ಯಲ್ಲಾಪುರ ತಾಲೂಕಿನ ತೇಲಂಗಾರ ಮೈತ್ರಿ ಕಲಾಬಳಗದ ವತಿಯಿಂದ ಮೈತ್ರಿ ಸಭಾಭವನದಲ್ಲಿ ಕುಶಲಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.

ಯಲ್ಲಾಪುರ: ತಾಲೂಕಿನ ತೇಲಂಗಾರ ಮೈತ್ರಿ ಕಲಾಬಳಗದ ವತಿಯಿಂದ ಮೈತ್ರಿ ಸಭಾಭವನದಲ್ಲಿ ಕುಶಲಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ,

"ಶ್ರದ್ಧೆಯಿಂದ ಕೆಲಸ ಮಾಡಿದರೆ ಗೌರವ, ಮಾನಸಿಕ ನೆಮ್ಮದಿ ಸಿಗುತ್ತದೆ ಎನ್ನುವುದಕ್ಕೆ ಸಮಾಜದಲ್ಲಿ ಉಪಕ್ಷೇಗೆ ಒಳಗಾದ ಕುಶಲಕರ್ಮಿಗಳನ್ನು ಮುಖ್ಯವಾಹಿನಿಗೆ ತಂದು ಗೌರವಿಸಿರುವುದು

ನಿದರ್ಶನ. ಇಂದು ಕೆಲಸಗಾರರು ಇದ್ದು, ಆದರೆ, ಕೌಶಲ್ಯಪೂರ್ಣವಾಗಿ ಕೆಲಸ ಮಾಡುವವರು ವಿರಳವಾಗಿದ್ದಾರೆ.

ಗುಣಮಟ್ಟದ ಕೆಲಸ ಮಾಡುವ ಕುಶಲಗಾರರಿಗೆ ಸಮಾಜದಲ್ಲಿ ಬೇಡಿಕೆ ಹೆಚ್ಚಿದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ ಮಾತನ್ನಾಡಿ, ''''ಉದ್ಯೋಗ ಅರಸಿ ಬೇರೆಡೆ ಹೋಗುವ ಬದಲು ಸ್ಥಳೀಯ ಕುಶಲಕರ್ಮಿಗಳು ಸ್ಥಳಿಯವಾಗಿಯೇ ವಿಶ್ವಾಸಪೂರ್ಣವಾಗಿ ಕೆಲಸ ಮಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ಸರ್ವೋದಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಸಿ. ಗಾಂವ್ಕರ ಮಾತನಾಡಿ, ಹಣದ ಹಿಂದೆ ಬಿದ್ದು, ಅಪ್ರಮಾಣಿಕತೆ ರಾರಾಜಿಸುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕ ಕೆಲಸಗಾರರಿಗೆ ಯಾವಾಗಲೂ ಬೇಡಿಕೆ ಇದ್ದೇ ಇದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಮಾತನ್ನಾಡಿ, ನಾವೊಬ್ಬರೆ ಬದುಕಿದರೆ ಸಾಲದು, ಅಸಹಾಯಕರಿಗೆ ನೆರವಾಗುವ ಮೂಲಕ ಬದುಕಿಸಿ ಬಾಳುವ ಧ್ಯೇಯ ನಮ್ಮದಾಗಬೇಕು ಎಂದರು.

ವಜ್ರಳ್ಳಿ ಸೊಸೈಟಿ ಅಧ್ಯಕ್ಷ ದತ್ತಾತ್ರಯ ಭಟ್ಟ ತಾರಗಾರ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಭಗೀರಥ ನಾಯ್ಕ

ಮಾತನಾಡಿದರು.

ಮೈತ್ರಿ ಕಲಾಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಕುಶಲ ಕಾರ್ಮಿಕರನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಮಿಕರ ವಲಸೆ ತಡೆಯುವ ಹಾಗೂ ಸ್ಥಳಿಯವಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರನ್ನು, ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕುಶಲಕರ್ಮಿಗಳಾದ ಗಿರೀಶ ಭಟ್ಟ ವಜ್ರಳ್ಳಿ, ನಾರಾಯಣ ಅಚಾರಿ, ನಾರಾಯಣ ಸರಲೆಗುಡ್ಡೆ, ತಮ್ಮಣ್ಣ ಹೊನ್ನೆಮನೆ, ಜನಾರ್ದನ ಅಂಬ್ಡೆಮನೆ, ವಿಷ್ಣು ಜಾಂಬಳಿಬೇಣ, ಅರುಣ ಪರ್ತನಜಡ್ಡಿ, ಗಣೇಶ ಗೌಡ, ಗಿರೀಶ ವಡ್ಡರ್, ತಾರಾಕಾಂತ ಆಗೇರ, ಕೃಷ್ಣಾನಂದ ಸೂರ್ಲಮಕ್ಕಿ, ನಾಗರಾಜ ದೇಸಾಯಿ, ದಿಗಂಬರ ಬಂಡಾರಿ,‌ ವಿಠ್ಠಲ್ ಗೌಡ ಕೊಂಬೆಮೂಲೆ, ಮಂಗಲಾ ನಾಯ್ಕ, ವೆಂಕಟೇಶ ಶೇಟ್ ಚಿಮನಳ್ಳಿ, ಪೊಕ್ಕ ಗೌಡ, ವೆಂಕಟ್ರಮಣ ಭಟ್ಟ, ನಾಗರಾಜ ಹಲಜಡ್ಡಿ, ಗಣೇಶ ಮರಾಮಕ್ಕಿ, ಗುಲಾಬಿ ಗೌಡ, ಸಂತಾನ್ ಫರ್ನಾಂಡೀಸ್, ಸದಾನಂದ ಮಹಾಲೆ, ರಾಘವೇಂದ್ರ ಬಾಳೆಜಡ್ಡಿ ಅವರನ್ನು ಗೌರವಿಸಲಾಯಿತು.

ಬಳಗದ ಪ್ರಮುಖರಾದ ಸತ್ಯನಾರಾಯಣ ಚಿಮನಳ್ಳಿ ಸ್ವಾಗತಿಸಿದರು. ನಾರಾಯಣ ಗಾಂವ್ಕರ ಗೋಡೆಪಾಲ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಮೂಲೆಮನೆ ನಿರೂಪಿಸಿದರು. ಜಿ.ಎನ್. ಅರುಣಕುಮಾರ, ವಿಶ್ವನಾಥ ಗಾಂವ್ಕರ, ಗಣೇಶ ಭಟ್ಟ, ನಾಗರಾಜ ಹೆಗಡೆ ಪರಿಚಯಿಸಿದರು. ತಿಮ್ಮಣ್ಣ ಭಟ್ಟ ಮತ್ತಿಹಕ್ಕಲು ವಂದಿಸಿದರು.

ಕಾರ್ಯಕ್ರಮದಲ್ಲಿ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು.