ದೇಶದ ಪ್ರಗತಿ ಮತ್ತು ಅಭಿವೃದ್ಧಿ ಎಲ್ಲರ ಗುರಿಯಾಗಲಿ: ವನಿತಾ ಮಧುಬಾವಿಮನೆ

| Published : Jan 27 2025, 12:46 AM IST

ದೇಶದ ಪ್ರಗತಿ ಮತ್ತು ಅಭಿವೃದ್ಧಿ ಎಲ್ಲರ ಗುರಿಯಾಗಲಿ: ವನಿತಾ ಮಧುಬಾವಿಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರುಭಾರತ ಗಣರಾಜ್ಯವಾದ ಮೇಲೆ ಏಕೈಕ ಬಲಿಷ್ಟ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪ್ರಂಪಚದೆಲ್ಲೆಡೆ ಹೊರಹೊಮ್ಮಿದ್ದು ದೇಶದ ಪ್ರಗತಿ ಮತ್ತು ಅಭಿವೃದ್ಧಿ ಎಲ್ಲರ ಗುರಿಯಾಗಲಿ ಎಂದು ಪುರಸಭಾ ಅಧ್ಯಕ್ಷೆ ವನಿತಾ ಮಧುಬಾವಿಮನೆ ತಿಳಿಸಿದರು.

ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವದ ಪ್ರಧಾನ ಸಮಾರಂಭ

ಕನ್ನಡಪ್ರಭ ವಾರ್ತೆ, ಬೀರೂರು

ಭಾರತ ಗಣರಾಜ್ಯವಾದ ಮೇಲೆ ಏಕೈಕ ಬಲಿಷ್ಟ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪ್ರಂಪಚದೆಲ್ಲೆಡೆ ಹೊರಹೊಮ್ಮಿದ್ದು ದೇಶದ ಪ್ರಗತಿ ಮತ್ತು ಅಭಿವೃದ್ಧಿ ಎಲ್ಲರ ಗುರಿಯಾಗಲಿ ಎಂದು ಪುರಸಭಾ ಅಧ್ಯಕ್ಷೆ ವನಿತಾ ಮಧುಬಾವಿಮನೆ ತಿಳಿಸಿದರು.ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವದ ಪ್ರಧಾನ ಸಮಾರಂಭದಲ್ಲಿ ದ್ವಜಾರೋಹಣ ನೇರವೇರಿಸಿ ದ್ವಜಾವಂದನೆ ಸ್ವೀಕರಿಸಿ ಭಾನುವಾರ ಮಾತನಾಡಿದರು. ಭಾರತ ಗಣರಾಜ್ಯವಾಗಿ ಉತ್ತಮ ಆಡಳಿತದ ಗುರಿಗಳೊಂದಿಗೆ ವಿವಿಧ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ತಜ್ಞರು ಈ ಬೃಹತ್ ರಾಷ್ಟ್ರಕ್ಕೆ ಉತ್ತಮ ಲಿಖಿತ ಸಂವಿಧಾನ ನೀಡಿದ್ದು, ಸಂವಿಧಾನದ ಆಶಯಗಳಿಗೆ ಪೂರಕ ವಾಗಿ ಕಾರ್ಯನಿರ್ವಹಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಇಂದು ಸ್ವಾತಂತ್ರ‍್ಯ, ಸಮಾನತೆ, ನ್ಯಾಯ ಮತ್ತು ಸಹೋದರತೆ ಎತ್ತಿಹಿಡಿಯುವ ದೇಶದ ಸರ್ವೋಚ್ಛ ಕಾನೂನಾದ ಸಂವಿಧಾನ ಅಳವಡಿಸಿಕೊಂಡ ದಿನ. ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ಅರಿವು ಜನರಲ್ಲಿ ಮೂಡಿಸಬೇಕಾಗಿದೆ. ಗಣತಂತ್ರ ದಿನದ ಈ ವಿಶೇಷ ಸಂದರ್ಭದಲ್ಲಿ ನಾವೆಲ್ಲರೂ ನಮ ಘನ ಸಂವಿಧಾನದ ಮೂಲಕ ದೇಶ ಸಾಧಿಸಿರುವ ಪ್ರಗತಿಯನ್ನು ಗೌರವಿಸೋಣ. ಸಂವಿಧಾನವನ್ನು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲು ಕಾರಣರಾದ ಎಲ್ಲಾ ಮಹನೀಯರಿಗೂ ಮನಸಾ ನಮಿಸೋಣ ಎಂದು ಹೇಳಿದರು.ಪೋಷಕರು ಹಾಗೂ ಶಿಕ್ಷಕರು ಧಾರ್ಮಿಕತೆಯನ್ನು ಯಾರು ಸಹ ಮಕ್ಕಳಿಗೆ ಬೋಧಿಸಬಾರದು ಇದರಿಂದ ಮಕ್ಕಳು ಮೂಢನಂಬಿಕೆಗಳಿಗೆ ಗುಲಾಮರಾಗುತ್ತಾರೆ. ಅವರಿಗೆ ಶಿಕ್ಷಣ ನೀಡಿದರೆ ಆ ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುತ್ತಾರೆ. ಭಾರತೀಯರಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಸಹ ಭ್ರಾತೃತ್ವ ಭಾವನೆ ಹೊಂದಬೇಕು. ಸಂವಿಧಾನ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸಂವಿಧಾನ ಎಲ್ಲಾ ವರ್ಗದ ಜನರಿಗೂ ತನ್ನದೆ ಆದ ನ್ಯಾಯ ನೀಡಿದರೆ ಪರಿಣಾಮ ನಾವಿಂದು ಉತ್ತಮ ವಾಗಿ ಬದುಕಲು ಸಹಕಾರಿಯಾಗಿದೆ. ನಾವುಗಳು ಪಟ್ಟಣವನ್ನು ಸ್ವಚ್ಛವಾಗಿಟ್ಟು, ಸ್ವಚ್ಚ ಭಾರತ್ ಯೋಜನೆಗೆ ಕೈಜೋಡಿಸುವ ಜೊತೆ ಮಿತವಾಗಿ ನೀರನ್ನು ಬಳಸೋಣ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ, ನಾವೆಲ್ಲರು ರಾಷ್ಟ್ರಾಭಿಮಾನದೊಂದಿಗೆ ದೇಶವನ್ನು ಎಲ್ಲ ರೀತಿಯಲ್ಲೂ ಮುನ್ನಡೆಸುವ ಸಂಕಲ್ಪ ಮಾಡೋಣ, ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಸಮಗ್ರ ಚಿತ್ರಣ ನೀಡುವ ಕೆಲಸ ಆಗಬೇಕಿದೆ. ಮಕ್ಕಳಿಗೆ ಗುಣಾತ್ಮಕ ಹಾಗೂ ಕಡ್ಡಾಯ ಶಿಕ್ಷಣ ನೀಡಿ ಎಲ್ಲಾ ಸಾಕ್ಷರಸ್ಥರಾಗಿ ಪ್ರಪಂಚಕ್ಕೆ ನಾವೇ ದೊಡ್ಡಣ್ಣರಾಗಿ ಬೆಳೆಯೋಣ ಎಂದರು. ಪುರಸಭಾ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯಲ್ಲಿ ಏಕತೆ ಯನ್ನು ಮಕ್ಕಳು, ಭಾರತೀಯ ಪ್ರಜೆಗಳಲ್ಲಿ ಅಳಿಯದಂತೆ ಮಾಡುವ ಸ್ಮರಣೀಯ ರಾಷ್ಟ್ರೀಯಹಬ್ಬವಾಗಿದೆ ಎಂದರು. ಸಮಾರಂಭದಲ್ಲಿ ಮಕ್ಕಳಿಂದ ಪಥ ಸಂಚಲನಾ ರಾಷ್ಟ್ರೀಯ ಏಕತೆ ಸಾರುವ ಗೀತೆಗಳ ಗಾಯನ ನೃತ್ಯ ಸ್ವತಂತ್ರ ಹೋರಾಟ ಗಾರರಿಗೆ ಮತ್ತು ನಿವೃತ್ತ ಯೋಧರಿಗೆ, ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಿಎಸ್ಐ ಗಣಪತಿ , ಮುಖ್ಯಾಧಿಕಾರಿ ಜಿ.ಪ್ರಕಾಶ್, ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿಸಮಿತಿ ಅಧ್ಯಕ್ಷ ಲಕ್ಷ್ಮಣ್‌, ಸದಸ್ಯ ಎಂ.ಪಿ.ಸುದರ್ಶನ್, ಸದಸ್ಯರಾದ ಮಾನಿಕ್ ಭಾಷ, ರಾಜು, ಜ್ಯೋತಿ ಸಂತೋಷ್, ಎಲೆರವಿ ಕುಮಾರ್, ಜ್ಯೋತಿವೆಂಕಟೇಶ್, ಸಹನಾ ವೆಂಕಟೇಶ್,ನಂದಿನಿ ರುದ್ರೇಶ್, ಬಿಆರ್‌ಸಿ ಶೇಖರಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಮತ್ತಿತರ ಸದಸ್ಯರು, ಪುರಸಭಾ ಸಿಬ್ಬಂದಿ, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

26 ಬೀರೂರು 01ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆದ 76ನೇ ಗಣರಾಜ್ಯೋತ್ಸವದಲ್ಲಿ ಪುರಸಭೆ ಅಧ್ಯಕ್ಷೆ ವನಿತಾ ಮಧುಬಾವಿಮನೆ ಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ಪ್ರಕಾಶ್, ಪಿಎಸೈ ಗಣಪತಿ, ಬಿಇಒ ರುದ್ರಪ್ಪ ಇದ್ದರು. 26 ಬೀರೂರು 02ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ವನಿತಮಧು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ವಂದಿಸಿದರು.