ಸಾರಾಂಶ
ಆಧುನಿಕ ಭರಾಟೆಯಲ್ಲಿ ಕೃಷಿ ಹಿನ್ನೆಲೆಗೆ ಸರಿದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೃಷಿ ಚಟುವಟಿಕೆಗಳ ತರಬೇತಿ ನೀಡಬೇಕು. ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಆಧುನಿಕತೆ ಬಳಸಿಕೊಳ್ಳಬೇಕು.
ತರಬೇತಿ ಕಾರ್ಯಕ್ರಮದಲ್ಲಿ ಡಾ. ದೇವೇಂದ್ರ ಲಮಾಣಿಧಾರವಾಡ: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಂಗ ಸಂಸ್ಥೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯಲ್ಲಿ ಮೂರು ದಿನಗಳ ಹಸು ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಗುರುವಾರ ಯಶಸ್ವಿಯಾಗಿ ನಡೆಯಿತು.
ಕಲಘಟಗಿ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ದೇವೇಂದ್ರ ಲಮಾಣಿ ತರಬೇತಿ ಉದ್ಘಾಟಿಸಿ, ಆಧುನಿಕ ಭರಾಟೆಯಲ್ಲಿ ಕೃಷಿ ಹಿನ್ನೆಲೆಗೆ ಸರಿದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೃಷಿ ಚಟುವಟಿಕೆಗಳ ತರಬೇತಿ ನೀಡಬೇಕು. ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಆಧುನಿಕತೆ ಬಳಸಿಕೊಳ್ಳಬೇಕು. ಹಾಲು ಉತ್ಪಾದನೆ ಹೆಚ್ಚು ಮಾಡಲು ಬಳಸಬೇಕಾದ ಪಶು ಆಹಾರ, ಪಶುಗಳ ಆರೋಗ್ಯ ಕಾಪಾಡಲು ವ್ಯಾಕ್ಸಿನೇಷನ್ ಬಳಕೆ, ಆಕಸ್ಮಿಕವಾಗಿ ಅಥವಾ ರೋಗದಿಂದ ಮರಣ ಹೊಂದುವ ಪಶುಗಳಿಗೆ ಲಭ್ಯವಿರುವ ಜೀವವಿಮೆ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂದರು.ರೈತರು ಮನೆಯಲ್ಲಿಯೇ ಕೈಗೊಳ್ಳಬಹುದಾದ ಅನೇಕ ಪ್ರಾಥಮಿಕ ಕ್ರಮಗಳ ಮೂಲಕ ಜಾನುವಾರುಗಳನ್ನು ಕಾಪಾಡುವ ವಿಧಾನಗಳನ್ನು ಉದಾಹರಣೆ ಮೂಲಕ ವಿವರಿಸಿದ ಅವರು, ಹಾಲು ಸಂಜೀವಿನಿಯಾಗಿದ್ದು, ಅದನ್ನೇ ವೃತ್ತಿ ಮಾಡಿಕೊಳ್ಳಿ ಎಂದರು.
ಮುಖಂಡರಾದ ವಿನೋದ ಧನಿಗೊಂಡ, ಶಂಕರಲಿಂಗ ಕೆಲಗೇರಿ, ಕರಿಬಸಪ್ಪ ಉಳ್ಳಾಗಡ್ಡಿ, ವಿನಾಯಕ ಧನಿಗೊಂಡ ಇದ್ದರು. ತರಬೇತಿಯಲ್ಲಿ ಹಿರೇಹೊನ್ನಳ್ಳಿ ಗ್ರಾಮದ 26 ಮಹಿಳೆಯರು,14 ಪುರುಷರು ಇದ್ದರು.