ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನ ಮೊಳಗಬೇಕಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ (ರಾಜೂಗೌಡ) ಹೇಳಿದರು.

ಹುಣಸಗಿ: ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನ ಮೊಳಗಬೇಕಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ (ರಾಜೂಗೌಡ) ಹೇಳಿದರು.

ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಕರುನಾಡ ಕರ್ನಾಟಕ ಸೇನೆ ವಲಯ ಘಟಕದಿಂದ ಕರುನಾಡ ಸಾಂಸ್ಕೃತಿಕ ಹಬ್ಬ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ, ಕನ್ನಡ ಬರೀ ಭಾಷೆ ಅಲ್ಲ, ಅದು ನಮ್ಮ ಬದುಕು ಮತ್ತು ಸಂಸ್ಕೃತಿಯ ಪರಂಪರೆಯಾಗಿದೆ. ಇಂತಹ‌ ಪುಣ್ಯಭೂಮಿಯಲ್ಲಿ ನಾವು ನೆಲಸಿದ್ದು ದೊಡ್ಡ ಸೌಭಾಗ್ಯ ಎಂದರು. ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟಿ ಮಾತನಾಡಿ, ಕನ್ನಡಿಗರಿಗೆ ಅನ್ಯಾಯ ಆದಾಗ ತಕ್ಷಣವೇ ಹೋರಾಟಕ್ಕೆ ಧುಮುಕಿ ನ್ಯಾಯ ದೊರಕಿಸುವ ಸೇವೆ ಹಗಲಿರುಳು ನಡೆದಿದೆ ಎಂದರು.

ಮುಖಂಡ ಶ್ಯಾಮಸುಂದರ್ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾತೃಭಾಷೆ ಬಗ್ಗೆ ಅಭಿಮಾನ ಗೌರವ ಇರಲಿ. ನಾಡು-ನುಡಿಗಾಗಿ ದುಡಿದ ಮಹನೀಯರನ್ನು ಸ್ಮರಿಸುತ್ತಾ, ನಮ್ಮ ಕರ್ನಾಟಕ ಸೇನೆಯು ಕನ್ನಡ ಜನರ ಏಳ್ಗೆಗೆಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಯುವ ಮುಖಂಡ ರಾಜಾ ಜಿತೇಂದ್ರ ನಾಯಕ ಜಾಹಗೀರದಾರ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ರಾಜಾ ಕುಶಾಲನಾಯಕ ಜ್ಯೋತಿ ಬೆಳಗಿಸಿದರು, ಗ್ರಾ.ಪಂ.ಅಧ್ಯಕ್ಷ ಆದಪ್ಪ ತೋಟಗೇರ, ಬಿ.ಎಂ.ಅಳ್ಳಿಕೋಟಿ, ವೀರೇಶ ಸಾಹುಕಾರ ಚಿಂಚೋಳಿ, ಸಂಗಣ್ಣ ಸಾಹುಕಾರ ವೈಲಿ, ರಂಗನಾಥ ದೊರೆ, ವಿ.ಎಸ್.ಹಾವೇರಿ, ಮೋಹನ್ ಪಾಟೀಲ್ ಹಾಗೂ ದೇಸಾಯಿಗೌಡ ಪಾಟೀಲ್, ರಘು ಪಡಕೋಟಿ, ನ.ಕ.ಸೇ. ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿನ್ನಿ, ತಾಲೂಕು ಅಧ್ಯಕ್ಷ ಭೀಮನಗೌಡ ಪೊಲೀಸ್ ಪಾಟೀಲ್, ವೀರೇಶ ಉಪ್ಪಲದಿನ್ನಿ, ಸತೀಶ್ ಹಾಲಭಾವಿ, ಅಂಬ್ರೇಶ ಗುಡಗುಂಟಿ ಸೇರಿದಂತೆ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಇದ್ದರು. ಎಸ್.ಎಸ್.ಮಾರನಾಳ ಸ್ವಾಗತಿಸಿ ನಿರೂಪಿಸಿ, ಸಂಗು ಪಾಟೀಲ್ ವಂದಿಸಿದರು.