ವನ ಮಹೋತ್ಸವ ವರ್ಷ ಪೂರ್ತಿ ನಡೆಯಲಿ: ಆರ್‌ಎಫ್‌ಒ ಸತೀಶ್‌ ಕುಮಾರ್‌

| Published : Oct 27 2024, 02:16 AM IST

ಸಾರಾಂಶ

ವರ್ಷದಲ್ಲಿ ಒಂದು ದಿನ ಸಸಿ ನೆಟ್ಟು ವನ ಮಹೋತ್ಸವ ಆಚರಣೆಗೆ ಸೀಮಿತವಾಗದೆ ವರ್ಷ ಪೂರ್ತಿ ಸಸಿ ನೆಡಲು ಮುಂದಾಗಬೇಕು ಎಂದು ಓಂಕಾರ ಮತ್ತು ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್‌ ಕರೆ ನೀಡಿದರು. ಗುಂಡ್ಲುಪೇಟೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವರ್ಷದಲ್ಲಿ ಒಂದು ದಿನ ಸಸಿ ನೆಟ್ಟು ವನ ಮಹೋತ್ಸವ ಆಚರಣೆಗೆ ಸೀಮಿತವಾಗದೆ ವರ್ಷ ಪೂರ್ತಿ ಸಸಿ ನೆಡಲು ಮುಂದಾಗಬೇಕು ಎಂದು ಓಂಕಾರ ಮತ್ತು ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್‌ ಕರೆ ನೀಡಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯದ ಮುಂಟೀಪುರ ಸ್ಯಾಂಡಲ್‌ವುಡ್‌ ಪ್ರದೇಶದಲ್ಲಿ ಮೈಸೂರು ಹೂಟಗಳ್ಳಿ AOTO MOTIVE AXLES ಲಿಮಿಟೆಡ್‌ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಟ್ಟ ಬಳಿಕ ಮಾತನಾಡಿದರು. ಜಾಗತಿಕ ತಾಪಮಾನ ಏರುತ್ತಿದೆ. ಜಾಗತಿಕ ತಾಪಮಾನ ತಡೆಯಲು ಪರಿಸರ ಉಳಿಸಿ, ಬೆಳೆಸಬೇಕಾಗದ ಅಗತ್ಯ ಎಲ್ಲರ ಮೇಲಿದೆ. ಸಾರ್ವಜನಿಕರು ಸಂಘ, ಸಂಸ್ಥೆಗಳು ಪರಿಸರ ಕಾಪಾಡುವ ಕೆಲಸ ಮತ್ತಷ್ಟ ಆಗಬೇಕಿದ್ದು, ಆ ಕೆಲಸ ಹೆಚ್ಚಾಗಲಿ ಎಂದು ಆಶಿಸಿದರು. ಮೈಸೂರು ಹೂಟಗಳ್ಳಿ AOTO MOTIVE AXLES ಲಿಮಿಟೆಡ್‌ನವರು ಶನಿವಾರ ಮುಂಟೀಪುರ ಸ್ಯಾಂಡಲ್‌ವುಡ್‌ ಪ್ರದೇಶದಲ್ಲಿ ಅರಳಿ, ಆಲ, ಬಸರಿ, ಗೋಣಿ, ಹೆಬ್ಬೇವು, ನೆರಳೆ ಸೇರಿದಂತೆ ೨೦೦ ಸಸಿಗಳನ್ನು ಹಾಕಲು ಮುಂದಾಗಿದ್ದಾರೆ ಎಂದರು.

ಕಾಡಿನಲ್ಲಿ ಅರಳಿ, ಆಲ, ಬಸರಿ, ಗೋಣಿ, ಹೆಬ್ಬೇವು, ನೆರಳೆ ಸಸಿ ನೆಡಲಾಗಿದೆ. ಈ ಸಸಿಗಳು ಕಾಡು ಹಾಗೂ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಲಿದೆ. AOTO MOTIVE AXLES ಲಿಮಿಟೆಡ್‌ನ ಯುವಕ, ಯುವತಿಯರು ಸಸಿ ನೆಡಲು ಗುಂಡಿ ತೆಗೆದು, ಸಸಿ ನೆಟ್ಟು, ನೀರು ಹಾಕಿದ್ದೀರಾ ಅಲ್ಲದೆ ಗಿಡದ ತಟದಲ್ಲಿನ ಪ್ಲಾಸ್ಟಿಕ್‌ ಸಂಗ್ರಹಿದ್ದು ಮೆಚ್ಚುವ ಕೆಲಸ ಎಂದು ಪ್ರಶಂಸಿದರು.