ಸಾರಾಂಶ
ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೇ, ಮಹಾತ್ಮರ ಆದರ್ಶಗಳ ಪಾಲಿಕೆ ಆಗಬೇಕು. ಇದು ನಾವು ಮಹಾತ್ಮರ ದಿವ್ಯಾತ್ಮಕ್ಕೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಗಾಂಧೀಜಿ, ಶಾಸ್ತ್ರೀಜಿ ಜಯಂತಿಯಲ್ಲಿ ಡಾ.ಮಂಜುನಾಥ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೇ, ಮಹಾತ್ಮರ ಆದರ್ಶಗಳ ಪಾಲಿಕೆ ಆಗಬೇಕು. ಇದು ನಾವು ಮಹಾತ್ಮರ ದಿವ್ಯಾತ್ಮಕ್ಕೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಕ್ಲಬ್, ಲಯನ್ಸ್ ಟ್ರಸ್ಟ್ ಹಾಗೂ ಲಯನ್ಸ್ ಶಾಲಾ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಆಂಧ್ರಪ್ರದೇಶದಲ್ಲಿ ಮಹಾತ್ಮ ಗಾಂಧೀಜಿ ಭಾಷಣ ಕೇಳಿದ ಶ್ರೀಮಂತ ಮಹಿಳೆಯೋರ್ವಳು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಲು ಗಾಂಧೀಜಿ ತಂಡದ ಹಿಂದೆ ಹೋಗುವ ನಿರ್ಧಾರ ಮಾಡಿದರು. ಅಲ್ಲದೇ, ಮೈ ಮೇಲಿದ್ದ ಎಲ್ಲ ಒಡವೆಗಳನ್ನು ಬಿಚ್ಚಿ, ಕರವಸ್ತ್ರದಲ್ಲಿ ಕಟ್ಟಿ, ಅಪರಿಚಿತ ವ್ಯಕ್ತಿ ಕೈಗೆ ಕೊಟ್ಟು, ಇವುಗಳನ್ನು ತನ್ನ ಮಾವನಿಗೆ ತಲುಪಿಸುವಂತೆ ಹೇಳಿದಳು. ಗಾಬರಿಗೊಂಡ ಆ ವ್ಯಕ್ತಿ ಪರಿಚಯವೇ ಇಲ್ಲದ ನನ್ನ ಕೈಗೆ ಇಷ್ಟೊಂದು ಆಭರಣ ಕೊಟ್ಟಿರಲ್ಲ, ನನ್ನ ಬಗ್ಗೆ ನಿಮಗೆ ವಿಶ್ವಾಸ ಹೇಗೆ ಬಂತು ಎಂದು ಕೇಳಿದಾಗ, ಆ ಮಹಿಳೆ ನಿನ್ನ ತಲೆಯ ಮೇಲೆ ಗಾಂಧಿ ಟೋಪಿ ಇದೆ ಅಂದ ಮೇಲೆ ನೀನು ಪ್ರಾಮಾಣಿಕ ವ್ಯಕ್ತಿಯೇ ಆಗಿರುತ್ತೀಯ ಎಂಬ ವಿಶ್ವಾಸ ನನ್ನದು ಎಂದಿದ್ದಳಂತೆ. ಗಾಂಧಿ ಟೋಪಿ ಧರಿಸಿದವರು ಈ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು. ಆಗ ತೋರಿಕೆಯಾಗದೇ, ಆದರ್ಶ ಪಾಲನೆ ಆಗುತ್ತದೆ ಎಂದು ಹೇಳಿದರು.ಲಯನ್ಸ್ ಕ್ಲಬ್‌ನ ಆರ್.ಜೆ.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆ ಕಾರ್ಯಕ್ರಮವನ್ನು ಕ್ಲಬ್ ಅಧ್ಯಕ್ಷ ಎಸ್.ಜಿ.ಉಳುವಯ್ಯ ಉದ್ಘಾಟಿಸಿದರು. ಎಚ್.ಸಿ.ಹುಲ್ಲತ್ತಿ, ಎಂ.ಎಸ್. ಉದಯಕುಮಾರ್ ಪ್ರಾಯೋಜಿಸಿದ ಕಾರ್ಯಕ್ರಮದಲ್ಲಿ ವೈ.ಬಿ.ಸತೀಶ್, ಬೆಳ್ಳೂಡಿ ಶಿವಕುಮಾರ, ಕೆ.ಮುರುಗೇಶಪ್ಪ, ಎ.ರಮೇಶ್, ಎ.ಎಸ್.ಮೃತ್ಯುಂಜಯ, ಎನ್.ವಿ. ಬಂಡಿವಾಡ, ಎಸ್.ನಾಗರಾಜ, ಎಚ್.ಎಂ.ನಾಗರಾಜ, ಶಾಲಾ ಮುಖ್ಯೋಪಾಧ್ಯಾಯನಿ, ಶಿಕ್ಷಕರು ಇತರರು ಮುಂತಾದವರು ಭಾಗವಹಿಸಿದ್ದರು.
- - - -3ಕೆಡಿವಿಜಿ33ಃ:ದಾವಣಗೆರೆಯ ಲಯನ್ಸ್ ಕ್ಲಬ್‌ನಿಂದ ನಡೆದ ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಡಾ. ಎಚ್.ಬಿ. ಮಂಜುನಾಥ ಉಪನ್ಯಾಸ ನೀಡಿದರು.