ವಿದ್ಯಾರ್ಥಿಗಳು ದೇಶ ಪ್ರೇಮ ಮೈಗೂಡಿಸಿಕೊಳ್ಳಲಿ

| Published : Dec 28 2023, 01:45 AM IST

ಸಾರಾಂಶ

ಬೇಲಿ ಹಾಕಿಕೊಂಡು ರೈತರು ಹೊಲ ಕಾಯುವಂತೆ ಸೈನಿಕರು ದೇಶದ ಸುತ್ತ ರಕ್ಷಕರಾಗಿ ವೈರಿಗಳಿಂದ ದೇಶದ ಜನರನ್ನು ಕಾಪಾಡುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಗುರಿ ಬಹಳ ಮುಖ್ಯವಾದದು ಗುರಿಮುಟ್ಟಲು ಸತತ ಪ್ರಯತ್ನ, ಸಮಯಪ್ರಜ್ಞೆ, ನಿಷ್ಠೆಯಿಂದ ಅಧ್ಯಯನ ಶೀಲರಾಗಬೇಕೆಂದರು.

ಕಾರಟಗಿ: ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು ದೇಶಕ್ಕಾಗಿ ದುಡಿ ದೇಶಕ್ಕಾಗಿ ಮಡಿ ಎಂಬ ಮೂಲಮಂತ್ರದೊಂದಿಗೆ ಗಡಿಯಲ್ಲಿ ಹಗಲಿರಳು ಶ್ರಮಿಸುತ್ತಾರೆ, ಅಂತವರ ಆದರ್ಶ ದೇಶಪ್ರೇಮ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮಾಜಿ ಸೈನಿಕ ವೀರಪ್ಪ ಕಳಸದ ಹೇಳಿದರು.

ತಾಲೂಕಿನ ಬೇವಿನಹಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸೈನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೇಲಿ ಹಾಕಿಕೊಂಡು ರೈತರು ಹೊಲ ಕಾಯುವಂತೆ ಸೈನಿಕರು ದೇಶದ ಸುತ್ತ ರಕ್ಷಕರಾಗಿ ವೈರಿಗಳಿಂದ ದೇಶದ ಜನರನ್ನು ಕಾಪಾಡುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಗುರಿ ಬಹಳ ಮುಖ್ಯವಾದದು ಗುರಿಮುಟ್ಟಲು ಸತತ ಪ್ರಯತ್ನ, ಸಮಯಪ್ರಜ್ಞೆ, ನಿಷ್ಠೆಯಿಂದ ಅಧ್ಯಯನ ಶೀಲರಾಗಬೇಕೆಂದರು.

ಸೈನಕ್ಕೆ ಸೇರಲು ಬೇಕಾದ ಅರ್ಹತೆಗಳೇನು, ಹೇಗೆ ಸಿದ್ಧರಾಗಬೇಕು, ಸೈನಿಕರಿಗೆ ಸಿಗುವ ಸೇವಾ ಸೌಲಭ್ಯಗಳು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ತಮ್ಮ ಅನುಭವ ಹಂಚಿಕೊಂಡು ಸೈನ್ಯದ ಕುರಿತ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು. ಶಾಲಾ ಆವರಣದ ಮರಗಳಲ್ಲಿ ನೇತು ಹಾಕಲು ಗುಬ್ಬಚ್ಚಿ ಗೂಡು ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಕಳಕೇಶ ಡಿ.ಗುಡ್ಲಾನೂರ, ಶಿಕ್ಷಕಿ ಜ್ಯೋತಿ, ಎಸ್ ಡಿಎಂಸಿ ಪದಾಧಿಕಾರಿಗಳು ಹಳೆಯ ವಿದ್ಯಾರ್ಥಿಗಳು ಅಕ್ಷರದಾಸೋಹ ಸಿಬ್ಬಂದಿ ಸುನೀತಾ, ರೇಣುಕಾ ಮತ್ತಿತರರು ಪಾಲ್ಗೊಂಡಿದ್ದರು.