ಜಾತಿ ಗಣತಿಯೋ, ಶೈಕ್ಷಣಿಕ ಗಣತಿಯೋ ಸಿಎಂ ಸ್ಪಷ್ಟನೆ ನೀಡಲಿ

| Published : Oct 08 2023, 12:00 AM IST

ಜಾತಿ ಗಣತಿಯೋ, ಶೈಕ್ಷಣಿಕ ಗಣತಿಯೋ ಸಿಎಂ ಸ್ಪಷ್ಟನೆ ನೀಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಗಣತಿ ಬಗ್ಗೆ ನಮ್ಮಲ್ಲಿ ಎಲ್ಲೂ ಚರ್ಚೆಯೇ ಆಗಿರಲಿಲ್ಲ. ರಾಜ್ಯದಲ್ಲಿ ಆಗಿರುವುದು ಆರ್ಥಿಕ, ಶೈಕ್ಷಣಿಕ ಸಮಿಕ್ಷೆಯೇ ಹೊರತು ಅದು ಜಾತಿ ಗಣತಿ ಅಲ್ಲ. ಇದು ಜಾತಿ ಗಣತಿಯೋ ಅಥವಾ ಶೈಕ್ಷಣಿಕ ಗಣತಿಯೋ ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಜಾತಿ ಗಣತಿ ಬಗ್ಗೆ ನಮ್ಮಲ್ಲಿ ಎಲ್ಲೂ ಚರ್ಚೆಯೇ ಆಗಿರಲಿಲ್ಲ. ರಾಜ್ಯದಲ್ಲಿ ಆಗಿರುವುದು ಆರ್ಥಿಕ, ಶೈಕ್ಷಣಿಕ ಸಮಿಕ್ಷೆಯೇ ಹೊರತು ಅದು ಜಾತಿ ಗಣತಿ ಅಲ್ಲ. ಇದು ಜಾತಿ ಗಣತಿಯೋ ಅಥವಾ ಶೈಕ್ಷಣಿಕ ಗಣತಿಯೋ ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಶಿಗ್ಗಾಂವಿ ತಾಲೂಕು ಬಂಕಾಪುರದಲ್ಲಿ ಜಾತಿಗಣತಿ ವರದಿ ಬಹಿರಂಗಕ್ಕೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. 2015-16ರಲ್ಲಿ ಆದೇಶ ಮಾಡಿರುವುದು ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಎಲ್ಲಿಯೂ ಜಾತಿ ಗಣತಿ ಆದೇಶ ಮಾಡಿಲ್ಲ. ಈಗ ಅದನ್ನು ಜಾತಿ ಗಣತಿ ಎಂದು ಬಿಂಬಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಎಲ್ಲಾ ವಿಚಾರದಲ್ಲಿ ಸಿಎಂ ಅವರದ್ದು ಒಂದು ದಾರಿಯಾದರೆ, ಡಿಸಿಎಂ ಅವರದ್ದು ತದ್ವಿರುದ್ಧ ದಾರಿ. ಹೊಸ ಬಾರ್‌ ಲೈಸನ್ಸ್‌ ಕೊಡಲ್ಲ ಎಂದು ಸಿಎಂ ಹೇಳಿದರೆ, ಕೊಡುತ್ತೇವೆ ಎಂದು ಡಿಸಿಎಂ ಹೇಳುತ್ತಾರೆ. ರಾಜ್ಯದಲ್ಲಿ ಸಿಎಂ ಇದಾರೋ ಅಥವಾ ಸೂಪರ್ ಸಿಎಂ ಇದಾರೋ ಎನ್ನುವುದು ತಿಳಿಯುತ್ತಿಲ್ಲ. ಇದರ ದುಷ್ಪರಿಣಾಮ ಜನರ ಮೇಲೆ ಬೀಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬರಗಾಲ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದಿರುವ ಸರ್ಕಾರದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬರೀ ಹೇಳಿಕೆಯಿಂದ ಬರಗಾಲ ಎದುರಿಸೋಕೆ ಆಗುವುದಿಲ್ಲ. ನಾವು ಇಂತಹ ಹೇಳಿಕೆಯನ್ನು ಬಹಳ ನೋಡಿದ್ದೇವೆ. ಒಂದು ಚಿಕ್ಕ ಕಾಸು ಎಲ್ಲೂ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳುತ್ತಿದ್ದಾರೆ. ರಾಜ್ಯದ ಬೊಕ್ಕಸದಿಂದಲೇ ಸಹಾಯ ಮಾಡಬಹುದು.

ಇಲ್ಲಾ ಎಂದರೆ ಕುಂಟು ನೆಪ ಹೇಳಿ ಮುಂದಕ್ಕೆ ಹಾಕಬಹುದು ಎಂದು ಸರ್ಕಾರದ ನೀತಿ ಬಗ್ಗೆ ಬೊಮ್ಮಾಯಿ ವ್ಯಂಗ್ಯವಾಡಿದರು.