ಶೋಷಿತ ಸಮಾಜದ ನಾಯಕರು ರಾಜ್ಯವನ್ನು ಆಳಲಿ: ಡಾ.ಜಿ.ಪರಮೇಶ್ವರ

| Published : Oct 27 2025, 12:00 AM IST

ಸಾರಾಂಶ

ಶೊಷಿತ ಸಮಾಜದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆ ಸಮಾಜಕ್ಕೆ ಎಲ್ಲೋ ಒಂದು ಕಡೆ ನಾವು ಸಹ ಅಧಿಕಾರವನ್ನು ಮಾಡಬಹುದು ಎನ್ನುವ ಆತ್ಮಸ್ಥೈರ್ಯ ಬಂದಿತು,

ಕನ್ನಡಪ್ರಭ ವಾರ್ತೆ ಕೊರಟಗೆರೆ

ಶೋಷಿತ ಸಮುದಾಯಗಳ ನಾಯಕರು ರಾಜ್ಯದ ಚುಕ್ಕಾಣಿ ಹಿಡಿದಲ್ಲಿ ಆ ಸಮುದಾಯಗಳಿಗೆ ಆತ್ಮಸ್ಥೈರ್ಯ ಬರಲಿದ್ದು, ಅಧಿಕಾರ ವಿಕೇಂದ್ರಿಕರಣವು ಸಹ ಪ್ರಜಾಪ್ರಭುತ್ವದ ನಿಯಮವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ತಾಲೂಕಿನ ಹೊಳವನಹಳ್ಳಿ ಹೋಬಳಿಯಲ್ಲಿ ಸುಮಾರು 4 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ನೆರವೇರಿಸಿ ಚಟ್ಟೆನಹಳ್ಳಿಯಲ್ಲಿ ನಡೆದ ಗಂಗಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಡಿಯಲ್ಲಿ ಪಂಚಾಯಿತಿಗಳ ವ್ಯವಸ್ಥೆ ಬಂದ ಮೇಲೆ ಶೋಷಿತ ಸಮಾಜಗಳು ಅಧಿಕಾರವನ್ನು ಮಾಡುವಂತಾಯಿತು. ಶೊಷಿತ ಸಮಾಜದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆ ಸಮಾಜಕ್ಕೆ ಎಲ್ಲೋ ಒಂದು ಕಡೆ ನಾವು ಸಹ ಅಧಿಕಾರವನ್ನು ಮಾಡಬಹುದು ಎನ್ನುವ ಆತ್ಮಸ್ಥೈರ್ಯ ಬಂದಿತು, ರಾಜ್ಯದಲ್ಲಿ ಅಧಿಕಾರವನ್ನು ಹಲವು ದಶಕಗಳಿಂದ ಕೆಲವೇ ಜನಾಂಗಳು ಆಳುತ್ತಿದ್ದವು ಈಗ ಶೋಷಿತ ಸಮಾಜಗಳು ಅಧಿಕಾರಗಳನ್ನು ಪಡೆದುಕೊಂಡು ಉತ್ತಮವಾದ ಆಡಳಿತ ನೀಡಿದರೆ ಆ ಸಮುದಾಯಗಳ ಜನರಿಗೆ ನಾವು ಸಹ ಆಡಳಿತ ಮಾಡುವ ನಂಬಿಕೆ ಬರುತ್ತದೆ ಎಂದು ತಿಳಿಸಿದರು.ಇತಿಹಾಸದಿಂದ ಅಂತಸ್ತು, ಆಸ್ತಿ, ಅಧಿಕಾರ, ಶಿಕ್ಷಣ ಕೆಲವೇ ಸಮುದಾಯಗಳು ಅನುಭವಿಸುತ್ತಾ ಬರುತ್ತಿವೆ. ಅದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಮೇಲೆ ಇದು ಬದಲಾವಣೆ ಕಾಣುತ್ತಿದೆ, ಈ ದೇಶದಲ್ಲಿ ಶೋಷಿತ ಸಮಾಜಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ಮಾಡಿ ಅವುಗಳ ಸ್ಥಿತಿಗತಿಗಳನ್ನು ತಿಳಿದು ಅವುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಮೀಕ್ಷೆ ಮಾಡಲಾಗುತ್ತಿದೆ. ಅದನ್ನು ಜಾತಿ ಸಮೀಕ್ಷೆ ಸೇರಿದಂತೆ ಇತರ ಬಣಗಳನ್ನು ಕಟ್ಟಿ ರಾಜಕೀಯ ಮಾಡುವುದು ಶೋಷಿತರಿಗೆ ಮಾಡುವ ಅನ್ಯಾಯವಾಗಿದೆ ಇದು ಬದಲಾಗಬೇಕಿದೆ ಎಂದರು, ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಡಿಸಿ ಶುಭಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜಗದೀಶ್, ತಹಸೀಲ್ದಾರ್ ಮಂಜುನಾಥ್, ಇಓ ಅಪೂರ್ವ, ಡಿಸಿಸಿ ನಿರ್ದೇಶಕ ಹನುಮಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಮಹಾಲಿಂಗಪ್ಪ, ಎ.ಡಿ.ಬಲರಾಮಯ್ಯ, ಎಲ್,ರಾಜಣ್ಣ, ಕೆ.ಬಿ,ಲೋಕೇಶ್, ವಾಲೇಚಂದ್ರಯ್ಯ, ಶಿವಲಿಂಗಯ್ಯ, ದೇವರಾಜು, ಲಕ್ಷ್ಮೀಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು .(ಚಿತ್ರ ಇದೆ) ೨೬ ಕೊರಟಗೆರೆ ಚಿತ್ರ ೦೧;- ಕೊರಟಗೆರೆ ತಾಲೂಕಿನ ಚಟ್ಟೆನಹಳ್ಳಿ ಗ್ರಾಮದಲ್ಲಿ ಶ್ರೀ ಗಂಗಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರಾಣ ಮತ್ತು ಕಳಸ ಪ್ರತಿಷ್ಠಾಪನೆ ಹಾಗೂ ದೇವಾಲಯ ಜೀರ್ಣೋದ್ದಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ್ ರವರಿಗೆ ಕುರಿ ಮರಿಗಳನ್ನು ಉಡುಗರೆಯಾಗಿ ನೀಡಲಾಯಿತು. ೨೬ ಕೊರಟಗೆರೆ ಚಿತ್ರ;-೦೨;- ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ.