ಸಾರಾಂಶ
ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸಮಾಜದಲ್ಲಿ ಬಲಿಷ್ಠ, ವಿರಳ ಎಂಬ ಏರಿಳಿತಕ್ಕೆ ಶಿಕ್ಷಣ ಮಾತ್ರ ಅಸ್ತ್ರ. ಜ್ಞಾನದಿಂದ ಸಮೃದ್ಧಿ ಸಾಧ್ಯ. ಡಾ.ಅಂಬೇಡ್ಕರ್ ಕೊಡುಗೆ ಎಂದಿಗೂ ಮರೆಯಲು ಅಸಾಧ್ಯ.
ಕುಕನೂರು: ಮಹಾರ್ ಯೋಧರ ತ್ಯಾಗ ಅಪಾರ. ಅಸ್ಪೃಶ್ಯರೆಂಬ ಕಾರಣಕ್ಕೆ ಬಾಜಿರಾವ ಪೇಶ್ವೆ ಮಾದರ ಸೈನಿಕರನ್ನು ಕಡೆಗಣಿಸುತ್ತಾರೆ. ಇಂತಹ ಅಸ್ಪೃಶ್ಯ ವ್ಯವಸ್ಥೆ ಇನ್ನು ತೆರೆಮರೆಯಲ್ಲಿ ಜೀವಂತವಾಗಿದೆ. ಇದು ಕಡೆಯಾಗಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಅಂಬೇಡ್ಕರ್ ವೃತ್ತಕ್ಕೆ ಕೋರೆಗಾವ್ ವಿಜಯೋತ್ಸವ ಪ್ರಯುಕ್ತ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಪ್ರತಿ ಯೋಧರ ಸ್ಮರಣೆ ಆಗಬೇಕು. ಅವರ ತ್ಯಾಗ, ಬಲಿದಾನ ಸ್ಮರಿಸಬೇಕು. ಸಮಾನತೆಯ ಕನಸು ನನಸಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಸಮಾನರು ಎಂಬ ಭಾವ ಬಲಿಷ್ಠ ಆಗಬೇಕು ಎಂದರು.ಪಪಂ ಸದಸ್ಯ ರಾಮಣ್ಣ ಬಂಕದಮನಿ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸಮಾಜದಲ್ಲಿ ಬಲಿಷ್ಠ, ವಿರಳ ಎಂಬ ಏರಿಳಿತಕ್ಕೆ ಶಿಕ್ಷಣ ಮಾತ್ರ ಅಸ್ತ್ರ. ಜ್ಞಾನದಿಂದ ಸಮೃದ್ಧಿ ಸಾಧ್ಯ. ಡಾ.ಅಂಬೇಡ್ಕರ್ ಕೊಡುಗೆ ಎಂದಿಗೂ ಮರೆಯಲು ಅಸಾಧ್ಯ ಎಂದರು.ಯುವ ಮುಖಂಡ ರಾಘವೇಂದ್ರ ಕಾತರಕಿ ಮಾತನಾಡಿ, ಶೋಷಣೆ ಮತ್ತು ಅಸ್ಪೃಶ್ಯತೆ ವಿರುದ್ಧ ವಿಜಯವಾದ ದಿನ ಈ ಕೋರೆಗಾವ್ ವಿಜಯೋತ್ಸವ ಆಗಿದೆ. ಸ್ವಾಭಿಮಾನಕ್ಕಾಗಿ ಸೈನಿಕರು ಅಂದು ಹೋರಾಟ ಮಾಡಿದರು.ಈ ದಿನ ಎಂದಿಗೂ ಮರೆಯಬಾರದು ಎಂದರು.ಉದ್ಯಮಿ ಅನಿಲ್ ಆಚಾರ್, ಪಪಂ ಸದಸ್ಯ ಸಿರಾಜ್ ಕರಮುಡಿ, ಪಪಂ ಮುಖ್ಯಾಧಿಕಾರಿ ಪಿ.ಸುಬ್ರಮಣ್ಯಂ, ಪ್ರಮುಖರಾದ ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಲಕ್ಷ್ಮಣ ಕಾಳಿ, ಶರಣಪ್ಪ ಛಲವಾದಿ, ಎಎಸ್ಐ ನಿರಂಜನ, ಪೊಲೀಸ್ ಅಧಿಕಾರಿ ಶರಣಪ್ಪ ಗೂಳರೆಡ್ಡಿ, ಗುದ್ನೇಶ ಕಾಳಿ, ನಾಗಪ್ಪ ಕಲ್ಮನಿ, ಫಕೀರಪ್ಪ ಸಾಲ್ಮನಿ, ವಿರೇಶ ಬಂಕದಮನಿ, ಕುಮಾರ ಕಾಳಿ, ಮಹಾಂತೇಶ ಆಚಕಾರಿ, ಪ್ರದೀಪ್ ಸಾಲಮ್ನಿ, ಗುದ್ನೇಶ ಬಂಕದಮನಿ, ಸಂತೋಷ, ಕಿರಣ, ನಿರಂಜನ ಇದ್ದರು.