ಸಾರಾಂಶ
ಹಸಿರು ಹೊನಲು ತಂಡದಿಂದ ಹಮ್ಮಿಕೊಂಡಿರುವ ಹಸಿರು ಹಬ್ಬದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಟ್ಟೂರುಪ್ರತಿ ಪಟ್ಟಣ, ಹಳ್ಳಿ, ನಗರ ಪ್ರದೇಶಗಳನ್ನು ಹಸಿರೀಕರಿಸುವ ದೊಡ್ಡ ಜವಾಬ್ದಾರಿ ನಮ್ಮರೆಲ್ಲದಾಗಿದ್ದು, ಈ ನಿಟ್ಟನಲ್ಲಿ ಸದಾ ತೊಡಗಿಸಿಕೊಳ್ಳೋಣ ಎಂದು ಚಿಂತಕ ಪ್ರಾಧ್ಯಾಪಕ ಡಾ. ಸತೀಶ ಪಾಟೀಲ್ ಹೇಳಿದರು.
ಶನಿವಾರ ಪಟ್ಟಣದ ಬಸವೇಶ್ವರ ನಗರದಲ್ಲಿನ ಪಟ್ಟಣ ಪಂಚಾಯಿತಿಯ ವೀರ ಸಂಗೊಳ್ಳಿ ರಾಯಣ್ಣ ಪಾರ್ಕ್‌ನಲ್ಲಿ ಹಸಿರು ಹೊನಲು ತಂಡದಿಂದ ಹಮ್ಮಿಕೊಂಡಿರುವ ಹಸಿರು ಹಬ್ಬದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.ದಿನ ದಿನಕ್ಕೂ ವಾತಾವರಣ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಅಲ್ಲದೆ ಮಳೆಯ ವೈಪರೀತ್ಯದಿಂದಾಗಿ ಕಾಡು ನಶಿಸಿ ಹೋಗುತ್ತಿರುವ ಅಪಾಯ ಎದುರಾಗುತ್ತಿದೆ. ಮಾನವ ಜೀವಿಗೆ ಅಗತ್ಯವಾಗಿ ಬೇಕಿರುವ ಗಾಳಿ ಮತ್ತಿತರ ಔಷಧಿ ಗುಣಗಳ ಕೊರತೆ ಉಂಟಾಗದಂತೆ ಸಸಿ ಗಿಡ ಮತ್ತು ಮರಗಳನ್ನು ಬೆಳೆಸುವ ಕಾಯಕದತ್ತ ಮುಂದಾಗಬೇಕು ಎಂದು ಹೇಳಿದರು.
ಹಸಿರು ಹೊನಲು ತಂಡದಿಂದ ಹಮ್ಮಿಕೊಂಡಿರುವ ಹಸಿರು ಹಬ್ಬದ ನಿಮಿತ್ತ ಪ್ರತಿ ದಿನ ಒಂದು ಒಂದು ಸ್ಥಳದಲ್ಲಿ ಗಣ್ಯರು, ವಿದ್ಯಾರ್ಥಿಗಳು ಮತ್ತಿತರರಿಂದ ಸಸಿ ನೆಡುತ್ತಿದ್ದು, ಈಗಾಗಲೇ 300 ಸಸಿಗಳನ್ನು ನೆಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಪಟ್ಟಣದೆಲ್ಲೆಡೆ ವ್ಯಾಪಕವಾಗಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಗೆ ಕಾಣಿಕೆ ನೀಡಲು ಮುಂದಾಗಿದ್ದೇವೆ ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸುರೇಶ ದೇವರಮನೆ, ಹಸಿರು ಹೊನ್ನಲು ತಂಡದ ಬಸವರಾಜ ಸಿ., ನಾಗರಾಜ ಬಂಜಾರ್, ಗುರುರಾಜ್, ವಿಕ್ರಮ ನಂದಿ, ಅಜಯ ಕುಮಾರ್, ಸಿದ್ದು ದೇವರಮನೆ, ಪ್ರಕಾಶ ಮಂಡಕ್ಕಿ, ಕವಿಂದ್ರ, ಉದಯ ಕುಮಾರ, ಪ್ರಶಾಂತ್ ಪತ್ತಿಕೊಂಡ, ನವೀನ ಕುಮಾರ್, ಚೇತನ ಉದಯ ಕುಮಾರ, ದೊಡ್ಡ ಕೊಟ್ರೇಶ, ನವೀನ ಕುಮಾರ್ ನಾಗಭೂಷಣ, ವಿಜಯ ಮತ್ತು ಅಭಿಷೇಕ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))