ಸಾರಾಂಶ
ನೀರಾವರಿ ಯೋಜನೆಗಳಿಂದ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ನೀರಾವರಿ ಯೋಜನೆಗಳಿಗೆ ಪಕ್ಷಾತೀತ ಹೋರಾಟ ಅಗತ್ಯ. ಈ ನಿಟ್ಟಿನಲ್ಲಿ ಬಲಗೊಳ್ಳಬೇಕಿದ್ದ ರೈತರ ಹೋರಾಟದ ಸ್ವರೂಪ ದಿಕ್ಕು ತಪ್ಪುತ್ತಿರುವುದು ವಿಷಾದನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತಪರ ಯೋಜನೆಗಳನ್ನು ಜಾರಿಗೊಳಿಸಲು ಚಾಟಿ ಬೀಸಲಾಗುವುದು. ತುಂಗಭದ್ರಾ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ನಡೆಸುವ ಹೋರಾಟಗಳನ್ನು ಬೆಂಬಲಿಸಲಾಗುವುದು. ಮತದಾರರು ಆಮಿಷಕಕ್ಕೆ ಒಳಗಾಗುವವರೆಗೂ ಮತಗಳ ಖರೀದಿ, ವ್ಯಾಪಾರ ನಿರಂತರವಾಗಿರುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಮಠಾಧೀಶರು ಸಮಾಜ ಮತ್ತು ರಾಜಕಾರಣಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.ತಾಲೂಕಿನ ನಂದಿಪುರ ಕ್ಷೇತ್ರದಲ್ಲಿ ಮಠಾಧೀಶರ ಪರಿಷತ್ ಪದಾಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಉತ್ತಮರ ಆಯ್ಕೆಗೆ ಚುನಾವಣೆ ವೇದಿಕೆಯಾಗಬೇಕಿದೆ ಎಂದರು.
ನೀರಾವರಿ ಯೋಜನೆಗಳಿಂದ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ನೀರಾವರಿ ಯೋಜನೆಗಳಿಗೆ ಪಕ್ಷಾತೀತ ಹೋರಾಟ ಅಗತ್ಯ. ಈ ನಿಟ್ಟಿನಲ್ಲಿ ಬಲಗೊಳ್ಳಬೇಕಿದ್ದ ರೈತರ ಹೋರಾಟದ ಸ್ವರೂಪ ದಿಕ್ಕು ತಪ್ಪುತ್ತಿರುವುದು ವಿಷಾದನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತಪರ ಯೋಜನೆಗಳನ್ನು ಜಾರಿಗೊಳಿಸಲು ಚಾಟಿ ಬೀಸಲಾಗುವುದು. ತುಂಗಭದ್ರಾ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ನಡೆಸುವ ಹೋರಾಟಗಳನ್ನು ಬೆಂಬಲಿಸಲಾಗುವುದು. ಮತದಾರರು ಆಮಿಷಕಕ್ಕೆ ಒಳಗಾಗುವವರೆಗೂ ಮತಗಳ ಖರೀದಿ, ವ್ಯಾಪಾರ ನಿರಂತರವಾಗಿರುತ್ತಿದೆ ಎಂದರು.ಸುಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿ ಮಾತನಾಡಿ, ರೈತರ ಸಂಕಷ್ಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಬೇಸಾಯ ಪದ್ಧತಿ ಬದಲಾಗಬೇಕು. ನೀರು ಮತ್ತು ಗೊಬ್ಬರದ ನಿರ್ವಹಣೆಯಲ್ಲಿ ರೈತರು ನಿಪುಣತೆ ಹೊಂದಬೇಕು. ನಂದಿದುರ್ಗ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಮಠಾಧೀಶರ ಧರ್ಮ ಪರಿಷತ್ ಮತ್ತು ರೈತಪರ ಸಂಘಟನೆಗಳು ಶೀಘ್ರದಲ್ಲೆ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದರು.
ಮಠಾಧೀಶರ ಪರಿಷತ್‌ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಶಂಕರ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ತಾಲೂಕು ಮಾಜಿ ಯೋಧರ ಸಂಘದ ಅಧ್ಯಕ್ಷ ಆರ್. ರಾಮರೆಡ್ಡಿ, ರೈಲ್ವೆ ಹೋರಾಟ ಸಮಿತಿ ಸಂಚಾಲಕ ಕೊಟ್ರೇಶ್ ಶೆಟ್ಟರ್, ನಿವೃತ್ತ ಪಿಡಿಒ ಈ. ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ಸಿದ್ದರೆಡ್ಡಿ, ರೈತ ಮುಖಂಡರಾದ ಮೈನಳ್ಳಿ ಕೊಟ್ರೇಶಪ್ಪ, ಅಳವಂಡಿ ಯಂಕಪ್ಪ, ಬಸವರೆಡ್ಡಿ, ಕೋಡಿಹಳ್ಳಿ ಚಂದ್ರಪ್ಪ, ಬಸವನಗೌಡ, ಜಿ. ಹೇಮರೆಡ್ಡಿ, ತಿಪ್ಪಾರೆಡ್ಡಿ ಮರೆಡ್ಡಿ ಇತರರಿದ್ದರು.