ಸರ್ಕಾರ ಕೆಡಹುವ ಭ್ರಮೆಯಿಂದ ಸುನೀಲ್ ಕುಮಾರ್ ಹೊರಬರಲಿ: ಪ್ರದೀಪ್ ಬೇಲಾಡಿ

| Published : Nov 16 2025, 03:00 AM IST

ಸರ್ಕಾರ ಕೆಡಹುವ ಭ್ರಮೆಯಿಂದ ಸುನೀಲ್ ಕುಮಾರ್ ಹೊರಬರಲಿ: ಪ್ರದೀಪ್ ಬೇಲಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರ ಚುನಾವಣೆ ಫಲಿತಾಂಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ಗೆಲುವು ಎನ್ನುವ ಭ್ರಮೆಗೆ ಸುನೀಲ್ ಕುಮಾರ್ ಒಳಗಾದಂತಿದೆ. ಬಿಹಾರದಲ್ಲಿ ಮಳೆ ಬಂದರೆ ಸುನೀಲ್ ಕುಮಾರ್ ಕೊಡೆ ಅರಳಿಸುತ್ತಿರುವುದು ಹಾಸ್ಯಾಸ್ಪದ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಲೇವಡಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಬಿಹಾರ ಚುನಾವಣೆಗೆ ರಾಜ್ಯ ಸರ್ಕಾರ ಹಣ ನೀಡಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇರುವಾಗ, ಐಟಿ, ಈಡಿ ಎಲ್ಲವೂ ನಿಮ್ಮದೇ ಸರ್ಕಾರದ ಅಧೀನದಲ್ಲಿ ಇರುವಾಗ ವ್ಯರ್ಥ ಆರೋಪ ಮಾಡದೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಿ ಎಂದು ಸವಾಲು ಎಸೆದಿದ್ದಾರೆ.

ರಾಜ್ಯದಲ್ಲಿ 136 ಸೀಟುಗಳ ಭರ್ಜರಿ ಬಹುಮತದಿಂದ ಗೆದ್ದಿರುವ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಹಗರಣ, ಭ್ರಷ್ಟಾಚಾರದಲ್ಲಿಯೇ ಮುಳುಗಿರುವ ಸುನೀಲ್ ಕುಮಾರ್ ವಿರುದ್ಧ ಸ್ವತಃ ಬಿಜೆಪಿಯಲ್ಲಿಯೇ ಅಪಸ್ವರಗಳು ಕೇಳಿ ಬರುತ್ತಿದ್ದು, ಮುಂದಿನ ಬಿಜೆಪಿ ಟಿಕೆಟ್ ಸಿಗುವುದೋ ಇಲ್ಲವೋ ಎನ್ನುವ ಆತಂಕದಲ್ಲಿರುವ ಸುನೀಲ್ ಕುಮಾರ್ ಪರಿಸ್ಥಿತಿಯೇ ಅಸಲಿಯಾಗಿ ಅಯ್ಯೋ ಎನ್ನುವಂತಾಗಿದೆ ಎಂದು ಪ್ರದೀಪ್ ಬೇಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.