ಸಾರಾಂಶ
ಸವಿತಾ ಮಹರ್ಷಿಗಳು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿಯಲ್ಲಿ ಸಮಾಜದ ಒಳಿತಿಗೆ ಶ್ರಮಿಸಿದರು, ಇವರ ಮಗಳಾದ ಗಾಯತ್ರಿದೇವಿಯ ಶ್ರೇಷ್ಠಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಹಾಪುರುಷರ ಜಯಂತಿಗಳು ಒಂದು ದಿನದ ಕಾರ್ಯಕ್ರಮವಾಗದೆ ಅವರ ಆದರ್ಶ ತತ್ವಸಿದ್ದಾಂತಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಹಾಪುರುಷರ ಜಯಂತಿಗಳ ಆಚರಣೆ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ಎನ್ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ಕೋದಂಡ ರಾಮಸ್ವಾಮಿ ದೇವಸ್ಥಾನದ ಬಳಿ ತಾಲೂಕು ಸವಿತಾ ಸಮಾಜ ಸಂಘದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಶ್ರೀ ಸದ್ಗುರು ತ್ಯಾಗರಾಜರು ಮತ್ತು ಪುರಂದದಾಸರ ಆರಾಧನೆ ಮಹೋತ್ಸವದಲ್ಲಿ ಸದ್ಗುರು ತ್ಯಾಗರಾಜರು ಹಾಗೂ ಪುರಂದ ದಸರಾ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ ಮಾತನಾಡಿದರು.
ಸೂರ್ಯವಂಶಕ್ಕೆ ಸೇರದವರುಪೌರಾಣಿಕ ವ್ಯಕ್ತಿಯಾದ ಸವಿತಾ ಮಹಿರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು, ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ, ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ, ಶಿವನ ಬಲಗಣ್ಣಿನಿಂದ ಜನಿಸಿದವರೇ ಸವಿತಾ ಮಹರ್ಷಿ ಎಂದು ತಿಳಿಸಿದ ಅವರು ಸವಿತಾ ಸಮಾಜದವರನ್ನು ಸೂರ್ಯವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು, ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮದೇವ ಕೃತಿ ರಚಿಸಿದ್ದಾರೆ, ಇವರ ಮಗಳಾದ ಗಾಯತ್ರಿದೇವಿಯ ಶ್ರೇಷ್ಠಮಂತ್ರವಾದ ಗಾಯಿತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದರು.ಸಮಬಾಳು, ಸಮಪಾಲು
ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ನೊಂದವರಿಗೆ ದಾರಿದೀಪವಾಗಿದ್ದಾರೆ. ಸವಿತಾ ಮಹರ್ಷಿಗಳು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿಯಲ್ಲಿ ಸಮಾಜದ ಒಳಿತಿಗೆ ಶ್ರಮಿಸಿದರು, ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಸಂಘದ ರಾಜ್ಯ ನಿರ್ದೇಶಕರಾದ ಬಿ.ಟಿ.ಆನಂದ್,ತಾಲೂಕು ಅಧ್ಯಕ್ಷರಾದ ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ಮುನಿರಾಜು, ಸವಿತಾ ಸಮಾಜದ ಮುಖಂಡರಾದ ನಾಗರಾಜ್, ಕೇಶವಪ್ಪ, ವೆಂಕಟೇಶಪ್ಪ,ರಾಮಪ್ಪ, ಶಿವಕುಮಾರ್,ಪ್ರಭಾಕರ್, ಮಂಜುನಾಥ್, ತಿರುಮಲ ಕುಮಾರ್ ಇದ್ದರು.