ಹೊಸ ಸಾಹಿತ್ಯ ವಾಸ್ತವತೆ ತೆರೆದಿಡಲಿ: ಬಿಜೆಪಿ ಮುಖಂಡ ಎಚ್‌.ಆರ್.ಅರವಿಂದ್

| Published : Sep 23 2024, 01:29 AM IST

ಸಾರಾಂಶ

ಹಿಂದಿನ ಸಾಹಿತ್ಯ-ಸಾಹಿತಿಗಳು ವಾಸ್ತವತೆಯನ್ನು ಕಟ್ಟಿಕೊಟ್ಟಿದ್ದರ ಪರಿಣಾಮ ಸಾಕಷ್ಟು ಸಂಚಲನ ಮೂಡಿಸಿದೆ, ಹೊಸ ತಲೆಮಾರಿಗೆ ಅಂದಿನ ಬದುಕು-ಬವಣೆ ಬಿತ್ತರಿಸಿಕೊಂಡಿದೆ, ಸಾಹಿತ್ಯ ತರೆದ ಪುಸ್ತಕವಾಗಿರಬೇಕು, ಮುಂದಿನ ಪೀಳಿಗೆಗೆ ಹೊಸ ಚೈತನ್ಯ ನೀಡವಂತಿರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿನ ಸಾಹಿತ್ಯ ಕ್ಷೇತ್ರ ವಾಸ್ತವತೆಯನ್ನು ತೆರೆದಿಡಬೇಕಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಹೇಳಿದರು.

ನಗರದಲ್ಲಿರುವ ಸೇವಾಕಿರಣ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಇವರು ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ಮಟ್ಟದ ೩೧ನೇ ‘ಕಲ್ಪನಾ ಲಹರಿ’ ಕವನ ಸಂಕಲನ ಬಿಡುಗಡೆ ಮತ್ತು ೩೨ನೇ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನೆ ಹಾಗೂ ಅಂಕವೀರ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದಿನ ಸಾಹಿತ್ಯ-ಸಾಹಿತಿಗಳು ವಾಸ್ತವತೆಯನ್ನು ಕಟ್ಟಿಕೊಟ್ಟಿದ್ದರ ಪರಿಣಾಮ ಸಾಕಷ್ಟು ಸಂಚಲನ ಮೂಡಿಸಿದೆ, ಹೊಸ ತಲೆಮಾರಿಗೆ ಅಂದಿನ ಬದುಕು-ಬವಣೆ ಬಿತ್ತರಿಸಿಕೊಂಡಿದೆ, ಸಾಹಿತ್ಯ ತರೆದ ಪುಸ್ತಕವಾಗಿರಬೇಕು, ಮುಂದಿನ ಪೀಳಿಗೆಗೆ ಹೊಸ ಚೈತನ್ಯ ನೀಡವಂತಿರಬೇಕು ಎಂದು ನುಡಿದರು.

ಇಂದು ಕಲ್ಪನಾ ಲಹರಿ ಕೃತಿ ಬಿಡುಗಡೆಗೊಂಡಿದೆ. ಹೊಸ ಕವಿತೆ-ಕವನಗಳು ಮುದ್ರತಗೊಂಡಿವೆ. ಹೊಸ ಕವಿಗಳಿಗೆ ಬರಹಗಾರರಿಗೆ ಸಂತೋಷವಾಗುತ್ತದೆ. ವೇದಿಕೆಯಿಂದ ಕೃತಿ ಜನರ ಕೈಸೇರಿದೆ ಎಂಬ ಉಲ್ಲಾಸ ಹಂಚಿಕೆಯಾಗುತ್ತಿದೆ ಎಂದರು.

ಸಾಹಿತಿಗಳ ಸಾಹಿತ್ಯದಿಂದ ಹೊಸ ಸಮಾಜ ಕಟ್ಟಲಿಕ್ಕೆ ಪ್ರೇರಣೆಯಾಗಬೇಕು, ಗಟ್ಟಿತನದ ಸಾಹಿತ್ಯ ಬರಹಗಾರರಿಂದ ಬರಬೇಕು, ಹೊಸ ಮನ್ವಂತರ ಸೃಷ್ಟಿಸುವ ತಕ್ಕತ್ತಿನ ಸಾಲುಗಳು ರಚಿತಗೊಳ್ಳಲಿ, ಹೊಲಸು ರಾಜಕೀಯ, ರಾಜಕಾರಣವನ್ನು ನೈಜ್ಯತೆಯಿಂದ ಚಿತ್ರಿಸುವ ನೈಪುಣ್ಯತೆ ಸಾಹಿತಿಗಳಲ್ಲಿ ಬೆಳೆಯಲಿ ಎಂದರು.

ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ ಮತ್ತು ಉಪನ್ಯಾಸಕ ಈ.ಗಂಗೆಗೌಡ ಭಾಗಿಯಾಗಿದ್ದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕವಿಗಳು ಕವನ -ಕವಿತೆ ವಾಚಿಸಿದರು. ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷ ಎಂ.ಪಿ ಅರುಣ್ ಕುಮಾರ್, ಕ.ಸಿ.ವೇ.ರಾಜ್ಯಾಧ್ಯಕ್ಷ ಪೋತೇರಮಹದೇವು, ಸಾಹಿತಿ ಜಿ.ರಾಧಾಕೃಷ್ಣವೈದ್ಯ, ವಕೀಲ ಎಂ. ಗುರುಪ್ರಸಾದ್, ರಾಜ್ಯ ಉಪಾಧ್ಯಕ್ಷೆ ಮಂಜುಳಾ, ಹಾವೇರಿ ನಾಗರಾಜು, ಸೈಲಜ ಕೋರಿಶೆಟ್ಟರ್ ಸೇರಿದಂತೆ ಹಲವರು ಹಾಜರಿದ್ದರು.