ಶ್ರೀನಿವಾಸ್‌ ಪ್ರಸಾದ್ ರಾಜಕಾರಣ ನಮಗೆಲ್ಲ ಮಾದರಿಯಾಗಲಿ: ಮಹೇಶ್‌

| Published : May 22 2024, 01:01 AM IST

ಶ್ರೀನಿವಾಸ್‌ ಪ್ರಸಾದ್ ರಾಜಕಾರಣ ನಮಗೆಲ್ಲ ಮಾದರಿಯಾಗಲಿ: ಮಹೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಅಯೋಜಿಸಿದ್ದ ನುಡಿನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂಸದ ವಿ.ಶ್ರೀನಿವಾಸಪ್ರಸಾದ್ ೬ ಬಾರಿ ಸಂಸದರಾಗಿದ್ದು, ೫೦ ವರ್ಷ ಅತ್ಯಂತ ಪ್ರಾಮಾಣಿಕ ರಾಜಕಾರಣ ಮಾಡಿದ್ದಾರೆ. ಅವರು ಬದುಕಿದ ರೀತಿ ಇದೆಯಲ್ಲ ಅದು ನಮಗೆಲ್ಲ ಮಾದರಿ ಆಗಬೇಕು. ನಾವು ಆ ಮಾರ್ಗದಲ್ಲಿ ನಡೆಯಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಅಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು. ವಿ.ಶ್ರೀನಿವಾಸಪ್ರಸಾದ್ ರಾಜ್ಯ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಅತ್ಯಂತ ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದಾರೆ ಅವರ ನಿಷ್ಕಳಂಕ ರಾಜಕಾರಣ ಮಾಡಿದರಲ್ಲ ಅದು ನಮಗೆ ಮಾದರಿಯಾಗಬೇಕು ಎಂದರು. ವಿ.ಶ್ರೀನಿವಾಸಪ್ರಸಾದ್ ಅತ್ಯಂತ ನೇರ, ನಿಷ್ಠುರ ರಾಜಕಾರಣಿಯಾಗಿದ್ದರು. ಬಿಜೆಪಿ ಸಂಸದರಾಗಿ ಪಕ್ಷದ ತಪ್ಪುಗಳನ್ನು ನೇರವಾಗಿ ಪ್ರಶ್ನೆ ಮಾಡುತ್ತಿದ್ದರು. ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಎಲ್ಲ ಸಮುದಾಯದ ಮುಖಂಡರೊಂದಿಗೆ ಉತ್ತಮ ಬಾಂದವ್ಯವಿಟ್ಟುಕೊಂಡಿದ್ದರು. ಶೋಷಿತ ಜನರ ಪರ ಧ್ವನಿಯಾಗಿದ್ದರು ಅವರಿಗೆ ಅವರೇ ಸಾಟಿ ಹೊರತು ಬೇರೆ ಯಾರು ಸಾಟಿ ಇಲ್ಲ ಎಂದರು.ಪ್ರಸಾದ್ ಅವರದ್ದು ಮೇರು ವ್ಯಕ್ತಿತ್ವ :

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಬಿಜೆಪಿಯೊಂದಿಗೆ ಒಡನಾಟ, ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದರು. ನಿಷ್ಠುರವಾಗಿ ಮಾತನಾಡುತ್ತಿದ್ದರು ಅಷ್ಠೆ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದರು. ಪ್ರಸಾದ್ ಮೇರು ವ್ಯಕ್ತಿತ್ವ ಹೊಂದಿದ್ದರು. ಮಾರ್ಗದರ್ಶಕರಾಗಿದ್ದರು. ಅವರು ಆತ್ಮಕ್ಕೆ ಶಾಂತಿ ನೆಲೆಸಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಶಾಸಕ ಎಸ್. ಬಾಲರಾಜ್, ಹರ್ಷವರ್ಧನ್, ನಿಕಟಪೂರ್ವ ಅಧ್ಯಕ್ಷ ಆರ್.ಸುಂದರ್, ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ‍್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಮುಖಂಡ ಹನುಮಂತಶೆಟ್ಟಿ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಹಾಪ್ ಕಾಪ್ಸ್ ಅಧ್ಯಕ್ಷ ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರ, ಮೂಡ್ನಾಕೂಡು ಪ್ರಕಾಶ್, ಮಾಜಿ ಚೂಡಾಧ್ಯಕ್ಷ ಕುಲಗಾಲ ಶಾಂತಮೂರ್ತಿ, ಬಾಲಸುಬ್ರಹ್ಮಣ್ಯಂ, ಡಾ.ಮೋಹನ್, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಇತರರು ಹಾಜರಿದ್ದರು.