ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಮಾಡಲಿ: ಮಂಜುನಾಥ ಕುನ್ನೂರ

| Published : Feb 13 2024, 12:49 AM IST

ಸಾರಾಂಶ

ಜಿಲ್ಲೆಯ ರೈತರಿಗೆ ನೀರು ಒದಗಿಸುವ ದೃಷ್ಟಿಯಿಂದ ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಮಾಡಲೇಬೇಕು.

ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ

ನಿಜಶರಣ ಅಂಬಿಗರ ಚೌಡಯ್ಯ-ಹೆಳವನಕಟ್ಟಿ ಗಿರಿಯಮ್ಮ-ಹಾನಗಲ್ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಜಿಲ್ಲೆಯ ರೈತರಿಗೆ ನೀರು ಒದಗಿಸುವ ದೃಷ್ಟಿಯಿಂದ ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಮಾಡಲೇಬೇಕು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸೋಮವಾರ ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಇಲ್ಲಿಂದ ಬೇಡಿಕೆ ಕಳುಹಿಸಿದರೆ ಕೇಂದ್ರದಲ್ಲಿ ಜಾರಿ ಆಗಲಿದೆ. ಇದಕ್ಕೆ ಯಾರೇ ವಿರೋಧ ಮಾಡಿದರೂ ಸರ್ಕಾರ ಹಿಂದೇಟು ಹಾಕದೇ ಜಾರಿ ಮಾಡಬೇಕು. ಈ ಬಗ್ಗೆ ನಾನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ಒತ್ತಾಯಿಸಿದ್ದೇನೆ. ಆದರೆ ಇನ್ನೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೂಲಕವಾದರೂ ಹಕ್ಕೋತ್ತಾಯ ಹೋದ ಮೇಲೆ ಮಾಡಬೇಕು ಎಂದು ಒತ್ತಾಯಿಸಿದರು.

ಕಸಾಪ ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ಹಕ್ಕೋತ್ತಾಯ ಮಂಡಿಸಿದರು. ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಸಮಾರೋಪ ನುಡಿಗಳನ್ನಾಡಿದರು.

ವಿವೇಕಾನಂದ ಆಶ್ರಮದ ಪ್ರಕಾಶಾನಂದ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಪ್ರಮುಖರಾದ ಪುಟ್ಟಪ್ಪ ಮರಿಯಮ್ಮನವರ, ಏಕನಾಥ ಬಾನುವಳ್ಳಿ, ಎಸ್.ಎಸ್. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಪ್ರಕಾಶ ಜೈನ್, ಡಾ. ಬಸವರಾಜ ಕೇಲಗಾರ, ಕೆ.ಎಚ್. ಮುಕ್ಕಣ್ಣನವರ, ಡಾ. ಅನಿಲ ಬೆನ್ನೂರ, ಡಾ. ನಾಗರಾಜ, ಭಾರತಿ ಜಂಬಗಿ, ವಸಂತಾ ಹುಲ್ಲತ್ತಿ ಹಾಗೂ ಕಸಾಪ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಹಕ್ಕೋತ್ತಾಯಗಳು:

ಹಲಗೇರಿಯಲ್ಲಿ ಪಾಟೀಲ ಪುಟ್ಟಪ್ಪ ಅವರ ಸ್ಮಾರಕ ಭವನ ನಿರ್ಮಿಸಬೇಕು.

ಬೆಡ್ತಿ ವರದಾ ನದಿಗಳನ್ನು ಜೋಡಿಸಬೇಕು.

ಹಾವೇರಿ ಜಿಲ್ಲೆಗೆ ಕೆಸಿಸಿ ಬ್ಯಾಂಕ್ ಪ್ರತ್ಯೇಕಗೊಳಿಸಬೇಕು.

ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ರಾಣಿಬೆನ್ನೂರಿನಲ್ಲಿ ನಡೆಸಬೇಕು.