ಸಾರಾಂಶ
ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲಿಗೆ ಯಾವುದೇ ದೇಶ ನೆರವು ನೀಡಬಾರದು. ಇದಕ್ಕೆ ಆರ್ಥಿಕ ದಿಗ್ಬಂಧನ ವಿಧಿಸಬೇಕೆಂದು ಆಗ್ರಹಿಸಿದೆ.
ಭಟ್ಕಳ:
ಪ್ಯಾಲೇಸ್ತೇನ್ ಮೇಲಿನ ಇಸ್ರೇಲ್ ಯುದ್ಧ ನಿಲ್ಲಿಸಲು ಭಾರತ ಸರ್ಕಾರ ಪ್ರಯತ್ನಿಸಬೇಕು ಎಂದು ಆಗ್ರಹಿಸಿ ಮಜ್ಲಿಸೆ ಇಸ್ಲಾಹ ವ ತಂಝೀಂ ನೇತೃತ್ವದಲ್ಲಿ ಶುಕ್ರವಾರ ಸಾವಿರಾರು ಮುಸ್ಲಿಮರು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಸಲ್ಲಿಸಿದರು.ಪ್ಯಾಲೇಸ್ತೇನ್ ಮೇಲಿನ ಇಸ್ರೇಲ್ ದಾಳಿಯನ್ನು ಬಲವಾಗಿ ಖಂಡಿಸಿರುವ ಮಜ್ಲಿಸೆ ಇಸ್ಲಾಹ ವ ತಂಝೀಂ, ಯುದ್ಧದಲ್ಲಿ ಮಕ್ಕಳು, ಮಹಿಳೆಯರು, ಅಮಾಯಕರು ಬಲಿಯಾಗುತ್ತಿದ್ದಾರೆ. ಪ್ಯಾಲೇಸ್ತೇನ್ ಶಾಲೆ, ಆಸ್ಪತ್ರೆ ಮೇಲೆ ಇಸ್ರೇಲ್ ಸರ್ಕಾರ ಬಾಂಬ್ ದಾಳಿ ಮಾಡಿ ಹಲವರ ಸಾವಿಗೆ ಕಾರಣವಾಗಿದೆ. ಯುದ್ಧದಲ್ಲಿ 11500 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ದಾಳಿ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸೂಕ್ತ ತನಿಖೆ ನಡೆಸಬೇಕು. ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಲು ಭಾರತ ಸರ್ಕಾರ ಮುಂದಾಗಬೇಕು. ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲಿಗೆ ಯಾವುದೇ ದೇಶ ನೆರವು ನೀಡಬಾರದು. ಇದಕ್ಕೆ ಆರ್ಥಿಕ ದಿಗ್ಬಂಧನ ವಿಧಿಸಬೇಕೆಂದು ಆಗ್ರಹಿಸಿದೆ.ಈ ವೇಳೆ ಮಾತನಾಡಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನಾ ಇಲ್ಯಾಸ ನದ್ವಿ, ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಪ್ಯಾಲೇಸ್ತೇನ್ ಮೇಲೆ ಇಸ್ರೇಲ್ ದಾಳಿ ನಿಂತು ಅಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎನ್ನುವುದು ನಮ್ಮ ಆಗ್ರಹ. ಈಗಾಗಲೇ ಯುದ್ಧದಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದಿಂದ ಮತ್ತಷ್ಟು ಸಾವು-ನೋವು ಆಗುವುದು ಬೇಡ. ಆ ನಿಟ್ಟಿನಲ್ಲಿ ಭಾರತ ಸರ್ಕಾರ ಮಧ್ಯಪ್ರವೇಶಿಸಿ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.ಸಹಾಯಕ ಆಯುಕ್ತೆ ಡಾ. ನಯನಾ ಮನವಿ ಸ್ವೀಕರಿಸಿದರು. ತಂಝೀಂನ ರಾಜಕೀಯ ಸಂಚಾಲಕ ಇಮ್ರಾನ ಲಂಕಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ ಜೆ, ಮುಖ್ಯ ಖಾಜಿ ಮೌಲಾನಾ ಮೊಹ್ದೀನ್ ರಬ್ ನದ್ವಿ, ಮುಸ್ಲಿಂ ಯುತ್ ಫೆಡರೇಶನ್ ಅಧ್ಯಕ್ಷ ಅಝೀಜುರೆಹಮಾನ, ತಂಝೀಂ ಪದಾಧಿಕಾರಿಗಳು ಸೇರಿದಂತೆ ಸಾವಿರಾರರು ಮುಸ್ಲಿಮರು ಪಾಲ್ಗೊಂಡಿದ್ದರು.