ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡುವುದರೊಂದಿಗೆ ಯರವಾಡ ಜೈಲು ವಾಸಿಯಾಗಿದ್ದ ಗ್ರಾಮದ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಜೀವನ ಮಂದಿನ ಪೀಳಿಗೆಗೆ ತತ್ವಾದರ್ಶಗಳು ಅನುಕರಣೆಯಾಗಲೆಂದು ಪ್ರತಿ ವರ್ಷ ಆ.14 ರಂದು ಮಧ್ಯರಾತ್ರಿ ಧ್ವಜಾರೋಹಣ ಮಾಡಲಾಗುತ್ತಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.ಗುರುವಾರ ಮಧ್ಯರಾತ್ರಿ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಗ್ರಾಮದ 215ಕ್ಕೂ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ಯುವಕರು ಉತ್ತಮ ರೀತಿಯಲ್ಲಿ ಸುಶಿಕ್ಷಿತರಾಗಿ ತಮ್ಮ ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆರಬೇಕು. 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆಯಲ್ಲಿದ್ದು, ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಭಾರತ ಬ್ರೀಟಿಷರ ದಾಸ್ಯದಿಂದ ಮುಕ್ತವಾಗಿದೆ. ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರು ಗೌರವಿಸೋಣ, ದೇಶದ ರಕ್ಷಣೆ ಕಾನೂನು ಸುವ್ಯವಸ್ಥೆಯ ಪಾಲನೆ ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.
ಸೋಮಶೇಖರ ವಣ್ಣುರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, 1905ರಲ್ಲಿ ರಾಷ್ಟ್ರಾಭಿಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬ್ರಿಟಿಷರ್ ವಿರುದ್ಧ ಹೋರಾಟ ಮಾಡಿ ಯರವಾಡ ಜೈಲುವಾಸ ಅನುಭವಸಿದ ಸ್ವಾತಂತ್ರ್ಯ ಹೊರಾಟಗಾರರನ್ನು ಪ್ರತಿಯೊಬ್ಬರು ಸ್ಮರಣೆ ಮಾಡಬೇಕಾಗಿದೆ. ಗ್ರಾಮಸ್ಥರ ಹೋರಾಟದ ಮನೊಭಾವನೆ ಕಂಡು ಗ್ರಾಮಕ್ಕೆ ಗಾಂಧೀಜಿ ಅಗಮಿಸಿ 93 ವರ್ಷವಾಗಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಮಿಸಿ 92 ವರ್ಷ ಸಂದಿದೆ. ಬಾಲಗಂಗಾಧರ ತಿಲಕರು ಗ್ರಾಮಕ್ಕೆ ಬಂದು 120 ವರ್ಷ ಸಂದಿರುವ ಪ್ರಯುಕ್ತ ಪ್ರತಿ ವರ್ಷ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಆಗಸ್ಟ್ 14 ರಂದು ಮಧ್ಯರಾತ್ರಿ12 ಗಂಟೆಗೆ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ಅಚರಿಸುತ್ತ ಬಂದಿರುವುದು ನಮ್ಮೂರಿನ ಹೆಮ್ಮೆ. ಸ್ವಾತಂತ್ರ್ಯ ಹೋರಾಟದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಪಾಲ್ಗೊಂಡಿರುವುದು ಈ ಗ್ರಾಮದ ವಿಶೇಷವಾಗಿದೆ. 215ಕ್ಕೂ ಹೆಚ್ಚು ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡಿರುವದು ನಮಗೆಲ್ಲ ಆದರಣಿಯ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗ್ರಾಮಕ್ಕೆ 3 ಮಹಾನ್ ನಾಯಕರು ಆಗಮಿಸಿದ ಇತಿಹಾಸ ಹೊಂದಿದ ಹೊಸೂರಿನಲ್ಲಿ ಇಷ್ಟೊಂದು ಅದ್ಧೂರಿಯಾಗಿ ಪ್ರತಿವರ್ಷ ಮಧ್ಯರಾತ್ರಿ ಧ್ವಜಾರೋಹಣ ಕಾರ್ಯಕ್ರಮ ಗ್ರಾಮದ ಘನತೆ ಹೆಚ್ಚಿಸಿದೆ ಎಂದರು.ಗ್ರಾಮದ ಸೋಮಲಿಂಗಪ್ಪ ಕೊಟಗಿ, ಗೌಡಪ್ಪ ಹೊಸಮನಿ, ಮಂಜುನಾಥ ಬುಡಶೆಟ್ಟಿ, ಶಿವಾನಂದ ಬೋಳೆತ್ತಿನ, ನಾಗರಾಜ ಬುಡಶೆಟ್ಟಿ, ಗಂಗಾಧರಗೌಡ ಸಿದ್ದನಗೌಡರ, ಸಂಜು ಸಂಗೊಳ್ಳಿ, ಶಿವಾನಂದ ಅಪ್ಪೊಜಿ, ಸುನಿಲ್ ಸೊಗಲ, ಪ್ರಮೋದ ವಕ್ಕುಂದ, ಪೃಥ್ವಿಗೌಡ ಸಿದ್ದನಗೌಡರ, ಸುರೇಶ ಗುಳಣ್ಣವರ, ನಾಗರಾಜ ಚಿಕ್ಕೊಪ್ಪ, ಆಕಾಶ ತೇಲಿ, ಶಿವಾನಂದಗೌಡ ಸಿದ್ದನಗೌಡರ, ಮಂಜುನಾಥ ಬೋಳೆತ್ತಿನ, ಮಲ್ಲಿಕಾರ್ಜುನ ಚಿಕ್ಕೊಪ್ಪ, ರಮೇಶ ಬೋಳೆತ್ತಿನ ಹಾಗೂ ಅನೇಕ ದೇಶಭಕ್ತರು ಸೇರಿದ್ದರು. ಮುರಗೋಡ ಠಾಣೆಯ ಎಎಸ್ಐ ಗಂಗಾಧರ ಆಲದಕಟ್ಟಿ, ಎಫ್.ಎಂ.ಮದ್ಲಿ ಉಪಸ್ಥಿತರಿದ್ದರು.