ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಲಿ-ಮಾಜಿ ಶಾಸಕ ಪೂಜಾರ

| Published : Feb 01 2025, 12:01 AM IST

ಸಾರಾಂಶ

ಸಮಾಜಮುಖಿ ಕಾರ್ಯಗಳಲ್ಲಿ ಸಂಘ, ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ರಾಣಿಬೆನ್ನೂರು: ಸಮಾಜಮುಖಿ ಕಾರ್ಯಗಳಲ್ಲಿ ಸಂಘ, ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ನಗರದ ದೈವಜ್ಞ ಸಮುದಾಯ ಭವನದಲ್ಲಿ ಬುಧವಾರ ರಾತ್ರಿ ಜೆಸಿಐ (ಜ್ಯೂನಿಯರ್ ಛೇಂಬರ್ ಇಂಟರ್‌ನ್ಯಾಶನಲ್) ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸೇವಾ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜೆಸಿಐ ಸಂಸ್ಥೆಯು ಜನರಲ್ಲಿ ಪರಿಸರ ಜಾಗೃತಿ, ರಕ್ತದಾನ ಶಿಬಿರ, ತರಬೇತಿ ಶಿಬಿರ ಕೈಗೊಂಡಿರುವುದು ಶ್ಲಾಘನೀಯ. ಇದಲ್ಲದೆ ಅನೇಕ ಮಹಿಳೆಯರಿಗೆ ಹೊಲಿಗೆ ತರಬೇತಿ ಶಿಬಿರದ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿರುವುದು ಮಾದರಿಯಾಗಿದೆ ಎಂದರು.

ವಲಯ ಉಪಾಧ್ಯಕ್ಷ ಮಧುಸೂದನ ನವಡ ಮಾತನಾಡಿ, ಜೀವ ನಮ್ಮ ಮಾತು ಕೇಳುವುದಿಲ್ಲ, ಬದಲಾಗಿ ಜೀವನ ನಮ್ಮ ಮಾತು ಕೇಳುತ್ತದೆ. ಈ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಜೆಸಿಐ ಸಂಸ್ಥೆ ದಾರಿದೀಪವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದರು.

ನಿಕಟಪೂರ್ವ ಅಧ್ಯಕ್ಷ ಕೆ. ಶಿವಶಂಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ಜೆಸಿಐ ಘಟಕದ 2025ನೇ ವರ್ಷದ ನೂತನ ಪದಾಧಿಕಾರಿಗಳಿಗೆ ಜೆಎಸಿ ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ವಲಯ ಉಪಾಧ್ಯಕ್ಷ ಮಧುಸೂದನ ನವಡ ಹಾಗೂ ಜೆಸಿಐ ವಲಯ-24ರ ಅಧ್ಯಕ್ಷ ಗೌರೀಶ ಭಾರ್ಗವ ಪ್ರಮಾಣ ವಚನ ಬೋಧಿಸಿದರು.

ನೂತನ ಅಧ್ಯಕ್ಷ ಕುಮಾರ ಎಸ್. ಬೆಣ್ಣಿ, ಉಪಾಧ್ಯಕ್ಷ ಅಶೋಕ ದುರ್ಗದಶೀಮಿ, ಚಂದನ ಹಿತ್ತಲಮನಿ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ಆಕರ್ಷ ಬಸ್ಮಾಂಗಿಮಠ, ವಿನಾಯಕ ಗುಲಗಂಜಿ, ರೇಖಾ ಬೆಣ್ಣಿ, ಕಾರ್ಯದರ್ಶಿ ಇಮ್ರಾನ್ ನೀಲಗಾರ, ಸಹ ಕಾರ್ಯದರ್ಶಿ ವಿನಾಯಕ ಯಕನಹಳಿ, ಖಜಾಂಚಿ ವಿದ್ಯಾಧರ ಹಲಗೇರಿ, ತಾಂತ್ರಿಕ ವಿಭಾಗದ ಮಂಜುನಾಥ ಹೊಸಪೇಟೆ, ಮಲ್ಲಿಕಾರ್ಜುನ ತಾವರಗೊಂದಿ, ನಾರಾಯಣ ಪವಾರ, ನಾಗರಾಜ ಬೆಣ್ಣಿ, ವಿಜಯ ಮಾಳೋದೆ, ರೂಪಾ ಕಾಕಿ, ಆಕಾಶ ಕೊಟ್ಟೂರ, ಲಕ್ಷ್ಮೀ ಕಾಕಿ, ರೇಖಾ ಬೆಣ್ಣಿ, ಅಂಕಿತಾ ಕಾಕಿ ಅಧಿಕಾರ ಸ್ವೀಕಾರ ಮಾಡಿದರು.

ಶ್ರೀನಿವಾಸ ಕಾಕಿ, ಲಕ್ಷ್ಮೀ ಅಡಕಿ, ವಿ.ಎಸ್. ಹಿರೇಮಠ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಆರ್.ವಿ. ಪಾಟೀಲ, ಗಣೇಶ ದೇವಗಿರಿಮಠ, ಭೋಜರಾಜ ಗುಲಗಂಜಿ, ಲಕ್ಷ್ಮೀ ಶಿವಶಂಕರ, ರೂಪಾ ಕಾಕಿ, ಲಕ್ಷ್ಮೀ ಎಸ್., ಸಿದ್ದಪ್ಪ ಅತಡಕರ, ಕೊಟ್ರೇಶಪ್ಪ ಎಮ್ಮಿ, ಶಿವಪ್ಪ ಗುರಿಕಾರ, ಸಂಜೀವ ಶಿರಹಟ್ಟಿ ಮತ್ತಿತರರಿದ್ದರು.