ತೆರೆ ಬಂಡಿ ಸ್ಪರ್ಧೆಗೆ ಸರ್ಕಾರ ನೆರವು ನೀಡಲಿ

| Published : Feb 26 2024, 01:32 AM IST

ಸಾರಾಂಶ

ರಾಜ್ಯದ ಅತ್ಯಂತ ಹಳೆಯ ಗ್ರಾಮೀಣ ಕ್ರೀಡೆಗಳಲ್ಲಿ ತೆರೆದ ಬಂಡಿ ಸ್ಪರ್ಧೆ ರೈತರಿಗೆ ಹಬ್ಬ ಇದ್ದ ಹಾಗೆ. ಹಾಗಾಗಿ ದಕ್ಷಿಣ ಕರ್ನಾಟಕದಲ್ಲಿ ನಡೆಯುವ ಕಂಬಳ ಕ್ರೀಡೆಗೆ ಕೊಡುವ ಹಾಗೆ ತೆರೆ ಬಂಡಿ ಸ್ಪರ್ಧೆಗೆ ಕರ್ನಾಟಕ ಸರ್ಕಾರ ನೆರವು ನೀಡಬೇಕು ಎಂದು ನಗರ ನೀರು ಸರಬರಾಜ ಮತ್ತು ಚರಂಡಿ ಮಂಡಳಿ ಅಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ರಾಜ್ಯದ ಅತ್ಯಂತ ಹಳೆಯ ಗ್ರಾಮೀಣ ಕ್ರೀಡೆಗಳಲ್ಲಿ ತೆರೆದ ಬಂಡಿ ಸ್ಪರ್ಧೆ ರೈತರಿಗೆ ಹಬ್ಬ ಇದ್ದ ಹಾಗೆ. ಹಾಗಾಗಿ ದಕ್ಷಿಣ ಕರ್ನಾಟಕದಲ್ಲಿ ನಡೆಯುವ ಕಂಬಳ ಕ್ರೀಡೆಗೆ ಕೊಡುವ ಹಾಗೆ ತೆರೆ ಬಂಡಿ ಸ್ಪರ್ಧೆಗೆ ಕರ್ನಾಟಕ ಸರ್ಕಾರ ನೆರವು ನೀಡಬೇಕು ಎಂದು ನಗರ ನೀರು ಸರಬರಾಜ ಮತ್ತು ಚರಂಡಿ ಮಂಡಳಿ ಅಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.

ನಗರದಲ್ಲಿ ಭಗೀರಥ ಸರ್ಕಲ್ ಹತ್ತಿರ ಸ್ಥಳೀಯ ಬಸವೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರ ನೇತೃತ್ವದಲ್ಲಿ ನಡೆಯುತ್ತಿರುವ 2ನೇ ರಾಜ್ಯಮಟ್ಟದ ಮಹಾಲಿಂಗಪುರ ತೆರೆ ಬಂಡಿ ಉತ್ಸವದ 2ನೇ ದಿನದ ಉತ್ಸವದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಈ ಕ್ರೀಡೆ ಬೆಳೆಯಬೇಕು. ಮುಂದಿನ ಪೀಳಿಗಿಗೆ ಉಳಿಯಬೇಕು. ಅದಕ್ಕೆ ಸರ್ಕಾರದ ನೆರವು ಬೇಕೇ ಬೇಕು. ಅದಕ್ಕಾಗಿ ಸರ್ಕಾರದ ಗಮನ ಸೆಳೆಯುವೆ ಎಂದು ಭರವಸೆ ನೀಡಿದರು.

ನಂತರ ಮಾತನಾಡಿದ ಸ್ಥಳೀಯ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ನಗರದಲ್ಲಿ ನಿರಂತರವಾಗಿ ಒಂದಿಲ್ಲ ಒಂದು ಕ್ರೀಡೆಗಳು ನಡೆಯುತ್ತಿರುತ್ತವೆ. ಕ್ರೀಡಾ ಪ್ರಿಯರಿಗೆ ನಿರಂತರ ಮನರಂಜನೆ ಈ ದೇಶಿಯ ಕ್ರೀಡೆಗೆ ಆಧುನಿಕ ಸ್ಪರ್ಶ ಕೊಟ್ಟು ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ತೆರೆ ಬಂಡಿ ಕ್ರೀಡೆ ನಡೆಯುವಂತಾಗಲಿ. ಅದಕ್ಕೆ ಬೇಕಾದ ಸಹಕಾರ ನೀಡುವುದಾಗಿ ಆಶಯ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಗರದ ಖ್ಯಾತ ವೈದ್ಯ ಡಾ.ಎ.ಆರ್.ಬೆಳಗಲಿ ಈ ಗ್ರಾಮೀಣ ಕ್ರೀಡೆ ಯಾಂತ್ರಿಕ ಯುಗದಲ್ಲಿ ಉಳಿದು ಬೆಳೆಯುವುದು ಕಷ್ಟಕರವಾಗಿದೆ. ಎತ್ತುಗಳನ್ನು ಸಾಕುವ ರೈತರು ಭೂಮಿ ಉಳಿಮೆ ಮಾಡಲು ಮಷಿನರಿಗಳ ಮೊರೆ ಹೋಗುತ್ತಿದ್ದಾರೆ. ಹಿಂದೆ ಒಂದು ಮಾತು ಇತ್ತು ಜೋಡತ್ತೇನ ಜಮೀದಾರ ಎಂದರೆ ಆತನಿಗೆ ಸಿಗುವ ಮರ್ಯಾದೆ ಬೇರೆ ಇತ್ತು ಎಂದರು.

