ಡಾ.ಬಾನಂದೂರು ಕೆಂಪಯ್ಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಲಿ

| Published : Jun 18 2024, 12:46 AM IST

ಡಾ.ಬಾನಂದೂರು ಕೆಂಪಯ್ಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಅನಾರೋಗ್ಯದಿಂದ ಬಳಲುತ್ತಿರುವ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ, ಖ್ಯಾತ ಜಾನಪದ ತಜ್ಞ ಡಾ.ಬಾನಂದೂರು ಕೆಂಪಯ್ಯ ಅವರ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬದವರು ಸಂಕಷ್ಟದಲ್ಲಿದ್ದು, ರಾಜ್ಯಸರ್ಕಾರವೇ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಬೇಕು ಎಂದು ಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯಿಸಿದರು.

ರಾಮನಗರ: ಅನಾರೋಗ್ಯದಿಂದ ಬಳಲುತ್ತಿರುವ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ, ಖ್ಯಾತ ಜಾನಪದ ತಜ್ಞ ಡಾ.ಬಾನಂದೂರು ಕೆಂಪಯ್ಯ ಅವರ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬದವರು ಸಂಕಷ್ಟದಲ್ಲಿದ್ದು, ರಾಜ್ಯಸರ್ಕಾರವೇ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಬೇಕು ಎಂದು ಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಾನಂದೂರು ಕೆಂಪಯ್ಯ ಜಾನಪದ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಸಾಕಷ್ಟು ಅಧ್ಯಯನ ನಡೆಸಿ ಜಾನಪದ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಕೃತಿಯ ಮೂಲ ಅಡಗಿರುವುದೇ ಜಾನಪದಲ್ಲಿ ಇಂತಹ ಜಾನಪದ ಕ್ಷೇತ್ರಕ್ಕೆ ಮಾನ್ಯತೆ ದೊರೆಯುವಂತೆ ಮಾಡಿದಂತ ಸಾಧಕ ಇಂದು ಬದುಕಿನ ಇಳಿಸಂಜೆಯ ಹೊತ್ತಿನಲ್ಲಿ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಇವರ ಚಿಕಿತ್ಸೆಗೆ ನೆರವಾಗಬೇಕು, ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಬಹು ಅಂಗ ವೈಫಲ್ಯ:

ಡಾ.ಬಾನಂದೂರು ಕೆಂಪಯ್ಯ ಅವರಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಅದೇ ರೀತಿ ಕಿಡ್ನಿ ವೈಫಲ್ಯ ಸೇರದಂತೆ ಬಹುಅಂಗ ವೈಫಲ್ಯವಾಗಿದೆ. ತಮ್ಮ ಶಕ್ತಾನಯಸಾರ ಕುಟುಂಬದವರು ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಹಣವಿಲ್ಲದ ಕಾರಣ ಆಸ್ಪತ್ರೆಯಿಂದ ಕರೆತಂದು ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಈ ಹಿಂದೆ ಸರ್ಕಾರ ನಟ ಅಂಬರೀಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಸೇರಿದಂತೆ ಅನೇಕರ ಚಿಕಿತ್ಸೆಗೆ ನೆರವು ನೀಡಿದೆ. ಅದೇ ರೀತಿ ಜಾನಪದ ಕ್ಷೇತ್ರದ ಉಳಿವಿಗೆ ಶ್ರಮಿಸಿದ ಬಾನಂದೂರು ಕೆಂಪಯ್ಯ ಅವರಿಗೆ ಚಿಕಿತ್ಸೆಗೆ ಸರ್ಕಾರ ಮುಂದಾಗಬೇಕು ಎಂದರು.

ಅವರ ಚಿಕಿತ್ಸೆಗೆ ಸುಮಾರು ೨ ಕೋಟಿ ವೆಚ್ಚವಾಗಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕೂಡಲೇ ಇವರ ನೆರವಿಗೆ ಧಾವಿಸಬೇಕು. ಪ್ರಭಾವಶಾಲಿಗಳ ಕುರಿತು ತೋರುವ ಕಾಳಜಿಯನ್ನು ಇಂತಹ ಸಾಧಕರ ಕುರಿತು ತೋರಬೇಕು. ಕೆಂಪಯ್ಯ ನಮ್ಮ ಜಿಲ್ಲೆಯ ಹೆಮ್ಮೆಯ ಸಾಧಕರಾಗಿದ್ದು, ಸರ್ಕಾರ ಹಾಗೂ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.

ನೆರವು ನೀಡಿ:

ಜಾನಪದ ಕ್ಷೇತ್ರಕ್ಕೆ ಡಾ.ಬಾನಂದೂರು ಕೆಂಪಯ್ಯ ಅವರ ಕೊಡುಗೆ ಅಪಾರ. ನಾಡಿನುದ್ದಗಲದಲ್ಲಿ ಸುತ್ತಾಡಿ ಜಾನಪದ ಕ್ಷೇತ್ರದ ಹಲವು ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ. ಅವರ ಚಿಕಿತ್ಸೆಗೆ ನಮ್ಮ ಟ್ರಸ್ಟ್‌ನಿಂದ ೨೫ ಸಾವಿರ ರೂ. ನೆರವು ನೀಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಜಿಲ್ಲೆ ಹಾಗೂ ರಾಜ್ಯದ ಜನತೆ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ವಕೀಲ ಸಂಪಂಗಿ ರಾಮಯ್ಯ, ಟ್ರಸ್ಟ್‌ನ ಪದಾಧಿಕಾರಿ ರೋಹಿತ್ ಉಪಸ್ಥಿತರಿದ್ದರು. (ಈ ಸುದ್ದಿಯನ್ನು ಟಿಂಟ್‌ ಬಾಕ್ಸ್‌ ಬಳಸಿ)

ರೇಣುಕಾಸ್ವಾಮಿ ಪ್ರಕರಣ ೧೯ ಕುಟುಂಬಕ್ಕೆ ಸಂಕಷ್ಟ

ರಾಮನಗರ: ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ನಟ ದರ್ಶನ್ ಸೇರಿದಂತೆ ೧೯ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಕುಟುಂಬ ನಿರ್ವಹಣೆ ಮಾಡಬೇಕಾದ ಮಕ್ಕಳು ಈ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ ಎಂದು ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ಪವಿತ್ರಾಗೌಡ ತನಗೆ ಬಂದ ಅಶ್ಲೀಲ ಮೆಸೇಜ್‌ಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ದೂರು ನೀಡಬಹುದಾಗಿತ್ತು. ಮಹಿಳಾ ಠಾಣೆ, ಮಹಿಳಾ ಆಯೋಗದ ಮೊರೆ ಹೋಗಬಹುದಿತ್ತು. ಈ ಸಮಸ್ಯೆ ಪರಿಹಾರಕ್ಕೆ ಹಲವಾರು ಕಾನೂನಾತ್ಮಕ ಮಾರ್ಗಗಳು ಇದ್ದರೂ, ಅದನ್ನು ಬಿಟ್ಟು ಇಂತಹ ಮಾರ್ಗವನ್ನು ಅನುಸರಿಸಬಾರದಿತ್ತು. ಹೆಣ್ಣುಮಕ್ಕಳು ಸ್ವಲ್ಪ ಯೋಚಿಸಿ ಮುಂದಿನ ಹೆಜ್ಜೆ ಇರಿಸಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಹೇಳಿದರು.

ನಟ ದರ್ಶನ್ ಈ ರೀತಿಯ ಕೆಲಸಕ್ಕೆ ಮುಂದಾಗಬಾರದಿತ್ತು. ಯುವಕನಿಗೆ ಚಿತ್ರ ಹಿಂಸೆ ನೀಡಿರುವುದು ಖಂಡನೀಯ. ಅದೇ ರೀತಿಯ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿ ನಡೆಯೂ ಸರಿಯಲ್ಲ. ಆದರೂ ದರ್ಶನ್‌ ಮತ್ತು ಆತನ ಗ್ಯಾಂಗ್‌ ಈ ರೀತಿ ಕ್ರಮ ಕೈಗೊಳ್ಳಬಾರದಿತ್ತು ಎಂದು ಹೇಳಿದರು.

ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಆರಂಭದಲ್ಲಿ ಸಮಪರ್ಕವಾಗಿ ಕೆಲಸ ಮಾಡಿದೆ. ಆದರೆ, ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಬಿರಿಯಾನಿ ತರಿಸಿಕೊಟ್ಟಿರುವುದು, ಸಿಗರೇಟ್ ಸೇದಲು ಅವಕಾಶ ನೀಡಿರುವುದು ಸರಿಯಲ್ಲ. ಪ್ರಭಾವಿಗಳು, ಹಣವಿದ್ದವರು ಕಾನೂನಿನ ಬಲೆಯನ್ನು ಹರಿದುಕೊಂಡು ಹೊರಬರಬಹುದು, ಬಡವರು ಮಾತ್ರ ಕಾನೂನಿನ ಬಲೆಗೆ ಸಿಲುಕಿ ನರಳಬೇಕು ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಮೂಡದಂತೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದರು.ಪೋಟೋ೧೭ಸಿಪಿಟಿ೫:

ರಾಮನಗರದಲ್ಲಿ ಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.