ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಲಿ: ಸಂಗೀತಾ ಪ್ರಭು

| Published : Aug 27 2024, 01:38 AM IST

ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಲಿ: ಸಂಗೀತಾ ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳ ಪಟ್ಟಣದ ಶ್ರೀ ವಿ.ಆರ್.ಡಿ.ಎಂ. ಟ್ರಸ್ಟ್‌ನ ವಿಮಲಾ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್‌ ಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಾಲೆಯ ಧರ್ಮದರ್ಶಿ ರಾಧಾ ಆರ್. ದೇಶಪಾಂಡೆ ಅವರ ಜನ್ಮದಿನ ಆಚರಿಸಲಾಯಿತು.

ಹಳಿಯಾಳ: ಪಟ್ಟಣದ ಶ್ರೀ ವಿ.ಆರ್.ಡಿ.ಎಂ. ಟ್ರಸ್ಟ್‌ನ ವಿಮಲಾ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್‌ ಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಾಲೆಯ ಧರ್ಮದರ್ಶಿ ರಾಧಾ ಆರ್. ದೇಶಪಾಂಡೆ ಅವರ ಜನ್ಮದಿನ ಆಚರಿಸಲಾಯಿತು.

ಸಂಗೀತಾ ಪ್ರಕಾಶ ಪ್ರಭು ಮಾತನಾಡಿ, ಕೃಷ್ಣ ಮತ್ತು ಸುಧಾಮರ ಗೆಳೆತನದ ಸವಿಬಾಂಧವ್ಯದ ಕುರಿತಾದ ದೃಷ್ಟಾಂತಗಳನ್ನು ಹೇಳಿ, ವಿದ್ಯಾರ್ಥಿಗಳು ಉತ್ತಮ ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.

ಶಾಲೆಯ ಪ್ರಾಂಶುಪಾಲ ಬಸವರಾಜು ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಂಡರ್ ಗಾರ್ಡನ್ ವಿದ್ಯಾರ್ಥಿಗಳು ರಾಧಾ ಮತ್ತು ಕೃಷ್ಣರ ವೇಷಧಾರಿಗಳಾಗಿ ನೃತ್ಯ ಪ್ರದರ್ಶಿಸಿದರು. ಪ್ಲೆ ಹೋಮ್ ವಿದ್ಯಾರ್ಥಿಗಳು ಕೃಷ್ಣ ಮತ್ತು ಸುಧಾಮರ ಗೆಳೆತನದ ಸಂಬಂಧದ ಕುರಿತಾಗಿ ಕಿರು ನಾಟಕ ಹಾಗೂ ಶ್ರೀಕೃಷ್ಣನ ಬಾಲಲೀಲೆಯ ಪ್ರಾರ್ಥನಾ ಗೀತೆಗಳನ್ನು ಹಾಡಿದರು.

ಲೈಬಾ ಬಸರಿಕಟ್ಟಿ, ಸುಧನ್ವಾ ಜೋಶಿ, ಮನಸ್ವಿ ಗುನಗಾ ಮತ್ತು ಇಶಾ ಬೊಬ್ಲಿ ಕಾರ್ಯಕ್ರಮ ನೆರವೇರಿಸಿದರು.

ಮುಂಡಗೋಡದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪೂಜಾ ಕಾರ್ಯಕ್ರಮ

ಮುಂಡಗೋಡ ಪಟ್ಟಣದ ಮಿನಿವಿಧಾನಸೌದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪೂಜಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶಂಕರ ಗೌಡಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಗ್ರೇಡ್-೨ ತಹಸೀಲ್ದಾರ್ ಚಂದ್ರಶೇಖರ ಹೊಸಮನಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣ ಕುಳ್ಳೂರ, ಪಂಚಾಯತ್‌ ರಾಜ್ ಜಿಪಂ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ ಪ್ರದೀಪ ಭಟ್, ಆರ್.ಬಿ. ಕರೂರ, ಎ.ವಿ. ಪಾಟೀಲ, ಗೋಣಿಬಸಪ್ಪ, ನವೀನ ಕುಲಕರ್ಣಿ, ಶಿವಾಜಿ ಸುಣಗಾರ, ರಾಜು ಬಸಾಪುರ, ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಇದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಯಲ್ಲಾಪುರ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಆ. ೨೬ರಂದು ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಪುರುಷಸೂಕ್ತ ಪಾರಾಯಣ, ತುಳಸಿ ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.