ಸಾರಾಂಶ
ಬಿ ಶಿವರಾಂ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷದ ಒಡಂಬಡಿಕೆಯಂತೆ ಎ ಆರ್ ಅಶೋಕ್ ಅವರನ್ನು ಪುರಸಭೆಗೆ ೬ ತಿಂಗಳ ಅವಧಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ಅವರು ತಮ್ಮ ಅವಧಿಯನ್ನು ಮೀರಿ ೧ ವರ್ಷದ ತನಕ ಅಧಿಕಾರ ನಡೆಸಿ ಪಕ್ಷದ ತತ್ವದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ತಮ್ಮನ್ನು ಮುಂದಿನ ಅವದಿಯಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಹೇಳಿರುವುದು ಅವರ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣವಾಗಿದೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಬೇಲೂರು ಪುರಸಭೆ ಅಧ್ಯಕ್ಷ ಎ. ಆರ್ ಆಶೋಕ್ ಅವರು ಮಾಜಿ ಸಚಿವ ಬಿ ಶಿವರಾಂ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಸ್ವಾರ್ಥ ರಾಜಕಾರಣ ಬಿಟ್ಟು ಪಟ್ಟಣದ ಅಭಿವೃದ್ದಿ ಕಡೆ ಗಮನ ನೀಡಲಿ ಎಂದು ಪುರಸಭೆ ಸದಸ್ಯ ಅಕ್ರಂ ಷರೀಫ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಅಧ್ಯಕ್ಷ ಅಶೋಕ್ ಅವರು ಧಾರ್ಮಿಕ ಪೂಜೆ ಇಟ್ಟಿದ್ದು ನಾನು ಸಹ ಪೂಜೆಯಲ್ಲಿ ಭಾಗಿಯಾಗಿದ್ದೆ ಎಂದು ತಿಳಿಸಿದರು. ಪೂಜೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ ಶಿವರಾಂ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷದ ಒಡಂಬಡಿಕೆಯಂತೆ ಎ ಆರ್ ಅಶೋಕ್ ಅವರನ್ನು ಪುರಸಭೆಗೆ ೬ ತಿಂಗಳ ಅವಧಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ಅವರು ತಮ್ಮ ಅವಧಿಯನ್ನು ಮೀರಿ ೧ ವರ್ಷದ ತನಕ ಅಧಿಕಾರ ನಡೆಸಿ ಪಕ್ಷದ ತತ್ವದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ತಮ್ಮನ್ನು ಮುಂದಿನ ಅವದಿಯಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಹೇಳಿರುವುದು ಅವರ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣವಾಗಿದೆ. ತಾವು ಹೈಕಮಾಂಡ್ ಆದೇಶ ನೀಡಿದರೆ ಮಾತ್ರ ಪುರಸಭೆ ಅಧ್ಯಕ್ಷನಾಗುತ್ತೇನೆ. ಅದನ್ನು ತಿಳಿಯದೆ ಅಶೋಕ್ ಅವರು ಈ ರೀತಿ ನನ್ನ ಮೇಲೆ ಕರುಣೆ ತೋರಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ ಅದು ಏನು ಹೇಳುತ್ತದೆ ಅದಕ್ಕೆ ನಾನು ತಲೆಬಾಗುತ್ತೇನೆ ಎಂದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಪುರಸಭೆ ಅಧ್ಯಕ್ಷರಾಗುವ ಸಂದರ್ಭದಲ್ಲಿ ಎ ಆರ್ ಅಶೋಕ್ ಅವರಿಗೆ ಎಲ್ಲಾ ೧೭ ಸದಸ್ಯರ ಸಹಕಾರ ಹಾಗೂ ನಮ್ಮ ನಾಯಕರಾದ ಶಿವರಾಂ ಅಣ್ಣನವರೇ ಕಾರಣರಾಗಿದ್ದಾರೆ. ಅದನ್ನು ಬಿಟ್ಟು ಅವರ ಮೇಲೆ ಇಲ್ಲ ಸಲ್ಲದ ಮಾತನಾಡುವುದು ಅವರ ಘನತೆಗೆ ತಕ್ಕದಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಪ್ರಗತಿ ಪರ ಕೆಲಸಗಳ ಬಗ್ಗೆ ಮಾಹಿತಿ ನೀಡಿ. ಅದನ್ನು ಬಿಟ್ಟು ಶಿವರಾಂ ಅವರ ವಿರುದ್ಧ ಮಾತಾಡುವ ಹಕ್ಕು ನಿಮಗಿಲ್ಲ. ಮಾಧ್ಯಮದ ಜೊತೆ ನಿಮ್ಮ ಪ್ರಚಾರ ಗಿಟ್ಟಿಸುವುದಕ್ಕೆ ಅವರ ಹೆಸರನ್ನು ತರಬೇಡಿ. ನಮ್ಮ ಪಕ್ಷ ತತ್ವ ಸಿದ್ಧಾಂತದಡಿಯಲ್ಲಿ ಎಲ್ಲರಿಗೂ ಸ್ಥಾನಮಾನ ನೀಡಿದೆ. ಇತ್ತೀಚೆಗೆ ನಡೆದ ಪುರಸಭೆ ಅಧ್ಯಕ್ಷರ ಅವಿಶ್ವಾಸ ನಿರ್ಣಯದಲ್ಲಿ ಮುಂದೆ ಏನಾಗುತ್ತದೆ ಅದು ಕಾದು ನೋಡಬೇಕು. ಅಂದು ಅವಿಶ್ವಾಸ ನಿರ್ಣಯ ಆಗದೆ ಇರುವುದರಿಂದ ಅವರೆ ಅಧ್ಯಕ್ಷರಾಗಿರುತ್ತಾರೆ. ಮುಂದೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಬದ್ಧರಾಗಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈಗಾಗಲೇ ವಿಪ್ ಉಲ್ಲಂಘನೆ ಮಾಡಿರುವ ೫ ಸದಸ್ಯರ ಮೇಲೆ ಅವರ ಸದಸ್ಯತ್ವ ರದ್ದತಿಗೆ ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದರು.ಮಾಜಿ ಪುರಸಭೆ ಸದಸ್ಯ ಜುಬೇರ್ ಅಹಮದ್ ಮಾತನಾಡಿ, ಪಕ್ಷದ ಸಿದ್ಧಾಂತದಲ್ಲಿ ಯಾರೇ ಪಕ್ಷ ದ್ರೋಹ ಮಾಡಿದರು ಅವರಿಗೆ ಪಕ್ಷದ ಬಗ್ಗೆ ಮಾತಾಡುವ ಯೋಗ್ಯತೆ ಇರುವುದಿಲ್ಲ. ಹೈಕಮಾಂಡ್ ತೀರ್ಮಾನದಂತೆ ಅಕ್ರಂ ಅವರು ಅಧ್ಯಕ್ಷರಾಗುತ್ತಾರೊ ಅಥವಾ ಬಿಡುತ್ತಾರೊ ಅದು ಪಕ್ಷಕ್ಕೆ ಬಿಟ್ಟ ವಿಚಾರ . ಯಾರೊಬ್ಬರಿಂದ ಇಲ್ಲಿ ಅಧ್ಯಕ್ಷರಾಗುವ ಅವಶ್ಯಕತೆ ಇಲ್ಲ, ಅದು ಪಕ್ಷದ ತೀರ್ಮಾನ ಎಂದರು.ಈ ಸಂದರ್ಭದಲ್ಲಿ ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಯುವ ಮುಖಂಡ ಜೀವನ್ ,ರಾಘವೇಂದ್ರ ಹಾಜರಿದ್ದರು.