ದೇಶದ ಭವಿಷ್ಯ ರೂಪಿಸಲು ಮಕ್ಕಳು ಅಣಿಯಾಗಲಿ

| Published : Jul 21 2024, 01:26 AM IST

ಸಾರಾಂಶ

00 ವರ್ಷಗಳ ಹಿಂದೆ ಈ ಬರದ ನಾಡಿನಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಅನ್ನದಾನೀಶ್ವರ ಮಠ ಹಾಗೂ ಇಲ್ಲಿನ ದಶಮಪೀಠಾಧೀಶರು ಬಹುದೊಡ್ಡ ಇತಿಹಾಸ ಸೃಷ್ಠಿಸಿದರು

ಮುಂಡರಗಿ: ದೇಶದ ಭವಿಷ್ಯ ರೂಪಿಸುವ ಕಾರ್ಯ ಮಾಡಲು ಮಕ್ಕಳೆಲ್ಲರೂ ಅಣಿಯಾಗಬೇಕು ಎನ್ನುವ ಉದ್ದೇಶದಿಂದ ಹಾಗೂ ಮಕ್ಕಳಲ್ಲಿ ಸಂಸತ್ತಿನ ಪರಿಕಲ್ಪನೆ ತರುವ ಉದ್ದೇಶದಿಂದ ಶಾಲಾ ಸಂಸತ್ತ ಮಾಡಲಾಗುತ್ತಿದೆ ಎಂದು ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಅವರು ಶನಿವಾರ ಜ.ಅ.ವಿದ್ಯಾ ಸಮಿತಿಯ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಶಾಲಾ ಸಂಸತ್ತ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಲ್ಲರೂ ತಮ್ಮ ಹುದ್ದೆಗಳನ್ನು ಸರಿಯಾಗಿ ನಿಭಾಯಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಜರುಗುವ ಎಲ್ಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು. ಯುವಕರು ಈ ರಾಷ್ಟ್ರದ ಸಂಪತ್ತಾಗಿದ್ದು, ನೀವು ಬದುಕಿನಲ್ಲಿ ನಿಮ್ಮ ಕರ್ತವ್ಯ ಅರಿತುಕೊಂಡು ಮುನ್ನುಗ್ಗಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅನ್ನದಾನೀಶ್ವರ ವಿದ್ಯಾ ಸಮಿತಿ 100 ವರ್ಷದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಪೂ ಹಾಗೂ ಪದವಿ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆ ತೆರೆದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.

ಕಾಲೇಜು ಸ್ಥಾನಿಕ ಮೇಲ್ವಿಚಾರಣಾ ಕಮೀಟಿ ಉಪ ಕಾರ್ಯಾಧ್ಯಕ್ಷ ಎಸ್.ಬಿ. ಹಿರೇಮಠ, ಸದಸ್ಯ ಬಿ.ಎಫ್. ಈಟಿ ಮಾತನಾಡಿ, 100 ವರ್ಷಗಳ ಹಿಂದೆ ಈ ಬರದ ನಾಡಿನಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಅನ್ನದಾನೀಶ್ವರ ಮಠ ಹಾಗೂ ಇಲ್ಲಿನ ದಶಮಪೀಠಾಧೀಶರು ಬಹುದೊಡ್ಡ ಇತಿಹಾಸ ಸೃಷ್ಠಿಸಿದರು. ಈ ಭಾಗದ ಸಾಹಿತ್ಯ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕಾರಣೀಕರ್ತರಾದರು. ಶಾಲಾ ಸಂಸತ್ ಮೂಲಕ ಆಯ್ಕೆಯಾದ ಮಕ್ಕಳು ತಮ್ಮ ಸ್ವಪ್ರತಿಭೆ ಪ್ರದರ್ಶಿಸುವ ಮೂಲಕ ಒಂದು ವರ್ಷಗಳ ಕಾಲಾ ಶಾಲಾ-ಕಾಲೇಜುಗಳಲ್ಲಿ ಜರುಗಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳುವ ಮೂಲಕ ಅವುಗಳ ಯಶಸ್ವಿಗಾಗಿ ಶ್ರಮಿಸುವುದರ ಜತೆಗೆ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕಾಲೇಜು ಸ್ಥಾನಿಕ ಮೇಲ್ವಿಚಾರಣಾ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕ‍ಳಿಗೆ ಪ್ರಜಾಪ್ರಭುತ್ವದ ಹಕ್ಕು ಮತ್ತು ಕರ್ತವ್ಯ ತಿಳಿಸಿಕೊಡಲು ಶಾಲಾ ಸಂಸತ್ ಮಾದರಿಯಾಗಿದೆ. ಮಕ್ಕಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ, ಪ್ರಾ. ಡಿ.ಸಿ.ಮಠ, ಪ್ರಾ. ಎಸ್.ಶಿವರಾಜಸ್ವಾಮಿ, ಬಸವರಾಜ ಬನ್ನಿಕೊಪ್ಪ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಎಸ್.ಸಿ. ಚಕ್ಕಡಿಮಠ ಸ್ವಾಗತಿಸಿ, ಯು.ಸಿ. ಹಂಪಿಮಠ ನಿರೂಪಿಸಿ, ಐ.ಎನ್. ಪೂಜಾರ ವಂದಿಸಿದರು.