ರಾಶಿ ಮಾಡುವ ವೇಳೆ ಹಂತಿ ಹೊಡೆಯುವುವಾಗ "ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೋ " ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ ಪ್ರೀತಿಗೆ ಪಾರವೇ ಇಲ್ಲ. ನಮ್ಮ ಭಾಗದಲ್ಲಿ ತೆರೆ ಬಂಡಿ ನಡೆಸುವುದು ಟ್ರೆಂಡ್ ಆಗಿ ಬಿಟ್ಟಿದೆ ಎಂದರು .

ಕಾರ್ಯಕ್ರಮದಲ್ಲಿ ಶ್ರೀಶೈಲ ಭಜಂತ್ರಿ, ಸಿದ್ದುಗೌಡ ಪಾಟೀಲ, ದೇವರೇಶ ಉಳ್ಳಾಗಡ್ಡಿ ಮಾತನಾಡಿದರು. ಈ ಸಂಧರ್ಭದಲ್ಲಿ ಜಾತ್ರಾ ಕಮಿಟಿ ಸದಸ್ಯರು, ಗಣ್ಯ ಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಫೆ.23 ರಂದು, ಆರಂಭವಾದ ರಾಜ್ಯ ಮಟ್ಟದ ತೆರೆ ಬಂಡಿ ಸ್ವರ್ಧೆಯಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಒಟ್ಟು 84 ಜೊತೆ ಎತ್ತುಗಳು ಭಾಗವಹಿಸಿ ಸ್ಪರ್ಧೆಗೆ ಮೆರಗು ತಂದವು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವಕುಮಾರ ಮಲಘಾಣ, ಡಾ.ಅಜೀತ ಕನಕರೆಡ್ಡಿ, ಡಾ.ವಿನೋದ ಮೇತ್ರಿ, ಗಣ್ಯರಾದ ಧರೆಪ್ಪ ಸಾಂಗ್ಲಿಕರ, ಅಶೋಕ ಅಂಗಡಿ, ದುಂಡಪ್ಪ ಜಾಧವ,ಹಣಮಂತ ಕೊಣ್ಣೂರ, ಸಂಜಯ ತಳೆವಾಡ, ಬಲವಂತಗೌಡ ಪಾಟೀಲ, ಅಬ್ದುಲ್ ಬಾಗವಾನ, ಮುಸ್ತಾಕ ಚಿಕ್ಕೋಡಿ, ಸುರೇಶ ಬಿದರಿ, ಮಲ್ಲಪ್ಪಾ ಸಿಂಗಾಡಿ, ಎಸ್ ಎಂ ಉಳ್ಳಾಗಡ್ಡಿ, ಮಹಾದೇವ ಮಾರಾಪುರ, ಸಂಗಪ್ಪ ಹಲ್ಲಿ, ನಿಂಗಪ್ಪ ಬಾಳಿಕಾಯಿ, ಮಹಾಲಿಂಗ ಮಾಳಿ, ಅರ್ಜುನ್ ಮೊಪಗಾರ, ಸುನೀಲಗೌಡ ಪಾಟೀಲ, ಅನಿಲ್ ಜೋಶಿ, ಮಹಾಲಿಂಗ ಪಾಟೀಲ, ಚನ್ನಪ್ಪ ಕೋಳಿಗುಡ್ಡ, ಪ್ರಕಾಶ ತಟ್ಟಿಮನಿ, ಅಬ್ದುಲ್ ಜಾರೆ,ಲಕ್ಷ್ಮಣ ಮಾಂಗ ಸೇರಿ ಹಲವರು ಉಪಸ್ಥಿತರಿದ್ದರು.