ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳಗಳು ವೈಜ್ಞಾನಿಕ ಚಿಂತನೆ ಬೆಳೆಸಲಿ

| Published : Jan 12 2025, 01:16 AM IST

ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳಗಳು ವೈಜ್ಞಾನಿಕ ಚಿಂತನೆ ಬೆಳೆಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ: ವಿಜ್ಞಾನ ಮೇಳಗಳು ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ವೇದಿಕೆಗಳಾಗಬೇಕು ಎಂದು ಪಟ್ಟಣದ ಸ್ವಾಮಿ ವಿವೇಕಾನಂದ ಅಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎನ್.ರಾಯ್ಕರ್ ಹೇಳಿದರು.

ಶನಿವಾರ ಪಟ್ಟಣದ ಸ್ವಾಮಿ ವಿವೇಕಾನಂದ ಅಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಮೇಳ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲೀಷ್ ಅಕಾಡೆಮಿ ಸಂಸ್ಥಾಪಕ ಇದ್ರೀಸ್ ಪಾಷಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳು ಮುಂದಿನ 40 ವರ್ಷಗಳಲ್ಲಿ ಅತ್ಯಂತ ಸಂತೋಷದಾಯಕ ಜೀವನ ನಡೆಸಬೇಕು ಎಂಬ ಮನಸ್ಥಿತಿಯನ್ನು ತಲೆಯಲ್ಲಿಟ್ಟುಕೊಂಡು ಎಲ್.ಕೆ.ಜಿ. ಯುಕೆಜಿಯಿಂದಲೇ ತಮ್ಮ ಮಕ್ಕಳನ್ನು ಬಾಲ್ಯ ಸಹಜವಾದ ಅಟ, ತುಂಟಾಟಗಳಿಂದ ದೂರವಿಸಿ ಸ್ವತಂತ್ರ ನೀಡಿದೇ ಕೇವಲ ಓದು ಹಾಗೂ ಹೋಂ ವರ್ಕ್‌ಗಳಿಗೆ ಸೀಮಿತಗೊಳ್ಳಿಸಿ ಮಕ್ಕಳ ಸುಂದರ ಬಾಲ್ಯ ಸಹಜ ಜೀವನವನ್ನು ಪರೋಕ್ಷವಾಗಿ ಕಸಿದುಕೊಳ್ಳುತ್ತಿದ್ದಾರೆ ಎಂದರು.

ಶಾಲಾ ಸಂಸ್ಥೆಯ ಕಾರ್ಯದರ್ಶಿ ಜೆ.ಕೆ.ಬಾಬು ಮಾತನಾಡಿದರು.

ಇದೇ ವೇಳೆ ಕಳೆದ ವರ್ಷ ಎಸ್‌ಎಸ್ಎಲ್‌ಸಿಯಲ್ಲಿ ಆತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಡಳಿತ ಮಂಡಳಿಯ ಖಂಜಾಚಿ ಕಿರಣ್ ಎಂ.ರಾಯ್ಕರ್, ಅಡಳಿತಾಧಿಕಾರಿ ಸಮನಾ, ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಪಾಟೀಲ್ ಮತ್ತಿತರರಿದ್ದರು.