ಯುವಕ-ಯುವತಿಯರ ದೈಹಿಕ ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮುಧೋಳ ರನ್ನ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಪುರುಷ್ ಮತ್ತು ಮಹಿಳೆಯರ ಆಧುನಿಕ ಹೊರಾಂಗಣ ಜಿಮ್‌ನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ವಿಶೇಷವಾಗಿ ಯುವ ಜನತೆಗೆ ಹೊರಾಂಗಣ ಜಿಮ್ ಇದು ಬಹಳಷ್ಟು ಉಪಯುಕ್ತವಾಗಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಯುವಕ-ಯುವತಿಯರ ದೈಹಿಕ ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮುಧೋಳ ರನ್ನ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಪುರುಷ್ ಮತ್ತು ಮಹಿಳೆಯರ ಆಧುನಿಕ ಹೊರಾಂಗಣ ಜಿಮ್‌ನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ವಿಶೇಷವಾಗಿ ಯುವ ಜನತೆಗೆ ಹೊರಾಂಗಣ ಜಿಮ್ ಇದು ಬಹಳಷ್ಟು ಉಪಯುಕ್ತವಾಗಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲೂಕು ಆಡಳಿತ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ವತಿಯಿಂದ ಮಂಗಳವಾರ ನಗರದ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಪುರುಷ ಮತ್ತು ಮಹಿಳೆಯರ ಹೊರಾಂಗಣ ಜಿಮ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ₹12 ಲಕ್ಷ ಅಂದಾಜು ಮೊತ್ತದಲ್ಲಿ ಬಾಗಲಕೋಟೆ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾದ ಈ ಜಿಮ್, ಸ್ಥಳೀಯ ಪುರುಷ್ ಮತ್ತು ಮಹಿಳೆಯರಿಗೆ ವ್ಯಾಯಾಮಕ್ಕೆ ಹೆಚ್ಚು ಅನುಕೂಲ ಕಲ್ಪಿಸಲಿದೆ ಎಂದರು.ಡಾ.ವಿ.ಎನ್.ನಾಯ್ಕ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ರಾಘು ಮೊಕಾಶಿ, ನಗರಸಭೆ ಮಾಜಿ ಅಧ್ಯಕ್ಷೆ ಸುನಂದಾ ತೇಲಿ, ಪ್ರಕಾಶ ಅನೆಪ್ಪನವರ, ಸಿದ್ದು ರಾಮತೀರ್ಥ, ರಾಜು ಟಂಕಸಾಲಿ, ಅಶೋಕ ಗಂಗಣ್ಣವರ, ಕೆ.ವಿ. ಪಾಟೀಲ, ಉದಯಸಿಂಗ ಪಡತಾರೆ, ಸಿದ್ದು ಸೂರ್ಯವಂಶಿ, ಬಸವರಾಜ ಬಂಡಿ, ಹನಮಂತ ತೇಲಿ, ಅಶೋಕ ಗವರೋಜಿ ಹಾಗೂ ಮುಧೋಳ ನಗರಸಭೆ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು, ಅಧಿಕಾರಿಗಳು ಇದ್ದರು.ಜಿಮ್ ಉಪಕರಣಗಳ ಗುಣಮಟ್ಟ ಪರಿಶೀಲಿಸಿ ಗರಂ ಆದ ಸಚಿವ ತಿಮ್ಮಾಪೂರ
ಜಿಮ್ ಉದ್ಘಾಟಿಸಲು ಆಗಮಿಸಿದ್ದ ಸಚಿವರು ಉದ್ಘಾಟನೆಯ ಮೊದಲು ಜಿಮ್ ಉಪಕರಣಗಳ ಗುಣಮಟ್ಟವನ್ನು ಪರಿಶೀಲಿಸಿದಾಗ ತೀರಾ ಕಳಪೆ ಮಟ್ಟದ ಉಪಕರಣ ಅಳವಡಿಸಿದ್ದನ್ನು ಗಮನಿಸಿದ ಸಚಿವರು, ಕಳಪೆ ಮಟ್ಟದ ಉಪಕರಣಗಳನ್ನು ಅಳವಡಿಸಿರುವುದನ್ನು ಕಂಡು ಸಚಿವರು ತೀವ್ರ ಅಸಮಾಧಾನಗೊಂಡು ಸಂಬಂಧಿಸಿದವರಿಗೆ ತರಾಟೆಗೆ ತೆಗೆದುಕೊಂಡರು. ಒಳ್ಳೆಯ ಗುಣಮಟ್ಟದ ಉಪಕರಣಗಳನ್ನು ಅಳವಡಿಸಿದರೇ ಮಾತ್ರ ತಾವು ಉದ್ಘಾಟಿಸುವುದಾಗಿ ತಿಳಿಸಿದಾಗ ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಈಗಿರುವ ಉಪಕರಣಗಳನ್ನು ತಕ್ಷಣವೇ ತೆಗೆದು ಒಳ್ಳೆಯ ಗುಣಮಟ್ಟದ ಉಪಕರಣಗಳನ್ನು ಹಾಕುವುದಾಗಿ ಭರವಸೆ ನೀಡಿದ ಬಳಿಕವೇ ಉದ್ಘಾಟನೆಗೆ ಸಚಿವರು ಮುಂದಾದರು. ಗುಣಮಟ್ಟದ ಉಪಕರಣಗಳನ್ನು ಅಳವಡಿಸಿದ ನಂತರವೇ ಗುತ್ತಿಗೆದಾರರ ಬಿಲ್ ಪಾವತಿಸುವಂತೆ ತಿಳಿಸಿ ಹೊರಾಂಗಣ ಜಿಮ್ ಉದ್ಘಾಟನೆ ನೆರವೇರಿಸಿದರು.ಸಾರ್ವಜನಿಕರು ಈ ಹೊರಾಂಗಣ ಜಿಮ್ ಸೌಲಭ್ಯವನ್ನು ಮಕ್ಕಳು ಮತ್ತು ಯುವಕರು ಸೇರಿದಂತೆ ಎಲ್ಲ ವಯಸ್ಸಿನವರು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಸರ್ಕಾರಿ ಆಸ್ತಿಯಾದ ಈ ಸಾಮಗ್ರಿ ಗಳನ್ನು ಎಲ್ಲರೂ ಜವಾಬ್ದಾರಿಯುತವಾಗಿ ಸಂರಕ್ಷಣೆ ಕೂಡಾ ಮಾಡಬೇಕು.
-ಆರ್.ಬಿ.ತಿಮ್ಮಾಪೂರ, ಅಬಕಾರಿ ಹಾಗೂ ಜಿಲ್ಲಾ ಸಚಿವರು.