ಜೈನ ಧರ್ಮದ ಅವಹೇಳನ ನಿಲ್ಲಲಿ-ಪಾಟೀಲ್

| Published : Aug 13 2025, 12:30 AM IST

ಸಾರಾಂಶ

ರಾಜ್ಯದಲ್ಲಿ ಜೈನ ಧರ್ಮದ ಬಗ್ಗೆ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೈನ ಸಮಾಜದ ಮುಖಂಡ ವಡೆಯರ ಮಲ್ಲಾಪುರ ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ ಆಗ್ರಹಿಸಿದರು.

ಲಕ್ಷ್ಮೇಶ್ವರ: ರಾಜ್ಯದಲ್ಲಿ ಜೈನ ಧರ್ಮದ ಬಗ್ಗೆ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೈನ ಸಮಾಜದ ಮುಖಂಡ ವಡೆಯರ ಮಲ್ಲಾಪುರ ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ ಆಗ್ರಹಿಸಿದರು.

ಮಂಗಳವಾರ ದಿಗಂಬರ ಜೈನ ಸಮಾಜದಿಂದ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಜೈನ ಧರ್ಮ ಹಾಗೂ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವ ಗಿರೀಶ್ ಮಟ್ಟೆಣ್ಣನವರ ಕೂಡಲೇ ಬಂಧಿಸಬೇಕು, ಜೈನ್ ಸಮಾಜ ಶಾಂತಪ್ರಿಯ ಸಮಾಜವಾಗಿದ್ದು, ಸಮಾಜದ ಮೇಲೆ ಬೇರೆ ವಿಚಾರಗಳನ್ನು ಇಟ್ಟುಕೊಂಡು ಮಾತನಾಡುತ್ತಿರುವ ನಡೆಯನ್ನು ದೇಶದಲ್ಲಿ ಇರುವ ಜೈನ ಧರ್ಮದ ಪ್ರತಿಯೊಬ್ಬರು ಖಂಡಿಸುತ್ತೇವೆ, ಗಿರೀಶ ಮಟ್ಟೆಣ್ಣವರ ವಿರುದ್ಧ ಸಮಾಜದ ಮುಖಂಡರು ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇವೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು,.

ಪ್ರತಿಭಟನೆಯಲ್ಲಿ ನಂದಕುಮಾರ ಪಾಟೀಲ ಹಾಗೂ ವಿನಯ ಪಾಟೀಲ, ಆರ್.ಸಿ. ಪಾಟೀಲ ವಕೀಲರು ಮಾತನಾಡಿ, ರಾಜ್ಯದಲ್ಲಿನ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವರನ್ನು ಕೂಡಲೇ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೈನ ಧರ್ಮದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಜೈನ ಸಮಾಜ ಹೋರಾಟ ಮಾಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲ ಎ.ಬಿ. ಪಾಟೀಲ್, ಘೋoಗಡಿ, ಜೈನ ಸಮಾಜದ ಮುಖಂಡ ಭರತಣ್ಣ ಬರಿಗಾಲಿ, ವಸಂತ ಪಾಟೀಲ, ಅನಂತರಾಜ ಮಿಣಜಿಗಿ, ವೈಭವ ಗೋಗಿ, ಮಹಾವೀರ ಪಾಟೀಲ, ಸುನೀಲ ಪಾಟೀಲ ಜೈನ, ಅಜೀತ ಬರಗಾಲಿ, ಸಮಾಜದ ಹಿರಿಯರು ಯುವಕರು ಇದ್ದರು