ಸಾರಾಂಶ
ಚಿತ್ರದುರ್ಗ: ಜಾನಪದ ಸಂಗೀತವನ್ನು ಮುಂದಿನ ಪೀಳಿಗೆಗೆ ಹರಡುವ ಕೆಲಸವನ್ನು ಆಯಿತೋಳು ವಿರುಪಾಕ್ಷಪ್ಪ ಕುಟುಂಬ ನಿರ್ವಹಿಸಿಕೊಂಡು ಬರುತ್ತಿದೆ ಎಂದು ನ್ಯಾಯವಾದಿ ಸಿ.ಶಿವುಯಾದವ್ ಹೇಳಿದರು.
ಚಿತ್ರದುರ್ಗ: ಜಾನಪದ ಸಂಗೀತವನ್ನು ಮುಂದಿನ ಪೀಳಿಗೆಗೆ ಹರಡುವ ಕೆಲಸವನ್ನು ಆಯಿತೋಳು ವಿರುಪಾಕ್ಷಪ್ಪ ಕುಟುಂಬ ನಿರ್ವಹಿಸಿಕೊಂಡು ಬರುತ್ತಿದೆ ಎಂದು ನ್ಯಾಯವಾದಿ ಸಿ.ಶಿವುಯಾದವ್ ಹೇಳಿದರು.
ಮಾರುತಿ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಸಂಗೀತ ಸಂಭ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮೂರನೇ ತಲೆಮಾರಿನ ಆಯಿತೋಳು ವಿರುಪಾಕ್ಷಪ್ಪ ಕುಟುಂಬ ಕಲೆಯನ್ನು ಪೋಷಿಸಿ ಬೆಳೆಸಿಕೊಂಡು ಬರುತ್ತಿದೆ. ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಇಂತಹ ಕಲಾವಿದರಿಗೆ ನೆರವು ನೀಡುವಲ್ಲಿ ಮುಂದಾಗಬೇಕೆಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಪ್ರೊ.ಗುರುನಾಥ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಲ್ಲಿ ಮತ್ತು ಸಹ ಪಠ್ಯದಲ್ಲಿ ಕಲಿಯುವ ವಿಷಯಗಳಿಗೆ ಭಿನ್ನತೆಯಿಲ್ಲ. ಶಿಕ್ಷಣದ ಜೊತೆ ಸಂಸ್ಕಾರವಂತರಾದರೆ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಏಕೆಂದರೆ ಎಲ್ಲರನ್ನು ತಲೆದೂಗಿಸುವ ಶಕ್ತಿ ಸಂಗೀತಕ್ಕಿದೆ ಎಂದರು.ಸಂಗೀತ ಸಂಭ್ರಮದಂತ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿ ಮಕ್ಕಳಿಗೆ ಮುಟ್ಟಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ರಂಗಭೂಮಿ ಕಲಾವಿದ ತಿಪ್ಪೇಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಯಿತೋಳು ವಿರುಪಾಕ್ಷಪ್ಪ, ರಂಗಭೂಮಿ ಕಲಾವಿದ ತಬಲ ವಾದಕ ಜಿ.ಎನ್.ಚಂದ್ರಪ್ಪ ವೇದಿಕೆಯಲ್ಲಿದ್ದರು.ಸಂಗೀತ ಸಂಭ್ರಮದಲ್ಲಿ ಸೋಬಾನೆ ಪದ, ಸಂಗೀತ ಹಾಡಲಾಯಿತು.