ನವದುರ್ಗೆಯರು ಭದ್ರಾವತಿ ಕ್ಷೇತ್ರಕ್ಕೆ ಒಳಿತು ಮಾಡಲಿ: ವಿನಯ್ ಗುರೂಜಿ

| Published : Oct 19 2023, 12:45 AM IST

ನವದುರ್ಗೆಯರು ಭದ್ರಾವತಿ ಕ್ಷೇತ್ರಕ್ಕೆ ಒಳಿತು ಮಾಡಲಿ: ವಿನಯ್ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನ

ಭದ್ರಾವತಿ: ಕ್ಷೇತ್ರದ ಜನರಿಗೆ ಯಾವುದೇ ರೀತಿ ಸಮಸ್ಯೆಗಳು ಎದುರಾಗದಿರಲಿ. ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ದುರ್ಗ ಸಪ್ತಶತಿ ಪಾರಾಯಣ ಮೂಲಕ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ನುಡಿದರು.

ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಭಕ್ತವೃಂದದಿಂದ ಏರ್ಪಡಿಸಲಾಗಿದ್ದ ಕ್ಷೇತ್ರದ ಅಭಿವೃದ್ಧಿಗೆ ದುರ್ಗ ಸಪ್ತಶತಿ ಪಾರಾಯಣದಲ್ಲಿ ಅವರು ಮಾತನಾಡಿದರು.

ನವದುರ್ಗೆಯರ ಆರಾಧನೆಯಲ್ಲಿ ವಿಶಿಷ್ಟವಾದ ಶಕ್ತಿ ಇದೆ. ನಮ್ಮಲ್ಲಿರುವ ದುರ್ಗುಣಗಳು ನಾಶವಾಗಿ ಒಳ್ಳೆಯ ಗುಣಗಳು ವೃದ್ಧಿಸಲಿ. ಎಲ್ಲರ ಬದುಕು ಒಳ್ಳೆಯದಾಗಲಿ ಎಂಬುದು ನವರಾತ್ರಿ ಆಚರಣೆ ಉದ್ದೇಶ. ಎಲ್ಲರಿಗೂ ಒಳಿತನ್ನು ಬಯಸುತ್ತೇನೆ ಎಂದರು.

ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಶ್ರೀ ಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿನಯ್ ಗುರೂಜಿ ಅವರು ಸಭಾಭವನದ ಮಾಲೀಕ ಶಿವಕುಮಾರ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.

ಭಕ್ತವೃಂದದ ಪ್ರಮುಖರಾದ ಬಿ.ಮೂರ್ತಿ, ಎಂ.ಎಸ್. ರವಿ, ವೈ.ನಟರಾಜ್, ಬಿ.ಎಸ್. ಬಸವೇಶ್, ರವಿಕುಮಾರ್ ಇನ್ನಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟಗಿರಿ ವಂದಿಸಿದರು.

- - - (** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-ಡಿ19ಬಿಡಿವಿಟಿ:

ದುರ್ಗ ಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ದೀಪ ಬೆಳಗಿಸಿ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಶಿವಕುಮಾರ್, ಬಿ.ಮೂರ್ತಿ, ಎಂ.ಎಸ್. ರವಿ, ವೈ.ನಟರಾಜ್ ಇತರರು ಇದ್ದರು.