ಸಾರಾಂಶ
ಧಾರವಾಡ:
ಧಾರವಾಡ ಲಯನ್ಸ್ ಸಂಸ್ಥೆಯು ನಿರಂತರವಾಗಿ ಆರು ದಶಕಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿದ್ದು, ಸಮಾಜದಲ್ಲಿ ಅಶಕ್ತರು, ಆರ್ಥಿಕ ದುರ್ಬಲರ ಏಳ್ಗೆಗಾಗಿ ಸಂಸ್ಥೆಯು ಮತ್ತಷ್ಟು ಶ್ರಮಿಸಲು ಎಂದು ಸಂಸ್ಥೆಯ ಮಾಜಿ ಜಿಲ್ಲಾ ಗನರ್ವರ್ ಡಾ. ರವಿ ಹೆಗಡೆ ಹೇಳಿದರು.ಇಲ್ಲಿಯ ಖಾಸಗಿ ಹೋಟೆಲ್‌ನಲ್ಲಿ ಧಾರವಾಡ ಲಯನ್ಸ್ ಸಂಸ್ಥೆಯ 2024-25ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ಅವರು, ಪ್ರಸ್ತುತ ಸಮಾಜವು ಅಭಿವೃದ್ಧಿ ಸೇರಿದಂತೆ ಸಾಮಾಜಿಕ ಕಾರ್ಯಗಳಿಗೆ ಸರ್ಕಾರವನ್ನು ಎದುರು ನೋಡುತ್ತಿಲ್ಲ. ಸಂಘ-ಸಂಸ್ಥೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಲಯನ್ಸ್ ಸೇರಿದಂತೆ ಸಂಘ-ಸಂಸ್ಥೆಗಳು ಮಾನವೀಯತೆ ಕಡೆಗೆ ಹೆಚ್ಚೆಚ್ಚು ಸಾಗಬೇಕಿದೆ. ಜನರ ಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದ ಅವರು, ಪ್ರತಿ ಮನೆಯಲ್ಲೂ ಮನುಷ್ಯ ಹುಟ್ಟುತ್ತಾನೆ. ಆದರೆ, ಪ್ರತಿ ಮನೆಯಲ್ಲಿ ಮನುಷ್ಯತ್ವ ಹುಟ್ಟುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾನವೀಯತೆ, ಮನುಷ್ಯತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ನಾಯಕತ್ವ ಗುಣ ಇದ್ದವರಿಗೆ ಮಾತ್ರ ಸವಾಲುಗಳು ಎದುರಾಗುತ್ತವೆ. ಅಂತೆಯೇ, ನೂತನ ಪದಾಧಿಕಾರಿಗಳು ಎದುರಾಗುವ ಸವಾಲು ಎದುರಿಸಿ ಸಂಸ್ಥೆಯನ್ನು ಮುನ್ನಡೆಸಬೇಕು. ನಮಗೆ ಸರಿ ಎನ್ನಿಸುವುದಕ್ಕಿಂತ ಸಮಾಜಕ್ಕೆ ಬೇಕಾದ ಹಾಗೂ ಸರಿ ಎನಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.ಧಾರವಾಡ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಗುರುರಾಜ ಪಿಸೆ, ಕಾರ್ಯದರ್ಶಿಯಾಗಿ ಕವಿತಾ ಅಂಗಡಿ ಹಾಗೂ ಖಜಾಂಚಿಯಾಗಿ ವೃಷಭ ಕರೋಲೆ ಅಧಿಕಾರ ಸ್ವೀಕರಿಸಿದರು. ಸಮಾಜಕ್ಕೆ ಅಗತ್ಯವಾದ, ನಿರೀಕ್ಷಿತ ಕಾರ್ಯ ಮಾಡಲು ಯೋಜನೆ ರೂಪಿಸಲಾಗಿದೆ. ಸಂಸ್ಥೆಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ ಎಂದು ಗುರುರಾಜ ಪಿಸೆ ಭರವಸೆ ನೀಡಿದರು.
ಹಿರಿಯ ಸದಸ್ಯರಾದ ಆನಂದ ಕಮಲಾಪೂರ, ಹರ್ಷ ಡಂಬಳ, ಮುಕುಂದ ಹೆಬ್ಳೀಕರ, ಕೆ.ವಿ. ಅಚ್ಯುತ್, ಆರ್.ಕೆ. ಹೆಗಡೆ, ವಿದ್ಯಾಧರ ಅಂಗಡಿ, ಭುಜಂಗಶೆಟ್ಟಿ, ಗಿರಿಧರ ದೇಸಾಯಿ, ಅನುಪಮಾ ಶೆಟ್ಟಿ, ವನಿತಾ ಹೆಬಸೂರ, ಶ್ಯಾಮಲಾ ಹೆಗಡೆ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶೈಲಾ ಕರಿಗುದರಿ, ಕಾರ್ಯದರ್ಶಿ ಡಾ. ಅನಿರುದ್ಧ, ಖಜಾಂಚಿ ಉಷಾ ಗದಗಿಮಠ ಇದ್ದರು. ಆರತಿ ಕಮಲಾಪೂರ ಸ್ವಾಗತಿಸಿದರು. ಅನಿತಾ ಭಟ್ ಪ್ರಾರ್ಥಿಸಿದರು. ಮೀರಾರಾವ್ ಧ್ವಜವಂದನೆ ಸಲ್ಲಿಸಿದರು. ಪ್ರಾದೇಶಿಕ ಅಧ್ಯಕ್ಷ ಅರವಿಂದ ಹೆಬಸೂರ, ಡಾ. ರಾಜಶ್ರೀ ಗುದಗನವರ ಮತ್ತು ಪ್ರೊ. ಸುರೇಶ ಗುದುಗನವರ ನಿರೂಪಿಸಿದರು.;Resize=(128,128))
;Resize=(128,128))