ಮುಂಬರುವ ಯುವ ಪೀಳಿಗೆಗೆ ನಾವೆಲ್ಲರೂ ಸಮುದಾಯಕ್ಕೆ ದಾರಿದೀಪವಾಗಬೇಕು
ಕೊಪ್ಪಳ: ನಗರದ ಖಾಸಗಿ ಹೊಟೇಲ್‌ನಲ್ಲಿ ಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಿತು.
ಮಾದರ ಚೆನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ ಸಭೆ ಉದ್ಘಾಟಿಸಿ ಮಾತನಾಡಿ, ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಕಳೆದ 25 ವರ್ಷಗಳಿಂದ ರಾಜ್ಯದ ಉದ್ದಗಲಕ್ಕೂ ಮಾದಿಗ ಸಮಾಜ ಸಂಘಟನೆ, ಶೈಕ್ಷಣಿಕ ಕ್ರಾಂತಿ, ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಾಯಕ ಮಾಡುತ್ತಿದ್ದಾರೆ. ಅವರ ಕಾಯಕ ಸಾರ್ಥಕವಾಗಬೇಕಾದರೆ ಮಾದಿಗ ಸಮಾಜ ಇತರೆ ಸಮಾಜದವರೊಂದಿಗೆ ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.ಮುಂಬರುವ ಯುವ ಪೀಳಿಗೆಗೆ ನಾವೆಲ್ಲರೂ ಸಮುದಾಯಕ್ಕೆ ದಾರಿದೀಪವಾಗಬೇಕು ಹಾಗೂ ಸಮಾಜದ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸಬೇಕು, ತಾಲೂಕು, ಹೋಬಳಿ ಗ್ರಾಮ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದ ಅವರು, ಮಾದಿಗ ಸಮುದಾಯದ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿ ಕಾಯಕ ಹಾಗೂ ಅನೇಕ ವಿಚಾರ ಮಾದಿಗರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಶ್ರೀಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಆಗಬೇಕು ಎಂದರು.
ಸಮಿತಿಯ ರಾಜ್ಯ ಕಾರ್ಯ ಸದಸ್ಯ ಈರಪ್ಪ ಕುಡುಗುಂಟಿ ಮಾತನಾಡಿ, ಶ್ರೀಗಳ ಹಾದಿಯಲ್ಲಿ ನಾವೆಲ್ಲರೂ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಮತ್ತು ಮಾದಿಗ ಸಮುದಾಯದ ಅಭಿವೃದ್ಧಿಗೆ ತನು-ಮನ ಧನದಿಂದ ಸಹಕಾರ ಮಾಡುವ ಮೂಲ ಸಮುದಾಯದ ಬೆನ್ನೆಲುಬಾಗಿ ನಿಲ್ಲುಬೇಕು ಎಂದರು.ಮಾಜಿ ಜಿಪಂ ಸದಸ್ಯ ಗೂಳಪ್ಪ ಹಲಿಗೇರಿ ಮಾತನಾಡಿ, ಮಾದಿಗ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸಂಘಟಿತರಾಗಬೇಕು ರಾಜಕೀಯವಾಗಿ ಯಾವುದೇ ಪಕ್ಷದಲ್ಲಿದ್ದರೂ ಸಮುದಾಯ ಅಂತ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ವಸಂತ್ ಭಾವಿಮನಿ, ಆನಂದ ಕಾರಟಗಿ, ಗುತ್ತಿಗೆದಾರ ಅನುಮೇಶ್ ಕಡೆಮನಿ, ಮೌನೇಶ್ ದಡೆಸುಗೂರ್, ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಹೊಸಮನಿ, ನಾಗರಾಜ್ ತಲ್ಲೂರ್ ಹಾಗು ಎಚ್.ಎಸ್. ಹೊನ್ನುಂಚಿ, ಮಲಿಯಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ್ ಪೂಜಾರ್, ಯಲ್ಲಪ್ಪ ಹಳೆಮನೆ, ನಾಗಲಿಂಗ ಮಾಳೆಕೊಪ್ಪ, ಮಹಾಲಕ್ಷ್ಮಿ ಕಂದಾರಿ, ಶಿವಪ್ಪ ಮಾದಿಗ, ಪ್ರಕಾಶ್ ಒಡೆಯಪ್ಪನವರ, ನಾಗರಾಜ್ ನಂದಾಪುರ್, ಹನುಮಂತಪ್ಪ ಮುತ್ತಾಳ, ಚಂದ್ರು ಸ್ವಾಮಿ ಹೊಸಮನಿ, ಯಮನೂರಪ್ಪ ಕುಷ್ಟಗಿ, ನಿಂಗಜ್ಜ ಬಣಕಾರ್, ದೇವರಾಜ್ ಬಟಪ್ಪನಹಳ್ಳಿ, ದೇವರಾಜ್ ಹೊರತಟ್ನಾಳ, ಸಮಾಜದ ಹಿರಿಯರು ಮುಖಂಡರು ಯುವಕ ಮಿತ್ರರು ಇದ್ದರು.