ಸಾರಾಂಶ
ಹೊನ್ನಾವರ: ನೈಸರ್ಗಿಕ ಸಂಪನ್ಮೂಲಗಳ ಬಳಸುವ ವಿಚಾರದಲ್ಲಿ ಸಾಕಷ್ಟು ಕಾನೂನು ತೊಡಕುಗಳು ಇವೆ. ಸರ್ಕಾರ ಕೂಡಲೇ ಮರಳು ಸಮಸ್ಯೆ ಬಗೆಹರಿಸಬೇಕು. ಮರಳು ಎಲ್ಲರಿಗೂ ಸಿಗುವಂತಾಗಬೇಕು ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಆಗ್ರಹಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರಳಿನ ಅಭಾವ ಉಂಟಾಗಿರುವುದರಿಂದ ಜಿಲ್ಲೆಯಲ್ಲಿ ಬಡವರು ಮನೆ ಕಟ್ಟಲು ಆಗುತ್ತಿಲ್ಲ. ಮನೆ ಕಟ್ಟಲು ಕೂಡಿಟ್ಟ ಹಣ ಮರಳಿಗೆ ಹೋಗುತ್ತಿದೆ. ಇದನ್ನೇ ಅವಲಂಬಿತ ಕೂಲಿ ಕಾರ್ಮಿಕರು, ಗುತ್ತಿಗೆದಾರರಿಗೆ ಕೆಲಸ ಇಲ್ಲದಂತಾಗಿದೆ. ಸಾಕಷ್ಟು ಕಡೆ ಕಾಮಗಾರಿ ಸ್ಥಗಿತವಾಗಿವೆ. ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ ಎಂದರು.
ಬಂದರು ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ಮರಳು ಸಂಗ್ರಹ ಮಾಡಿ ಅಲ್ಲಿಂದಲೇ ಮರಳು ತುಂಬಿದ ವಾಹನಕ್ಕೆ ಪಾಸ್ ಕೊಡುವಂತಾಗಬೇಕು. ಆಗ ಯಾವುದೇ ಸಮಸ್ಯೆ ಉದ್ಭವ ಆಗುವುದಿಲ್ಲ. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಸರಿಯಾದ ಮಾಹಿತಿ ಪಡೆದು ಮರಳು ಅಭಾವ ಉಂಟಾಗದಂತೆ ಮತ್ತು ಮರಳು ಸುಲಲಿತವಾಗಿ ಸಿಗಲು ಅವಕಾಶ ಇರುತ್ತದೆ ಎಂದರು. ಜೆಡಿಎಸ್ ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಕುಮಟಾ ಕ್ಷೇತ್ರದ ಪ್ರತಿಯೊಂದು ಬೂತ್‌ನಲ್ಲೂ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಸಂಘಟನೆಗೆ ಚಾಲನೆ ಕೊಡಲಾಗಿದೆ ಎಂದರು.ಶಿರೂರು ದುರಂತದಲ್ಲಿ ಮೃತಪಟ್ಟ ಅರ್ಜುನ್ ಅವರ ಮೃತದೇಹ ಪತ್ತೆಗಾಗಿ ಶೋಧ ನಡೆಸಿದಂತೆ ಜಗನ್ನಾಥ ನಾಯ್ಕ, ಲೊಕೇಶ್ ನಾಯ್ಕ ಅವರ ಮೃತದೇಹ ಅಥವಾ ಅಂಗಾಂಗ ಸಿಗುವವರೆಗೆ ಶೋಧ ಕಾರ್ಯ ಮುಂದುವರಿಸಬೇಕು. ಇಲ್ಲವಾದಲ್ಲಿ ಸಚಿವರಿಗೆ, ಶಾಸಕರಿಗೆ ಸಲ್ಲಿಸಿದ ಅಭಿನಂಧನೆ ಅರ್ಥಪೂರ್ಣವಾಗಲಾರದು ಎಂದರು. ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವ ವಿಚಾರಕ್ಕೆ ಪ್ರಸ್ತಾಪಿಸಿ ಇಲ್ಲಿಯವರಿಗೆ ಸಮರ್ಪಕ ನೀರು ಪೂರೈಸಲಿ. ನಂತರ ಬೇರೆಡೆಗೆ ನೀರು ಕೊಂಡೊಯ್ಯುವ ವಿಚಾರ ಪ್ರಸ್ತಾಪಿಸಲಿ ಎಂದರು.ಜೆಡಿಎಸ್ ಹೊನ್ನಾವರ ಘಟಕದ ಅಧ್ಯಕ್ಷ ಟಿ.ಟಿ. ನಾಯ್ಕ ಮಾತನಾಡಿ, ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯವ ಯೋಜನೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಸುಬ್ರಾಯ ಗೌಡ, ಶ್ರೀಪಾದ ನಾಯ್ಕ, ಜೆಡಿಎಸ್ ಕುಮಟಾ ಘಟಕದ ಅಧ್ಯಕ್ಷ ಸಿ.ಜಿ. ಹೆಗಡೆ, ಹೊನ್ನಾವರ ಘಟಕದ ಉಪಾಧ್ಯಕ್ಷ ಉದಯ ಗೌಡ, ಪ್ರಧಾನ ಕಾರ್ಯದರ್ಶಿ ದತ್ತು ಪಟಗಾರ, ಬಾಲು ಗೌಡ, ವಿನೋದ ಮೇಸ್ತ, ಲಕ್ಷ್ಮೀ ನಾರಾಯಣ ಹೆಗಡೆ, ಪ್ರೇಮಾ, ಧನಂಜಯ ನಾಯ್ಕ, ಸಚಿನ್ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರಿದ್ದರು. ತಹಸೀಲ್ದಾರರಿಗೆ ಶಾಸಕ ದೇಶಪಾಂಡೆ ತರಾಟೆಮುಂಡಗೋಡ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಅವರು ತಹಸೀಲ್ದಾರ್ ಶಂಕರ್ ಗೌಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.ಮಂಗಳವಾರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಲು ಮುಂದಾಗಿದ್ದರು, ಜನಸಾಮಾನ್ಯರು ತಮ್ಮ ಅಳಲನ್ನು ದೇಶಪಾಂಡೆಯವರ ಬಳಿ ತೋಡಿಕೊಳ್ಳಲು ಆಗಮಿಸಿದ್ದರು. ಆಗ ತಹಸೀಲ್ದಾರ್ ಶಂಕರ್ ಗೌಡಿ ಅಗಮಿಸಿರಲಿಲ್ಲ. ಇದರಿಂದ ಕುಪಿತಗೊಂಡ ದೇಶಪಾಂಡೆಯವರು ತಹಸೀಲ್ದಾರರಿಗೆ ಕರೆ ಮಾಡಿ ನಾನೇನು ದನ ಕಾಯಲು ಇಲ್ಲಿಗೆ ಬಂದಿದ್ದೇನಾ? ಜನರ ಸಮಸ್ಯೆಯನ್ನು ಬಗೆಹರೆಸುವುದು ಬಿಟ್ಟು ಎಲ್ಲಿದ್ದೀಯಪ್ಪ ನೀನು? ನಿನ್ನ ಮೇಲೆ ಕಂದಾಯ ಸಚಿವರಿಗೆ ದೂರು ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.