ಸಾರಾಂಶ
ವಿದ್ಯಾರ್ಥಿ ಜೀವನವು ಬಂಗಾರದ ಬದುಕಿದ್ದಂತೆ. ಬಾಲ್ಯದಲ್ಲಿ ತಪ್ಪು ದಾರಿ ತುಳಿದು ಜೀವನ ಹಾಳು ಮಾಡಿಕೊಳ್ಳಬಾರದು.
ಮುಂಡಗೋಡ: ಓದುವ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಆಮಿಷ ಹಾಗೂ ಆಕರ್ಷಣೆಗೊಳಗಾಗದೆ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಿಪಿಐ ರಂಗನಾಥ ನೀಲಮ್ಮನವರ ತಿಳಿಸಿದರು.ಸೋಮವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ ಇಲಾಖೆ ವತಿಯಿಂದ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಜಾಥಾ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನವು ಬಂಗಾರದ ಬದುಕಿದ್ದಂತೆ. ಬಾಲ್ಯದಲ್ಲಿ ತಪ್ಪು ದಾರಿ ತುಳಿದು ಜೀವನ ಹಾಳು ಮಾಡಿಕೊಳ್ಳಬಾರದು. ಇದು ಡಿಜಿಟಲ್ ಯುಗವಾಗಿರುವುದರಿಂದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್ ಮೂಲಕ ಅಪರಾಧ ಮತ್ತು ವಂಚನೆಗಳು ಹೆಚ್ಚಿವೆ. ಹಾಗಾಗಿ ಯಾವುದೇ ಪೋನ್ ಕರೆ ಮತ್ತು ಸುಳ್ಳು ಸಂದೇಶಗಳನ್ನು ನಂಬಿ ಮೋಸಕ್ಕೊಳಗಾಗಬಾರದು. ಪೊಲೀಸರೆಂದು ಹೇಳಿಕೊಂಡು ಯಾರಾದರೂ ಕರೆ ಮಾಡಿದರೂ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಈ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು. ಯಾರಿಗೆ ಏನೇ ತೊಂದರೆಯಾದರೂ ತಕ್ಷಣ ೧೧೨ಕ್ಕೆ ಕರೆ ಮಾಡಿದರೆ ೧೫- ೨೦ ನಿಮಿಷದಲ್ಲಿ ಪೊಲೀಸ ಇಲಾಖೆ ತಮ್ಮ ನೆರವಿಗೆ ಬರಲಿದೆ. ಯಾರು ಕೂಡ ಭಯಪಡುವ ಅವಶ್ಯಕತೆ ಇಲ್ಲ ಎಂದ ಅವರು, ಬಳಿಕ ವಿದ್ಯಾರ್ಥಿಗಳಿಗೆ ಪೊಲೀಸ ಠಾಣೆಯೊಳಗೆ ಕರೆದೊಯ್ದು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಸೇವೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಿಎಸ್‌ಐ ಪರಶುರಾಮ ಮಿರ್ಜಗಿ, ಹನ್ಮಂತ ಕುಳಗುಂಟಿ, ಉಪನ್ಯಾಸಕ ಅಲಿ ಅಹ್ಮದ ಗೋಕಾವಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಅಲಗೇರಿ ಸರ್ಕಾರಿ ಶಾಲೆಗೆ ಶೈಕ್ಷಣಿಕ ಪರಿಕರ ಕೊಡುಗೆಅಂಕೋಲಾ: ನನ್ನ ಶಾಲೆ ನನ್ನ ಕೊಡುಗೆ ಅಡಿಯಲ್ಲಿ ಅಲಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಭಾಶ ವಿಠೋಬಾ ಗಾಂವಕರ ಅವರು ಪ್ರಿಂಟರ್ ಯಂತ್ರ ಮತ್ತು ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿ ಶೈಕ್ಷಣಿಕ ಪ್ರೇಮ ಮೆರೆದಿದ್ದಾರೆ.
ಈ ಕೊಡುಗೆಯನ್ನು ತಾಪಂ ಮಾಜಿ ಅಧ್ಯಕ್ಷ ವಿನೋದ ಗಾಂವಕರ ಮತ್ತು ಗ್ರಾಪಂ ಸದಸ್ಯೆ ಜೀವಿತಾ ಗಾಂವಕರ ಅವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ಪುಡ್ಲಿಂಕ ನಾಯ್ಕ ಮತ್ತು ಮುಖ್ಯಾಧ್ಯಾಪಕ ಉಮೇಶ ಆಗೇರ ಅವರಿಗೆ ಹಸ್ತಾಂತರಿಸಿದರು.ತಾಪಂ ಮಾಜಿ ಅಧ್ಯಕ್ಷ ವಿನೋದ ಗಾಂವಕರ ಮಾತನಾಡಿ, ಶಿಕ್ಷಣಪ್ರೇಮಿ ಸುಭಾಶ ಗಾಂವಕರ ಕೊಡುಗೆ ಮಾದರಿಯಾಗಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ರಾಜು ಪುಡ್ಲಿಂಕ ನಾಯ್ಕ, ಉಪಾಧ್ಯಕ್ಷೆ ಸಂಜನಾ ನಾಯ್ಕ ಶಿಕ್ಷಣ ಸಂಯೋಜಕಿ ರಚನಾ ನಾಯಕ, ಸಂಪನ್ಮೂಲ ವ್ಯಕ್ತಿ ರಾಜಲಕ್ಷ್ಮಿ ನಾಯಕ, ಗ್ರಾಪಂ ಸದಸ್ಯೆ ಜೀವಿತಾ ಗಾಂವಕರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ನಾಯ್ಕ, ರಾಜು ನಾಯಕ, ವಿನಯ ದೇಸಾಯಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಉಮೇಶ ಆಗೇರ ಸ್ವಾಗತಿಸಿದರು. ಶಿಕ್ಷಕ ಪಿಲೀಪ್ ಫರ್ನಾಂಡೀಸ್ ನಿರೂಪಿಸಿದರು.