿಗಳ ಹಾಗೆ ಕಲಬುರಗಿಯ ದತ್ತು ಅಗರವಾಲ ಅವರು ಅಂಧರಿಗೆ ಬೆಳಕಾಗಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.ನಗರ ಹೊರಹೊಲಯದ ಮಾದರಸನಳ್ಳಿ (ಕೋಬ್ರಾ ಕಾಲೋನಿ), ಜಿಡಿಎ ಲೇಔಟ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆಯ ಹೊಸ ಕಟ್ಟಡ ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿ ಮತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬರೆದಿರುವ ಸಂವಿಧಾನದ ಫಲವಾಗಿ ಇಂದು ಎಲ್ಲಾ ಮಹಿಳೆಯರು ಶಿಕ್ಷಣ ಪಡೆಯುವುದಕ್ಕೆ ಸಾದ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಕಲಚೇತನರ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಮಾತನಾಡಿ, ಅತಿಹೆಚ್ಚು ಅಂಗವಿಕಲರು ನಮ್ಮ ಭಾರತ ದೇಶದಲ್ಲಿ ಇದ್ದಾರೆ. ಶಿಕ್ಷಣ ಪಡೆದು ಹಲವಾರು ಕ್ಷೇತ್ರಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ದತ್ತು ಅಗರವಾಲ ಅವರು ಸಹ ಅಂಧರಾಗಿರುವುದರಿಂದ ಅವರ ನೋವು ಏನು ಎಂಬುದು ಅರಿತು ಅಂಧರಿಗಾಗಿ ತಮ್ಮ ತಾಯಿಯ ಹೆಸರಿನಲ್ಲಿ ಶಾಲೆಯ ಪ್ರಾರಂಭಿಸಿ ಇಂದು ಬೃಹತ್ ಗಾತ್ರದ ಸ್ವಂತ ಕಟ್ಟಡವನ್ನು ಅಂಧ ಮಕ್ಕಳ ಶಿಕ್ಷಣಕ್ಕಾಗಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನಮ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪ್ರತಿವರ್ಷ ಸುಮಾರು 100ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ ಅಂದರೆ, ಅದಕ್ಕೆ ದತ್ತು ಅಗರವಾಲ ಅವರ ಪರಿಶ್ರಮ ಬಹಳಷ್ಠಿದೆ. ಅಂಧ ಮಕ್ಕಳ ನೂತನ ವಸತಿಯುತ ಶಾಲೆ ಕಟ್ಟಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಯಾವಕಾಶ ಕಲ್ಪಿಸಿಕೊಂಡು ಶಾಲೆಗೆ ಆಗಮಿಸಿ ಮಕ್ಕಳ ಜೊತೆಗೆ ಸಂವಾದ ಮಾಡಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಶಾಲಾ ಕಟ್ಟಡಕ್ಕೆ ಸಹಾಯಧನ ನೀಡಿದವರು:
ಡಾ. ವಸಂತರಾವ ಮೈಸೂರು, ಡಾ. ಸಿ. ಶಶಿಕಲಾ ಮೈಸೂರು, ಡೋನೆಟ್ ಕಾರ್ಟ್ ಅನೀಲ ರೆಡ್ಡಿ, ಮಳಖೆಡ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಮುಖ್ಯಸ್ಥರಾದ ಉದಯಕುಮಾರ ಪವಾರ, ಡಾ. ಶರಣಪ್ಪ ಕೀಣಗಿ, ಯಶವಂತ ಗುರುಕರ, ಬಿ.ಜಿ. ದಿವಾಕರ, ಭಾರತೀಯ ಜೀವಾ ಭೀಮಾ ನಿಗಮ (ಜಿ.ಜೆ.ಎಫ್). ದೇಣಿಗೆ ನೀಡಿದ್ದಾರೆ.ಭಾರತೀಯ ಜೀವಾ ಭೀಮಾ ನಿಗಮ ಹಿರಿಯ ಪ್ರಬಂಧಕರಾದ ಜಿ. ರಮೇಶ, ಮಳಖೇಡ್ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಸಿಎಸ್ ಆರ್ ಮುಖ್ಯಸ್ಥರಾದ ಚೇತನ ವಾಗ್ಮೋರೆ, ಮಾತೋಶ್ರೀ ಅಂಬುಬಾಯಿ ಅಂಧ ಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷರಾದಶೋಭಾರಾಣಿ ಅಗರವಾಲ, ಉಪಾಧ್ಯಕ್ಷರಾದ ಎಂ.ಐ. ಅರಸಿಕೇರಿ, ಕಾರ್ಯದರ್ಶಿ ಧನರಾಜ ತಾಂಬೂಳೆ, ಜಂಟಿ ಕಾರ್ಯದರ್ಶಿ ಅನೀಲ ಬುಜಾಡೆ, ಖಜಾಂಚಿ ಕು.ಪ್ರಿಯಾ ಹೊಸಗೌಡ, ಶಾಲಾ ಮುಖ್ಯೋಪಾಧ್ಯಾಯರಾದ ಸಂಗೀತಾ ಠಾಕೂರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಕನ್ಯಾರಾಣಿ ನೆರವೇರಿಸಿದರು.