ಸಮಾಜ ಸೇವೆ ಪ್ರಮುಖ ಗುರಿಯಾಗಲಿ: ಚಂದ್ರಾಪಟ್ಟಣ

| Published : Jan 10 2024, 01:45 AM IST

ಸಾರಾಂಶ

ಇಳಕಲ್ಲ: ನಗರಸಭೆಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ನೂತನ ಸದಸ್ಯರಿಗೆ ನಗರಾಭಿವೃದ್ಧಿ ಸಮಿತಿ ಪರವಾಗಿ ಸತ್ಕರಿಸಲಾಯಿತು. ಸಮಾಜದ ಸೇವೆ ಮಾಡುವ ಅವಕಾಶ ಸಿಕ್ಕಾಗ ಸರಿಯಾಗಿ ಬಳಸಿ ಸಮಾಜದಲ್ಲಿ ಅತ್ಯತ್ತಮ ನಾಗರಿಕರಾಗಿ ಗುರುತಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂಬಣ್ಣ ಚಂದ್ರಾಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಸಮಾಜದ ಸೇವೆ ಮಾಡುವ ಅವಕಾಶ ಸಿಕ್ಕಾಗ ಸರಿಯಾಗಿ ಬಳಸಿ ಸಮಾಜದಲ್ಲಿ ಅತ್ಯತ್ತಮ ನಾಗರಿಕರಾಗಿ ಗುರುತಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂಬಣ್ಣ ಚಂದ್ರಾಪಟ್ಟಣ ಹೇಳಿದರು.

ಇಳಕಲ್ಲ ನಗರಸಭೆಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ನೂತನ ಸದಸ್ಯರಿಗೆ ನಗರಾಭಿವೃದ್ಧಿ ಸಮಿತಿ ಪರವಾಗಿ ಸತ್ಕರಿಸಿ ಮಾತನಾಡಿದರು. ಸರ್ಕಾರದಿಂದ ನೇಮಕವಾದ ನೀವು ನಗರದ ಎಲ್ಲ ವಾರ್ಡಗಳ ಪ್ರತಿನಿಧಿಗಳು. ನಾಗರಿಕರಿಗೆ ಮೂಲ ಸೌಲಭ್ಯಗಳಾದ ಗಟಾರ್, ಬೀದಿದೀಪ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಶಾಸಕರು ನಿಮಗೆ ನೀಡಿದ ಅಧಿಕಾರವನ್ನು ಸರಿಯಾಗಿ ಬಳಿಸಿಕೊಂಡು ನಿಮಗೂ ಅವರಿಗೂ ಹೆಸರು ತರುವಂಥ ಕಾರ್ಯ ಮಾಡಿ ಎಂದರು.

ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಅಬು ಹಳ್ಳಿಯಲ್ಲಪ್ಪ ಪೂಜಾರಿ, ರಾಜೇಶಾ ಮದರಕ, ಮಲ್ಲು ಮಡಿವಾಳರ, ಪಂಪಣ್ಣ ಮಾಗನೂರ ಅವರನ್ನು ಸತ್ಕರಿಸಲಾಯಿತು. ಹಿರಿಯರಾದ ಎಲ್.ಬಿ. ಅರಸಿದ್ದಿಬಿ ಬಾಬು, ಬಸವರಾಜ ಮಠದ, ಬಾಗವಾನ ಕಂಡಕ್ಟರ, ಜಾಕೀರ್ ತಾಳಿಕೊಟಿ, ಪ್ರದೀಪ ಪಲ್ಲೇದ, ಶರಣಗೌಡ ಕಂದಕೂರ, ದುರಗಪ್ಪ ಕನ್ನೂರ, ರಿಯಾಜ್‌ ಮಕಾನದಾರ, ಇತರರು ಉಪಸ್ಥಿತರಿದ್ದರು.