ಪೋಷಕರು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲಿ

| Published : Dec 15 2023, 01:30 AM IST

ಸಾರಾಂಶ

ಜಿಲ್ಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಜಾತಿಯನ್ನು ಎಣಿಸದೇ ನೀತಿಯನ್ನು ಮೈಗೂಡಿಸಕೊಂಡು ಎಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ವೀರಶೈವರು ಮುಂಚೂಣಿಯಲ್ಲಿದ್ದಾರೆ

ಕುರುಗೋಡು:

ಮಕ್ಕಳಿಗೆ ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ವಾಮದೇವ ಶಿವಾಚಾರ್ಯ ಶ್ರೀ ಸಲಹೆ ನೀಡಿದರು.

ಸಮೀಪದ ಕುಡುತಿನಿಯ ಹರಗಿನಡೋಣಿ ಬಸವನಗೌಡ ಸಂಯುಕ್ತ ಪದವಿಪೂರ್ವ ಕಾಲೇಜಿನ ಬೆಳ್ಳಿ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಜಾತಿಯನ್ನು ಎಣಿಸದೇ ನೀತಿಯನ್ನು ಮೈಗೂಡಿಸಕೊಂಡು ಎಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ವೀರಶೈವರು ಮುಂಚೂಣಿಯಲ್ಲಿದ್ದಾರೆ ಎಂದು ಬಣ್ಣಿಸಿದರು.

ಬಳ್ಳಾರಿಯ ಕಲ್ಯಾಣ ಸ್ವಾಮಿಯವರು ಸಾನ್ನಿಧ್ಯ ವಹಿಸಿ ಮಾತನಾಡಿ, ಅನ್ನ, ಅಕ್ಷರ, ಆಶ್ರಯ ನೀಡುವ ಕಾಯಕದಲ್ಲಿ ತೊಡಗಿರುವುದು ವೀರಶೈವ ಸಮಾಜದ ಮಠ- ಮಂದಿರಗಳು ಮಾತ್ರ ಎನ್ನುವುದು ವಿಶೇಷ ಎಂದರು.

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಎಚ್.ಎಂ. ಗುರುಸಿದ್ದಯ್ಯಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರಗಿನಡೋಣಿ ಬಸವನಗೌಡ ಸಂಯುಕ್ತ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚಿ ರಾಜಶೇಖರಗೌಡ ಮಾತನಾಡಿದರು. ಕಲಾವಿದ ಅಮಾತಿ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಜಿ. ವೀರನಗೌಡ, ಗೋಟೂರು ಜಂಬಣ್ಣ, ಗುತ್ತಿಗೆದಾರ ಹೀರೇಂದ್ರಪ್ರಸಾದ್, ಅರವಿ ಬಸವನಗೌಡ, ಪ್ಯಾರಂ ಹನುಮಂತಪ್ಪ, ಮೇಟಿ ಎರ್ರೆಪ್ಪ, ದಾಸರ ಶೇಷಪ್ಪ, ಏಕಾಂಬರಪ್ಪ, ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ, ಮುಖ್ಯಗುರು ಬಸವರಾಜ, ಸಂಚಾಲಕ ಎಚ್. ತಿಮ್ಮಾರೆಡ್ಡಿ ಇತರರು ಇದ್ದರು.